ಸೆ.18ರಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಾ.ರಾ. ಮಹೇಶ್, ಕಾರಣ ಏನು ಗೊತ್ತಾ?

ಅನರ್ಹ ಶಾಸಕ ಹೆಚ್. ವಿಶ್ವನಾಥ್ ವಿರುದ್ಧ ಕಿಡಿಕಾರಿದ ಸಾ.ರಾ. ಮಹೇಶ್.

Last Updated : Oct 16, 2019, 01:20 PM IST
ಸೆ.18ರಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಾ.ರಾ. ಮಹೇಶ್, ಕಾರಣ ಏನು ಗೊತ್ತಾ? title=
File image

ಮೈಸೂರು: ಅನರ್ಹ ಶಾಸಕ ಹೆಚ್. ವಿಶ್ವನಾಥ್ ನನ್ನ ಮೇಲೆ ಮಾಡಿರುವ ಕೀಳು ಮಟ್ಟದ ಆರೋಪಗಳಿಗೆ ಬೇಸತ್ತು ಸೆಪ್ಟೆಂಬರ್ 18ರಂದೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ತಿಳಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾ.ರಾ. ಮಹೇಶ್, ಹೆಚ್. ವಿಶ್ವನಾಥ್ ಒಳ್ಳೆಯವರಲ್ಲ. ಅವರನ್ನು ನಂಬಬೇಡಿ ಎಂದು ಜಿ.ಟಿ. ದೇವೇಗೌಡರು ಹೇಳಿದ್ದ ಬುದ್ದಿಮಾತನ್ನು ಕೇಳದೆ ತಪ್ಪು ಮಾಡಿದೆ. ವಿಶ್ವನಾಥ್ ಅವರನ್ನು ಪಕ್ಷಕ್ಕೆ ಕರೆತಂದ ಪ್ರತಿಫಲವನ್ನು ಈಗ ಅನುಭವಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.

ಹೆಚ್. ವಿಶ್ವನಾಥ್ ನನ್ನ ಮೇಲೆ ಮಾಡಿದ ಕೀಳು ಮಟ್ಟದ ಆರೋಪದಿಂದ ಬಹಳ ನೋವುಂಟಾಗಿತ್ತು. ಹಾಗಾಗಿ ಸೆ.18ರಂದೇ ಸ್ಪೀಕರ್ ಕಚೇರಿಗೆ ಶಾಸಕ ಸ್ಥಾನಕ್ಕೆ ನನ್ನ ರಾಜೀನಾಮೆ ಪತ್ರ ತಲುಪಿಸಿದ್ದೆ. ಆ ಸಂದರ್ಭದಲ್ಲಿ ಸ್ಪೀಕರ್ ವಿದೇಶದಲ್ಲಿದ್ದರು. ಸ್ಪೀಕರ್ ವಿದೇಶದಿಂದ ಮರಳಿದ ಬಳಿಕ ನನ್ನನು ಮನವೊಲಿಸಿ ಕಳುಹಿಸಿದ್ದರು. ಇನ್ನೂ ಕೂಡ ನನ್ನ ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಯಲ್ಲಿಯೇ ಇದೇ ಎಂದು ಹೇಳಿಕೆ ನೀಡಿದ್ದಾರೆ.

ಸಾ.ರಾ. ಮಹೇಶ್ ಈಸ್ ವೆರಿ ಪಾಯ್ಸನಸ್! ಯಾರನ್ನು ಬೇಕಾದರೂ ಹಾಳು ಮಾಡ್ತಾರೆ: ಎಚ್. ವಿಶ್ವನಾಥ್

ವಿಶ್ವನಾಥ್ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದರು. ಅದೇ ಪಕ್ಷದ ಹಿರಿಯ ನಾಯಕ ಎಸ್. ಎಂ.ಕೃಷ್ಣ ಅವರ ಬಗ್ಗೆ ಪುಸ್ತಕವನ್ನೇ ಬರೆದಿದ್ದರು. ಒಂದು ಬಾರಿ ಶಾಸಕನನ್ನಾಗಿ ಮಾಡಿ ಎಂದು ಹೆಚ್.ಡಿ.ದೇವೇಗೌಡರ ಮುಂದು ಕೈ ಮುಗಿದಿದ್ದರು. ಈಗ ಅವರಿಗೇ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.

'ಸೆಕ್ಸ್‌ಟಾಕ್‌' ನಡೆಸಿದ್ರಾ ಹಳ್ಳಿಹಕ್ಕಿ!

ಯಾವುದೇ ಆಮಿಷಕ್ಕೆ ಒಳಗಾಗಿಲ್ಲ ಎಂದು ಪ್ರಮಾಣ ಮಾಡಲಿ:
ಇದೇ ವೇಳೆ ನಾಳೆ ಬೆಳಿಗ್ಗೆ 9 ಗಂಟೆಗೆ ನಾನು ಚಾಮುಂಡಿ ಬೆಟ್ಟದಲ್ಲಿ ಇರುತ್ತೇನೆ. ನನ್ನಿಂದ ಅವರ ಕುಟುಂಬಸ್ಥರಾಗಲೀ, ಅವರಾಗಲೀ ಹಣ ಪಡೆದಿಲ್ಲ. ಯಾವುದೇ ಆಸೆ, ಆಮಿಷಕ್ಕೆ ಒಳಗಾಗಿಲ್ಲ ಎಂದು ವಿಶ್ವನಾಥ್ ಅವರು ಬಂದು ಆ ತಾಯಿಯ ಮುಂದೆ ಪ್ರಮಾಣ ಮಾಡಲಿ ಎಂದು ಸಾ.ರಾ. ಮಹೇಶ್ ಸವಾಲು ಹಾಕಿದ್ದಾರೆ.
 

Trending News