ಬೆಂಗಳೂರು: ಅಕ್ಕಿಯನ್ನು ಹೊಂದಿಸಲು "ಕೈ"ಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದಿನಂತೆ ತಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕಿ, "ಕೈ" ತೊಳೆದುಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. ‘ಪ್ರಧಾನಿ ಮೋದಿಯವರ ಸರ್ಕಾರವು ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ಯಡಿ ಪ್ರತಿ ತಿಂಗಳು ಉಚಿತವಾಗಿ 5 ಕೆಜಿ ಅಕ್ಕಿಯನ್ನು ನೀಡುತ್ತಿರುವ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಸಿದ್ದರಾಮಯ್ಯರ #ATMSarkaraಕ್ಕೆ ಇಷ್ಟು ದಿನ ಬೇಕಾಯಿತು’ ಅಂತಾ ಕುಟುಕಿದೆ.
‘ಸ್ವಾಮಿ ಸ್ವಯಂಘೋಷಿತ ಆರ್ಥಿಕ ತಜ್ಞ, ಸಿದ್ದರಾಮಯ್ಯನವರೇ, ರಾಜ್ಯದ ಎಲ್ಲಾ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುತ್ತೇವೆಂದು ನೀವುಗಳೇ ಹೋದಲ್ಲಿ, ಬಂದಲ್ಲಿ ಭಾಷಣ ಮಾಡುತ್ತಿದ್ದಿರಿ. ಈಗಾಗಲೇ ಕೇಂದ್ರ ಸರ್ಕಾರದ ವತಿಯಿಂದ 5 ಕೆಜಿ ದೊರೆಯುತ್ತಿದೆ ಎಂದರೇ, ನಿಮ್ಮ ಮಾತಿನ ಪ್ರಕಾರ ರಾಜ್ಯದ ಜನತೆಗೆ ಕೇಂದ್ರ ಸರ್ಕಾರದ 5 ಹಾಗೂ ರಾಜ್ಯ ಸರ್ಕಾರದ ವತಿಯಿಂದ 10 ಒಟ್ಟು 15 ಕೆಜಿ ಅಕ್ಕಿ ದೊರೆಯಬೇಕು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಸ್ವಾಮಿ ಸ್ವಯಂಘೋಷಿತ ಆರ್ಥಿಕ ತಜ್ಞ, @siddaramaiah ರವರೇ, ರಾಜ್ಯದ ಎಲ್ಲಾ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುತ್ತೇವೆಂದು, ನೀವುಗಳೇ ಹೋದಲ್ಲಿ, ಬಂದಲ್ಲಿ ಭಾಷಣ ಮಾಡುತ್ತಿದ್ದಿರಿ.
ಈಗಾಗಲೇ ಕೇಂದ್ರ ಸರ್ಕಾರದ ವತಿಯಿಂದ 5 ಕೆಜಿ ದೊರೆಯುತ್ತಿದೆ ಎಂದರೇ, ನಿಮ್ಮ ಮಾತಿನ ಪ್ರಕಾರ, ರಾಜ್ಯದ ಜನತೆಗೆ ಕೇಂದ್ರ ಸರ್ಕಾರದ 5 ಹಾಗೂ…
— BJP Karnataka (@BJP4Karnataka) June 30, 2023
ಇದನ್ನೂ ಓದಿ: "ಬಿ.ಎಲ್.ಸಂತೋಷ್ ಅವರೇ, ರೇಣುಕಾಚಾರ್ಯರ ಮಾತನ್ನು ಸವಾಲಾಗಿ ಸ್ವೀಕರಿಸಿ.."- ಕಾಂಗ್ರೆಸ್ ಸವಾಲು
‘ಆದರೇ ಈಗ ರಾಜ್ಯ ಸರ್ಕಾರದ ವತಿಯಿಂದ ಕೇವಲ 5 ಕೆಜಿ ಅಕ್ಕಿಯ ಬದಲಿಗೆ, ಪ್ರತಿ ಕೆಜಿಗೆ 34 ರೂಪಾಯಿ ನೀಡುವುದಾಗಿ ಘೋಷಿಸಿದ್ದೀರಿ. ಹಾಗಾದರೆ ಬಾಕಿ 5 ಕೆಜಿ ಅಕ್ಕಿಯ ಕಥೆ ಏನು? 5 ಕೆಜಿಯ ಬಾಬ್ತು + 5ಕೆಜಿ ಕೇಂದ್ರ ನೀಡುವ ಉಚಿತ ಅಕ್ಕಿ = 15 ಕೆಜಿ ಎಂದು ಜನರಿಗೆ ವಂಚಿಸುತ್ತಿದ್ದಿರಿ. ಜನರನ್ನು ನಂಬಿಸಿ ಮೋಸ ಮಾಡುವುದು, ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ’ ಎಂದು ಬಿಜೆಪಿ ಕಿಡಿಕಾರಿದೆ.
ನಿಮ್ಮ ಅಸಮರ್ಥ ಹಾಗೂ ಉಡಾಫೆ ಶೈಲಿಯ ಆಡಳಿತಕ್ಕೆ ಎಲ್ಲಿಯೂ ಸಹ ಅಕ್ಕಿ ದೊರೆತಿಲ್ಲ.
ಈ ಕಾರಣಕ್ಕಾಗಿ ಜನತೆಗೆ ಅಕ್ಕಿ ಬದಲು ಹಣ ನೀಡಿ ಎಂದಾಗ, ಹಣವನ್ನು ತಿನ್ನುವುದಕ್ಕೆ ಆಗುತ್ತಾ ಎಂದು ಉದ್ಧಟತನ ಪ್ರದರ್ಶಿಸಿದ್ದಿರಿ, ಈಗ ಕೆಜಿಗೆ 34 ರೂಪಾಯಿ ಎಂದು Uಟರ್ನ್ ಹೊಡೆದಿದ್ದೀರಿ.
ಕೇಂದ್ರದ ಸಬ್ಸಿಡಿ ಇಲ್ಲದೇ, ತಾವು ನಿಗದಿಪಡಿಸಿರುವ ಮೊತ್ತಕ್ಕೆ…
— BJP Karnataka (@BJP4Karnataka) June 30, 2023
‘ನಿಮ್ಮ ಅಸಮರ್ಥ ಹಾಗೂ ಉಡಾಫೆ ಶೈಲಿಯ ಆಡಳಿತಕ್ಕೆ ಎಲ್ಲಿಯೂ ಸಹ ಅಕ್ಕಿ ದೊರೆತಿಲ್ಲ. ಈ ಕಾರಣಕ್ಕಾಗಿ ಜನತೆಗೆ ಅಕ್ಕಿ ಬದಲು ಹಣ ನೀಡಿ ಎಂದಾಗ, ಹಣವನ್ನು ತಿನ್ನುವುದಕ್ಕೆ ಆಗುತ್ತಾ ಎಂದು ಉದ್ಧಟತನ ಪ್ರದರ್ಶಿಸಿದ್ದಿರಿ, ಈಗ ಕೆಜಿಗೆ 34 ರೂಪಾಯಿ ಎಂದು Uಟರ್ನ್ ಹೊಡೆದಿದ್ದೀರಿ. ಕೇಂದ್ರದ ಸಬ್ಸಿಡಿ ಇಲ್ಲದೇ ತಾವು ನಿಗದಿಪಡಿಸಿರುವ ಮೊತ್ತಕ್ಕೆ ಊಟಕ್ಕೆ ಯೋಗ್ಯವಾದ ಅಕ್ಕಿ ಕರ್ನಾಟಕದ ಯಾವ ಗಿರಣಿಯಲ್ಲಿ ಸಿಗುತ್ತದೆ ಎಂಬ ಮಾಹಿತಿಯನ್ನೂ ಸ್ವಲ್ಪ ಜನತೆಗೆ ತಿಳಿಸಿ. ಇಲ್ಲವಾದಲ್ಲಿ ಮಾರುಕಟ್ಟೆಯಲ್ಲಿ ಯಾವ ದರದಲ್ಲಿ ಯೋಗ್ಯ ಅಕ್ಕಿ ದೊರೆಯುತ್ತದೆಯೋ, ಅದೇ ದರವನ್ನು ನೀವು ಜನತೆಗೆ ನೀಡಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.
ಇದನ್ನೂ ಓದಿ: ಆರೆಸೆಸ್ಸ್ ಕಾರ್ಯಕ್ರಮದಲ್ಲಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೆಸರು..! ಸ್ಪಷ್ಟನೆ ನೀಡಿದ ನಿರ್ದೇಶಕರು
‘13 ಬಜೆಟ್ ಮಂಡಿಸಿದ್ದೇನೆ, ಆಡಳಿತದಲ್ಲಿ ಅಪಾರವಾದ ಅನುಭವವಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನಿಮಗೆ ಎಫ್ಸಿಐಯನ್ನು ಸರ್ಕಾರ ಏಕೆ ಸ್ಥಾಪಿಸಿದೆ, ಅದರ ಧ್ಯೇಯೋದ್ದೇಶಗಳೇನು ಎಂಬುದು ತಿಳಿದಿಲ್ಲವಾದದ್ದು ಅತ್ಯಂತ ದುರದೃಷ್ಟಕರ. ನಿಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ವಿನಾಕಾರಣ ದೂಷಿಸುವ ನಿಮ್ಮ ಬುದ್ಧಿಗೆ, ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ಎಚ್ಚರಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.