ಜ.12 ರಿಂದ ಜ.31ರವರೆಗೆ ಸಿಲಿಕಾನ್ ಸಿಟಿ ಜನತೆಗೆ ತಗುಲಲಿದೆ ವಿದ್ಯುತ್ ವ್ಯತ್ಯಯದ ಬಿಸಿ

ಬೆಸ್ಕಾಂನ ಪೂರ್ವ ಮತ್ತು ಉತ್ತರ ವೃತ್ತಗಳ 307 ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಆಗಾಗ ವ್ಯತ್ಯಯ ಕಂಡು ಬರಲಿದೆ.

Last Updated : Jan 11, 2018, 09:58 AM IST
ಜ.12 ರಿಂದ ಜ.31ರವರೆಗೆ ಸಿಲಿಕಾನ್ ಸಿಟಿ ಜನತೆಗೆ ತಗುಲಲಿದೆ ವಿದ್ಯುತ್ ವ್ಯತ್ಯಯದ ಬಿಸಿ title=

ಬೆಂಗಳೂರು: ಬೆಸ್ಕಾಂ ತುರ್ತು ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಜ. 12 ರಿಂದ ಜ.31 ರವರೆಗೆ ಬೆಸ್ಕಾಂನ ಪೂರ್ವ ಮತ್ತು ಉತ್ತರ ವೃತ್ತಗಳ ಹಲವು ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಆಗಾಗ ವ್ಯತ್ಯಯ ಕಂಡು ಬರಲಿದೆ ಎಂದು ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

66 ಮತ್ತು 11 ಕೆ.ವಿ ಲೈನ್ ಗಳಲ್ಲಿ ತುರ್ತಾಗಿ ಕ್ಯುಯೋಟ್ ಕಂಡೆಕ್ಟರ್ ಬದಲಾವಣೆ ಮಾಡುವ ಹಿನ್ನಲೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಿರಲಿದೆ. ವಿದ್ಯುತ್ ಪೂರೈಕೆಯಲ್ಲಿ ಈ ವ್ಯತ್ಯಯವು ಜ.12 ಬೆಳಗ್ಗೆ 10ರಿಂದ ಜ.31ರ ಸಂಜೆ  6ರ ತನಕ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್.ಆರ್.ಬಂಡೆ, ಗೆಡ್ಡದಹಳ್ಳಿ, ಬಾಣಸವಾಡಿ, ಎಚ್ಬಿಆರ್ ಮತ್ತು ವಿದ್ಯಾನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ.

Trending News