ವಿಜಯೇಂದ್ರ ಯಾಕೆ? ಅವರಪ್ಪನ್ನೇ ನಿಲ್ಲೋಕೆ ಹೇಳಿ : ಸಿದ್ದು ಸಿಡಿಮಿಡಿ

ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಯಾಕೆ? ಅವರಪ್ಪನೇ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಲಿ, ಜನರಿಗೆ ಯಾರಿಕೆ ಓಟು ಹಾಕಬೇಕು ಎಂದು ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ. 

Last Updated : Apr 2, 2018, 01:36 PM IST
ವಿಜಯೇಂದ್ರ ಯಾಕೆ? ಅವರಪ್ಪನ್ನೇ ನಿಲ್ಲೋಕೆ ಹೇಳಿ : ಸಿದ್ದು ಸಿಡಿಮಿಡಿ title=

ಮೈಸೂರು : ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಯಾಕೆ? ಅವರಪ್ಪನೇ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಲಿ, ಜನರಿಗೆ ಯಾರಿಕೆ ಓಟು ಹಾಕಬೇಕು ಎಂದು ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದ್ದಾರೆ. 

ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನಲ್ಲಿ ಚುನಾವಣಾ ಪ್ರಚಾರದಲ್ಲಿರುವ ಸಿದ್ದರಾಮಯ್ಯ ಅವರು, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಚುನಾವಣೆಗೆ ನಿಲ್ಲುವುದರ ಕುರಿತು ತೀಕ್ಷವಾಗಿ ಪ್ರತಿಕ್ರಿಯಿಸಿದ ಅವರು, ‘ವಿಜಯೇಂದ್ರ ಬಂದು ನಿಂತ ಕೂಡ್ಲೇ ಜನರು ಓಡೋಡಿ ಬಂದು ಓಟು ಹಾಕ್ತಾರಾ? ಜನರಿಗೆ ಯಾರಿಗೆ ವೋಟು ಹಾಕಬೇಕು ಎಂದು ಗೊತ್ತಿದೆ. ನನ್ನ ಮಗನೇ ಸ್ಪರ್ಧಿಸಿದರೂ ಸಿಎಂ ಮಗ ಅಂತ ಜನ ವೋಟು ಹಾಕೋದಿಲ್ಲ. ಹಾಗಾಗಿ ವಿಜಯೇಂದ್ರ ಏಕೆ ಅವರಪ್ಪನನ್ನೇ ನಿಲ್ಲೋಕೆ ಹೇಳಿ’ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ. 

ಮುಂದುವರೆದು, "ಯಡಿಯೂರಪ್ಪಂಗೂ ಈ ಕ್ಷೇತ್ರಕ್ಕೂ ಏನ್ರೀ ಸಂಬಂಧ? ವರುಣಾ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸಿರುವುದು ನಾನು. ಯಾರೋ ಬಂದು ವೋಟು ಕೇಳಿದ ತಕ್ಷಣ ಜನ ಓ ಅಂತ ಓಡಿ ಹೋಗಿ ವೋಟು ಹಾಕಲ್ಲ. ಯಾರಿಗೆ ವೋಟು ಹಾಕಬೇಕು ಅಂತ ಜನರಿಗೆ ಅವರಿಗೆ ಗೊತ್ತಿದೆ. ಮಾಜಿ ಸಿಎಂಗಳ ಮಕ್ಕಳು ಚುನಾವಣೆಗೆ ನಿಂತು ಗೆಲ್ಲೋದಾಗಿದ್ರೆ, ಯಾರ್ಯಾರೋ, ಎಲ್ಲೇಲ್ಲೋ ನಿಂತು ಚುನಾವಣೆಗೆ ಸ್ಪರ್ಧೆ ಮಾಡ್ತಾ ಇದ್ರು. ವಿಜಯೇಂದ್ರ ಬಗ್ಗೆ ಈಗ ನನ್ನನ್ನು ಪ್ರಶೆ ಕೇಳಬೇಡಿ" ಎನ್ನುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.

ಕರ್ನಾಟಕ ವಿಧಾನಸಭೆ ಚುನಾವಣೆ ಇದೇ ಮೇ 12 ರಂದು ನಡೆಯಲಿದ್ದು, ಚುನಾವಣಾ ಫಲಿತಾಂಶ ಮೇ 15ರಂದು ಹೊರಬೀಳಲಿದೆ.

Trending News