ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಸಿರಿಗನ್ನಡಂ ಗೆಲ್ಗೆ ಸೇರಿಸಲು ಮನವಿ

ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಕನ್ನಡ ಲಿಪಿಯಲ್ಲಿ ಸಿರಿಗನ್ನಡಂ ಗೆಲ್ಗೆ ಸೇರಿಸಲು ರಾಜ್ಯಸಭಾ ಸದಸ್ಯರಾದ ಬಿಸಿ ಚಂದ್ರಶೇಖರ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Written by - Manjunath N | Last Updated : Jun 3, 2023, 10:02 PM IST
  • "ನಮ್ಮ ಈ ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಕನ್ನಡ ಲಿಪಿ ಎಲ್ಲಯೂ ಕೂಡ ಉಪಯೋಗಿಸಿಲ್ಲ.
  • ಅದೇ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಲಾಂಛನಗಳಲ್ಲಿ ಅವರ ರಾಜ್ಯ ಭಾಷೆಗಳ ಉಪಯೋಗ ಮಾಡಿದ್ದಾರೆ.
  • ಇದೇ ರೀತಿ ಕರ್ನಾಟಕ ಸರ್ಕಾರದ ಲಾಂಛನದಲ್ಲೂ ಕನ್ನಡ ಲಿಪಿಯು ಇರಬೇಕು ಎಂದು ವಿವಿಧ ಕನ್ನಡ ಪರ ಹೋರಾಟಗಾರರು, ವಿದ್ಯಾರ್ಥಿಗಳು ಹಾಗು ಸಂಘಟನೆಗಳ ಮನವಿಯಾಗಿದೆ.
ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಸಿರಿಗನ್ನಡಂ ಗೆಲ್ಗೆ ಸೇರಿಸಲು ಮನವಿ title=
file photo

ಬೆಂಗಳೂರು: ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಕನ್ನಡ ಲಿಪಿಯಲ್ಲಿ ಸಿರಿಗನ್ನಡಂ ಗೆಲ್ಗೆ ಸೇರಿಸಲು ರಾಜ್ಯಸಭಾ ಸದಸ್ಯರಾದ ಬಿಸಿ ಚಂದ್ರಶೇಖರ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಬಿಸಿ ಚಂದ್ರಶೇಖರ್  "ದೇಶದ ಬಹುತೇಕ ರಾಜ್ಯಗಳಂತೆಯೇ ಕರ್ನಾಟಕ ಸರ್ಕಾರವೂ ವಿಶಿಷ್ಟ ಹಾಗೂ ಕರ್ನಾಟಕ ಸಂಸ್ಕೃತಿಯನ್ನು ಜಂಟಿಸುವ ಲಾಂಛನ ಹೊಂದಿದ್ದು, ಕರ್ನಾಟಕ ಸರ್ಕಾರದ ಲಾಂಛನವನ್ನು ಭಾರತದ ಲಾಂಛನದಲ್ಲಿರುವ ಅಶೋಕ ಸ್ಥಂಭದ ಭಾಗ ಮತ್ತು ಮೈಸೂರು ರಾಜ್ಯದ ಲಾಂಛನದ ಭಾಗವನ್ನು ಒಗ್ಗೂಡಿಸಿ ರೂಪಿಸಲಾಗಿದೆ. ನಂತರ ಸತ್ಯಮೇವ ಜಯತೆ ವಾಕ್ಯ ದೇವನಾಗರಿ ಲಿಪಿಯಲ್ಲಿ ಇದೆ" ಎಂದು ಅವರು ಹೇಳಿದ್ದಾರೆ.

"ನಮ್ಮ ಈ ಕರ್ನಾಟಕ ಸರ್ಕಾರದ ಲಾಂಛನದಲ್ಲಿ ಕನ್ನಡ ಲಿಪಿ ಎಲ್ಲಯೂ ಕೂಡ ಉಪಯೋಗಿಸಿಲ್ಲ. ಅದೇ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಲಾಂಛನಗಳಲ್ಲಿ ಅವರ ರಾಜ್ಯ ಭಾಷೆಗಳ ಉಪಯೋಗ ಮಾಡಿದ್ದಾರೆ. ಇದೇ ರೀತಿ ಕರ್ನಾಟಕ ಸರ್ಕಾರದ ಲಾಂಛನದಲ್ಲೂ ಕನ್ನಡ ಲಿಪಿಯು ಇರಬೇಕು ಎಂದು ವಿವಿಧ ಕನ್ನಡ ಪರ ಹೋರಾಟಗಾರರು, ವಿದ್ಯಾರ್ಥಿಗಳು ಹಾಗು ಸಂಘಟನೆಗಳ ಮನವಿಯಾಗಿದೆ. ಕನ್ನಡ ಅಪಿಯಲ್ಲಿ "ಸಿಲಿಗನ್ನಡಂ ಗೆಲ್ಲೆ' ಎಂದು ಉಪಯೋಗಿಸುವುದು ಸೂಕ್ತ ಎಂಬುದು ನನ್ನ ಅನಿಸಿಕೆಯಾಗಿದೆ. ಕನ್ನಡ ಪ್ರೇಮಿಯಾಗಿರುವ ನೀವು ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ತಜ್ಞರ ಸಮಿತಿ ರಚಿಸಿ ಇದಕ್ಕೆ ಸೂಕ್ತ ಲೀತಿಯಲ್ಲಿ ಈ ಮನವಿಗೆ ಪರಿಹಾರ ನೀಡುತ್ತಿರಿ ಎಂದು ಆಶಿಸುತ್ತೇನೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News