ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಅಭಿವೃದ್ದಿಗೆ ಮುನ್ನೋಟ ಸಿದ್ದಪಡಿಸುವ ನಿಟ್ಟಿನಲ್ಲಿ ಧೃಡವಾದ ಹೆಜ್ಜೆ ಇಟ್ಟಿದೆ.ಅದರ ಭಾಗವಾಗಿ ಇಂದು ನವ ಕರ್ನಾಟಕ- 2025 ಎನ್ನುವ ಧ್ಯೇಯದೊಂದಿಗೆ ತನ್ನ ವಿಶನ್ ಡಾಕ್ಯುಮೆಂಟ್ ನ್ನು ಬಿಡುಗಡೆಗೊಳಿಸಿದೆ.
Since 2013, we have successfully scripted a unique Karnataka Model of Development based on Inclusion, Innovation & Enterprise.
While we have come a long way, we know there is a lot more to do. Our journey now continues towards #NavaKarnataka2025 pic.twitter.com/qeqU8dvL4z— Siddaramaiah (@siddaramaiah) 2 March 2018
ಆ ಮೂಲಕ ಈ ದಾಖಲೆಯು ಮುಂದಿನ ಏಳು ವರ್ಷಗಳಲ್ಲಿ ಪ್ರತಿ ಜಿಲ್ಲೆಗಳ ಅಭಿವೃದ್ದಿಗಳ ಕುರಿತಾಗಿ ಹಲವು ಕ್ಷೇತ್ರಗಳ ತಜ್ಞರನ್ನು ಭೇಟಿ ಮಾಡಿ ಮುಂದಿನ ಹಂತದಲ್ಲಿ ಕರ್ನಾಟಕವು ಸಾಗಬೇಕಾದ ಅಭಿವೃದ್ದಿ ಪಥದ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.
ರಾಜ್ಯದ ಭವಿಷ್ಯದ ಕಲ್ಪನೆ ಏನಿರಬೇಕು ? ಮತ್ತು ಅದನ್ನು ಹೇಗೆ ಸಾಧಿಸಬೇಕು ? ಎನ್ನುವ ಒಂದು ನೋಟವನ್ನು ಈ ದಾಖಲೆ ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ. CM @siddaramaiah #NavaKarnataka2025
— CM of Karnataka (@CMofKarnataka) 3 March 2018
ಇಂದು ಬಿಡುಗಡೆಗೊಂಡ ವಿಷನ್ ಡಾಕ್ಯುಮೆಂಟ್ ಅಂತಿಮವಾದರೂ ಮುನ್ನೋಟ ಎಂಬುದು ನಿರಂತರ ಪ್ರಕ್ರಿಯೆ. ಈ ಹಿನ್ನೆಲೆಯಲ್ಲಿ ನವ ಕರ್ನಾಟಕ 2025 ಎನ್ನುವುದನ್ನು ಜೀವಂತ ದಾಖಲೆಯನ್ನಾಗಿಸುವ ನಮ್ಮ ಪ್ರಯತ್ನ ಮುಂದುವರಿಯಲಿದೆ: CM @siddaramaiah #NavaKarnataka2025
— CM of Karnataka (@CMofKarnataka) 3 March 2018
ಈ ನವ ಕರ್ನಾಟಕ-2025 ಗೆ ಮುನ್ನೋಟದ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು "ರಾಜ್ಯದ ಭವಿಷ್ಯದ ಕಲ್ಪನೆ ಏನಿರಬೇಕು ? ಮತ್ತು ಅದನ್ನು ಹೇಗೆ ಸಾಧಿಸಬೇಕು ? ಎನ್ನುವ ಒಂದು ನೋಟವನ್ನು ಈ ದಾಖಲೆ ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು, ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ' ಎಂದು ತಿಳಿಸಿದ್ದಾರೆ.
ಇನ್ನು ಮುಂದುವರೆದು ಅವರು "ಇಂದು ಬಿಡುಗಡೆಗೊಂಡ ವಿಷನ್ ಡಾಕ್ಯುಮೆಂಟ್ ಅಂತಿಮವಾದರೂ ಮುನ್ನೋಟ ಎಂಬುದು ನಿರಂತರ ಪ್ರಕ್ರಿಯೆ. ಈ ಹಿನ್ನೆಲೆಯಲ್ಲಿ ನವ ಕರ್ನಾಟಕ 2025 ಎನ್ನುವುದನ್ನು ಜೀವಂತ ದಾಖಲೆಯನ್ನಾಗಿಸುವ ನಮ್ಮ ಪ್ರಯತ್ನ ಮುಂದುವರಿಯಲಿದೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.