ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಸಂಸದ ಬಿ.ವೈ, ರಾಘವೇಂದ್ರ

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೇರೆ ಪ್ರದೇಶಗಳಿಗೆ ವಿಮಾನ ಸಂಚಾರ ಕುರಿತಂತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಂಸದ ಬಿ.ವೈ. ವಿಜಯೆಂದ್ರ,  ಶಿವಮೊಗ್ಗದಿಂದ ಇನ್ನೂ ನಾಲ್ಕು ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಉಡಾನ್ ಯೋಜನೆಯಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

Written by - Yashaswini V | Last Updated : Jun 29, 2023, 04:46 PM IST
  • ಶಿವಮೊಗ್ಗ ವಿಮಾನ ನಿಲ್ದಾಣ ಈಗಾಗಲೇ ಕಾಂಕ್ರಿಟ್​ ಮ್ಯೂಸಿಯ್ ಆಗಿದೆ ಎಂಬ ಮಾತುಗಳು ಜನ ಸಾಮಾನ್ಯರಲ್ಲಿ ಕೇಳಿಬರುತ್ತಿತ್ತು.
  • ಅಂತಹದ್ದೊಂದು ಸಣ್ಣ ಅಸಮಾಧಾನ ಬಂದ ಬೆನ್ನಲ್ಲೆ ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳನ್ನು ಆಹ್ವಾನಿಸಿರುವುದು ಸಂತೋಷದ ವಿಚಾರ ಎಂದು ಸಂಸದ ಬಿ. ವೈ. ರಾಘವೇಂದ್ರರವರು ತಿಳಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಸಂಸದ ಬಿ.ವೈ, ರಾಘವೇಂದ್ರ  title=

ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತೊಂದು ಬ್ರೇಕಿಂಗ್ ನ್ಯೂಸ್​ ಕೊಟ್ಟಿದ್ದಾರೆ. ನಿರೀಕ್ಷೆಯಂತೆಯೇ ಆಗಸ್ಟ್​ 11 ರಿಂದ ಶಿವಮೊಗ್ಗ-ಬೆಂಗಳೂರು ವಿಮಾನ ಸಂಚಾರ (shivamogga bangalore flight) ಸಂಚಾರ ಆರಂಭವಾಗಲಿದೆ. 

ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೇರೆ ಪ್ರದೇಶಗಳಿಗೆ ವಿಮಾನ ಸಂಚಾರ ಕುರಿತಂತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಂಸದ ಬಿ.ವೈ. ವಿಜಯೆಂದ್ರ,  ಶಿವಮೊಗ್ಗದಿಂದ ಇನ್ನೂ ನಾಲ್ಕು ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಉಡಾನ್ ಯೋಜನೆಯಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ- ಪುಸ್ತಕ ಓದಿ ಟೆಲಿಸ್ಕೋಪ್ ತಯಾರಿಸಿದ ಯುವಕ

ಇನ್ನು ಇದೇ ವಿಚಾರಕ್ಕೆ 2022 ರ ಫೆಬ್ರವರಿಯಲ್ಲಿ ಕೇಂದ್ರ ವಿಮಾನಯಾನ ನಾಗರಿಕ ಸಚಿವರನ್ನ ಭೇಟಿ ಮಾಡಿ 11 ರೂಟ್​ಗಳನ್ನು ಉಡಾನ್​ ಯೋಜನೆಯಡಿಯಲ್ಲಿ ಪರಿಗಣಿಸಬೇಕು ಎಂದು ಮನವಿ ಮಾಡಿದ್ದೆ. ಇದಕ್ಕೆ ಪ್ರತಿಯಾಗಿ ಆರ್​ಸಿಎಸ್​ ಸ್ಕೀಮ್​ ನಡಿಯಲ್ಲಿ ಕೇಂದ್ರ ಸರ್ಕಾರ, ನಾಲ್ಕು ರೂಟ್​ಗಳನ್ನು ಉಡಾನ್​ ಯೋಜನೆಯಡಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದೆ ಎಂದು ಮಾಹಿತಿ ತಿಳಿಸಿದರು. 

ಶಿವಮೊಗ್ಗದಿಂದ ಯಾವ ನಗರಗಳಿಗೆ ಸಂಪರ್ಕಕ್ಕೆ ಸಿಕ್ಕಿದೆ ಗ್ರೀನ್ ಸಿಗ್ನಲ್? 
* ಹೈದರಾಬಾದ್
* ಗೋವಾ
* ತಿರುಪತಿ 
* ದೆಹಲಿ
* ಚೆನ್ನೈ
* ಬೆಂಗಳೂರು
* ಸೇಲಂ
* ಕೊಚ್ಚಿನ್ 
* ಮುಂದ್ರಾ 

ಸರ್ಕಾರ ಉಡಾನ್​ ಯೋಜನೆಯಡಿಯಲ್ಲಿ, ಈ ಹಿಂದೆ ಇದ್ದ ಗರಿಷ್ಟ 600 ಕಿಲೊಮೀಟರ್​ಗಳ ವ್ಯಾಪ್ತಿಯನ್ನು ತೆಗೆದುಹಾಕಲಾಗಿದ್ದು, ಏರ್​ಪೋರ್ಟ್​ ಲ್ಯಾಂಡಿಂಗ್ ಹಾಗೂ ಇಂಧನ ರಿಯಾಯಿತಿ ಹಾಗೂ ಶೇಕಡಾ 50 ರಷ್ಟು ಸೀಟುಗಳ ವಿಚಾರದಲ್ಲಿ ನಷ್ಟ ಪರಿಹಾರವನ್ನು ಕೇಂದ್ರ ಹಾಗೂ ರಾಜ್ಯ ನೀಡಲಿದೆ ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ- ರಾಜ್ಯದ ಜನತೆಗೆ ಮತ್ತೊಂದು ಶಾಕಿಂಗ್; ವಿದ್ಯುತ್, ತರಕಾರಿ, ಮೊಟ್ಟೆ ಬೆನ್ನಲ್ಲೇ ಇದೀಗ ಹಾಲಿನ ಸರದಿ!

ಶಿವಮೊಗ್ಗ ವಿಮಾನ ನಿಲ್ದಾಣ ಈಗಾಗಲೇ ಕಾಂಕ್ರಿಟ್​  ಮ್ಯೂಸಿಯ್  ಆಗಿದೆ ಎಂಬ ಮಾತುಗಳು ಜನ ಸಾಮಾನ್ಯರಲ್ಲಿ ಕೇಳಿಬರುತ್ತಿತ್ತು. ಅಂತಹದ್ದೊಂದು ಸಣ್ಣ ಅಸಮಾಧಾನ ಬಂದ ಬೆನ್ನಲ್ಲೆ ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳನ್ನು ಆಹ್ವಾನಿಸಿರುವುದು ಸಂತೋಷದ ವಿಚಾರ ಎಂದು ಸಂಸದ ಬಿ. ವೈ. ರಾಘವೇಂದ್ರರವರು ತಿಳಿಸಿದ್ದಾರೆ. ಬಹುತೇಕ ಆಗಸ್ಟ್​ ಅಂತ್ಯದಲ್ಲಿ ಈ ಸಂಬಂಧ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದ್ದು ಯಾವೆಲ್ಲಾ ಕಂಪನಿಗಳು ವಿಮಾನ ಸಂಚಾರ ನಡೆಸಲು ಮುಂದಕ್ಕೆ ಬರುತ್ತವೆ ಎಂಬುದು ಸ್ಪಷ್ಟವಾಗಲಿದೆ. ಅಲ್ಲದೆ ಈ ಸಂಬಂಧ ವಿವಿಧ ಕಂಪನಿಗಳ ಮನವೊಲಿಸುವ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಯಾವುದೇ ಸರ್ಕಾರವು ವಿಮಾನ ಸಂಚಾರದ ಮೂಲಕ ಲಾಭ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದರೆ ವಿಮಾನಗಳ ಸಂಚಾರದಿಂದ ಆಯಾ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿಗಳಿಗೆ ನೆರವಾಗುತ್ತದೆ ಆ ನಿಟ್ಟಿನಲ್ಲಿ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News