ಬೆಂಗಳೂರು : ಕೆಲ ದಿನಗಳಿಂದ ಬಿಜೆಪಿಯಲ್ಲಿ ಆಂತರಿಕ ಕದನ ಕಾಣಿಸಿದ್ದು,ಬಹಿರಂಗ ಹೇಳಿಕೆಗಳು ಮತ್ತು ಚುನಾವಣಾ ಸಮಯದಲ್ಲಿನ ದೂರುಗಳ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಕರೆದು ಮಾತಾನ್ನಾಡಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲರಿಗೂ ಅಸಮಾಧಾನ ಬಗ್ಗೆ ಬಹಿರಂಗ ಚರ್ಚೆ ಬೇಡ ಎಂದು ಎಚ್ಚರಿಕೆ ಕೊಡಲಾಗಿದೆ. ಸಂಸದ ಪ್ರತಾಪಸಿಂಹ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್. ಮುನಿರಾಜು, ಮಾಜಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎ.ಎಸ್. ಪಾಟೀಲ್ ನಡಹಳ್ಳಿ, ವೀರಣ್ಣ ಚರಂತಿಮಠ, ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ಅವರಿಗೆ ಇಂದು ಸಭೆಗೆ ಕರೆಯಲಾಗಿದೆ. ಈ ಪೈಕಿ ಮಾಜಿ ಸಚಿವ ರೇಣುಕಾಚಾರ್ಯ ಗೈರಾದರು.
ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ ತಮ್ಮೇಶ್ ಗೌಡ ಅವರಿಗೆ ಮತ್ತೆ ಬಹಿರಂಗ ಹೇಳಿಕೆ ನೀಡದಂತೆ ಖಡಕ್ ಸೂಚನೆ ನೀಡಲಾಗಿದೆ. ಸಭೆ ಮುಗಿಸಿ ಹೊರಗೆ ಬಂದ ತಮ್ಮೇಶ್ ಗೌಡ,ಮಾಧ್ಯಮದ ಮುಂದೆ ಬಾರದೆ ಯಾವುದೇ ಹೇಳಿಕೆ ನೀಡದೆ ಹೊರನಡೆದರು. ಚುನಾವಣೆ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಮುನೇಂದ್ರ ಕುಮಾರ್ ನನ್ನ ಸೋಲಿಗೆ ಕಾರಣ ಎಂದು ಆರೋಪ ಮಾಡಿದ್ದರು.
ಹೊರಗೆ ಬರುವಾಗ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಹೊರಟ ಯತ್ನಾಳ್,ವಿಜಯಪುರ, ಬಾಗಲಕೋಟೆ ಬಿಜೆಪಿ ನಾಯಕರ ಆರೋಪಕ್ಕೆ ಸಮಜಾಯಿಷಿ ಕೊಟ್ಟರು.ನನ್ನ ಭಾಷಣದಲ್ಲಿ ಆಡಿರುವ ಮಾತು ಯಾವುದಾದರೂ ಪಕ್ಷದ ವಿರುದ್ದ ಇದೆಯಾ.? ರೆಕಾರ್ಡ್ ಗಳನ್ನು ತರಿಸಿಕೊಂಡು ನೋಡಿ.ನಾನು ಯಾರನ್ನು ಸೋಲಿಸಲು ಕೆಲಸ ಮಾಡಿಲ್ಲ,ಇನ್ನೂ ನನ್ನನ್ನೇ ಸೋಲಿಸಲು ಪ್ರಯತ್ನ ಪಟ್ಟಿದ್ಸಾರೆ.ಇವಾಗ ನನ್ನ ವಿರುದ್ಧ ಆರೋಪ ಮಾಡ್ರಿರೋರೇ ನನ್ನನ್ನು ಸೋಲಿಸುವ ಪ್ರಯತ್ನ ಮಾಡಿದ್ದಾರೆ.ಆದರೆ ನಾನು ಸ್ಥಳೀಯ ವಾಗಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ನಾನು ಅಂದರೆ ಬಿಜೆಪಿ, ಬಿಜೆಪಿ ಅಂದರೆ ನಾನು,ನಾನು ಒಬ್ಬ ಬಿಜೆಪಿಯ ಶಿಸ್ತಿನ ಸಿಪಾಯಿ.ನಾನು ಯಾರ ವಿರುದ್ದವೇ ಆಗಲಿ, ಪಕ್ಷದ ವಿರುದ್ದವೇ ಆಗಲಿ ಮಾತಾಡಿಲ್ಲ ಎಂದು ಸಮಜಾಯಿಷಿ ನೀಡಿರುವುದಾಗಿ ಕಚೇರಿ ಹೊರಗೆ ಮಾಧ್ಯಮದವರಿಗೆ ತಿಳಿಸಿದರು.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಯಡಿ 8 ಕೆಜಿ ಅಕ್ಕಿ ಜೊತೆಗೆ 2 ಕೆಜಿ ರಾಗಿ/ಜೋಳ ವಿತರಣೆ: ಸಚಿವ ಮುನಿಯಪ್ಪ
ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿ,ಕಟೀಲ್ ಗೆ ಯತ್ನಾಳ್ ಸ್ಪಷ್ಟನೆ ಕೊಡುವ ವೇಳೆ ಉಪಸ್ಥಿತಿರಿದ್ದ ಮಾಜಿ ಸಿಎಂ ಬಿಎಸ್ವೈ.ಯತ್ನಾಳ್ ಮಾತಾಡ್ತಿರೋದನ್ನು ಬರೀ ಸಮಚಿತ್ತವಾಗಿ ಕೇಳುತ್ತಾ ಸುಮ್ಮನೆ ಕುಳಿತಿದ್ದರು.ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟೀಕರಣ ನೀಡಿ ಹೊರಗೆ ಬರುವಾಗ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಿದರು.
ಸಭೆಯಲ್ಲಿ ಬಹಿರಂಗ ಹೇಳಿಕೆ ನೀಡಿದವರು ಮತ್ತು ದೂರು ನೀಡಿದವರ ಜೊತೆ ಚರ್ಚೆ ನಡೆಸಲಿರುವ ಮಾಜಿ ಸಿಎಂಗಳಾದ ಯಡಿಯೂರಪ್ಪ, ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷ ನಾಯಕ ಸ್ಥಾನ ಬಗ್ಗೆ ಚರ್ಚೆ ನಡೆಯಬಹುದು ಎನ್ನಲಾಗಿದೆ.
ಕೆಲ ದಿನಗಳಿಂದ ಬಿಜೆಪಿಯಲ್ಲಿ ಆಂತರಿಕ ಕದನ ಕಾಣಿಸಿದ್ದು,ಬಹಿರಂಗ ಹೇಳಿಕೆಗಳು ಮತ್ತು ಚುನಾವಣಾ ಸಮಯದಲ್ಲಿನ ದೂರುಗಳ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಕರೆದು ಮಾತಾನ್ನಾಡಿಸುವ ಕೆಲಸ ಮಾಡಲಾಗುತ್ತಿದೆ. ಎಲ್ಲರಿಗೂ ಅಸಮಾಧಾನ ಬಗ್ಗೆ ಬಹಿರಂಗ ಚರ್ಚೆ ಬೇಡ ಎಂದು ಎಚ್ಚರಿಕೆ ಕೊಡಲಾಗಿದೆ.
ಸಂಸದ ಪ್ರತಾಪಸಿಂಹ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್. ಮುನಿರಾಜು, ಮಾಜಿ ಎಂ.ಪಿ. ರೇಣುಕಾಚಾರ್ಯ, ಶಾಸಕರಾದ ಎ.ಎಸ್. ಪಾಟೀಲ್ ನಡಹಳ್ಳಿ, ವೀರಣ್ಣ ಚರಂತಿಮಠ, ಪರಾಜಿತ ಅಭ್ಯರ್ಥಿ ತಮ್ಮೇಶ್ ಗೌಡ ಅವರಿಗೆ ಇಂದು ಸಭೆಗೆ ಕರೆಯಲಾಗಿದೆ. ಈ ಪೈಕಿ ಮಾಜಿ ಸಚಿವ ರೇಣುಕಾಚಾರ್ಯ ಗೈರಾದರು.
ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದ ತಮ್ಮೇಶ್ ಗೌಡ ಅವರಿಗೆ ಮತ್ತೆ ಬಹಿರಂಗ ಹೇಳಿಕೆ ನೀಡದಂತೆ ಖಡಕ್ ಸೂಚನೆ ನೀಡಲಾಗಿದೆ. ಸಭೆ ಮುಗಿಸಿ ಹೊರಗೆ ಬಂದ ತಮ್ಮೇಶ್ ಗೌಡ,ಮಾಧ್ಯಮದ ಮುಂದೆ ಬಾರದೆ ಯಾವುದೇ ಹೇಳಿಕೆ ನೀಡದೆ ಹೊರನಡೆದರು. ಚುನಾವಣೆ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಮುನೇಂದ್ರ ಕುಮಾರ್ ನನ್ನ ಸೋಲಿಗೆ ಕಾರಣ ಎಂದು ಆರೋಪ ಮಾಡಿದ್ದರು.
ಇದನ್ನೂ ಓದಿ: ಆಸಿಡ್ ದಾಳಿಗೆ ಒಳಗಾಗಿದ್ದ ಸ್ನಾತಕೋತ್ತರ ಪದವೀಧರೆಗೆ ಸಿಎಂ ಸಚಿವಾಲಯದಲ್ಲೇ ಉದ್ಯೋಗ ನೀಡಿದ ಮುಖ್ಯಮಂತ್ರಿ
ಹೊರಗೆ ಬರುವಾಗ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೆ ಹೊರಟ ಯತ್ನಾಳ್,ವಿಜಯಪುರ, ಬಾಗಲಕೋಟೆ ಬಿಜೆಪಿ ನಾಯಕರ ಆರೋಪಕ್ಕೆ ಸಮಜಾಯಿಷಿ ಕೊಟ್ಟರು.ನನ್ನ ಭಾಷಣದಲ್ಲಿ ಆಡಿರುವ ಮಾತು ಯಾವುದಾದರೂ ಪಕ್ಷದ ವಿರುದ್ದ ಇದೆಯಾ.? ರೆಕಾರ್ಡ್ ಗಳನ್ನು ತರಿಸಿಕೊಂಡು ನೋಡಿ.ನಾನು ಯಾರನ್ನು ಸೋಲಿಸಲು ಕೆಲಸ ಮಾಡಿಲ್ಲ,ಇನ್ನೂ ನನ್ನನ್ನೇ ಸೋಲಿಸಲು ಪ್ರಯತ್ನ ಪಟ್ಟಿದ್ಸಾರೆ.ಇವಾಗ ನನ್ನ ವಿರುದ್ಧ ಆರೋಪ ಮಾಡ್ರಿರೋರೇ ನನ್ನನ್ನು ಸೋಲಿಸುವ ಪ್ರಯತ್ನ ಮಾಡಿದ್ದಾರೆ.ಆದರೆ ನಾನು ಸ್ಥಳೀಯ ವಾಗಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.ನಾನು ಅಂದರೆ ಬಿಜೆಪಿ, ಬಿಜೆಪಿ ಅಂದರೆ ನಾನು,ನಾನು ಒಬ್ಬ ಬಿಜೆಪಿಯ ಶಿಸ್ತಿನ ಸಿಪಾಯಿ.ನಾನು ಯಾರ ವಿರುದ್ದವೇ ಆಗಲಿ, ಪಕ್ಷದ ವಿರುದ್ದವೇ ಆಗಲಿ ಮಾತಾಡಿಲ್ಲ ಎಂದು ಸಮಜಾಯಿಷಿ ನೀಡಿರುವುದಾಗಿ ಕಚೇರಿ ಹೊರಗೆ ಮಾಧ್ಯಮದವರಿಗೆ ತಿಳಿಸಿದರು.
ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿ,ಕಟೀಲ್ ಗೆ ಯತ್ನಾಳ್ ಸ್ಪಷ್ಟನೆ ಕೊಡುವ ವೇಳೆ ಉಪಸ್ಥಿತಿರಿದ್ದ ಮಾಜಿ ಸಿಎಂ ಬಿಎಸ್ವೈ.ಯತ್ನಾಳ್ ಮಾತಾಡ್ತಿರೋದನ್ನು ಬರೀ ಸಮಚಿತ್ತವಾಗಿ ಕೇಳುತ್ತಾ ಸುಮ್ಮನೆ ಕುಳಿತಿದ್ದರು.ಬಸನಗೌಡ ಪಾಟೀಲ್ ಯತ್ನಾಳ್ ಸ್ಪಷ್ಟೀಕರಣ ನೀಡಿ ಹೊರಗೆ ಬರುವಾಗ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಆಗಮಿಸಿದರು.
ಸಭೆಯಲ್ಲಿ ಬಹಿರಂಗ ಹೇಳಿಕೆ ನೀಡಿದವರು ಮತ್ತು ದೂರು ನೀಡಿದವರ ಜೊತೆ ಚರ್ಚೆ ನಡೆಸಲಿರುವ ಮಾಜಿ ಸಿಎಂಗಳಾದ ಯಡಿಯೂರಪ್ಪ, ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷ ನಾಯಕ ಸ್ಥಾನ ಬಗ್ಗೆ ಚರ್ಚೆ ನಡೆಯಬಹುದು ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.