"ಕೊರೊನಾ ಮೂರನೇ ಅಲೆ ಸಾಧ್ಯತೆ, ಈಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿ" ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಕೊರೋನಾದ ಮೂರನೇ ಸಂಭವನೀಯ ಅಲೆಯನ್ನು ಎದುರಿಸಲು ಕ್ರಿಯಾ ಯೋಜನೆ ಹಾಗೂ ಸಮಸ್ಯೆ ನಿವಾರಣೆಗೆ ದೃಷ್ಟಿಕೋನವನ್ನು ಹೊಂದಿರುವ ದಾಖಲೆಯನ್ನು ಎರಡು ವಾರಗಳಲ್ಲಿ ಸಿದ್ಧಪಡಿಸಬೇಕೆಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

Last Updated : May 12, 2021, 05:36 PM IST
  • ಕೊರೋನಾದ ಮೂರನೇ ಸಂಭವನೀಯ ಅಲೆಯನ್ನು ಎದುರಿಸಲು ಕ್ರಿಯಾ ಯೋಜನೆ ಹಾಗೂ ಸಮಸ್ಯೆ ನಿವಾರಣೆಗೆ ದೃಷ್ಟಿಕೋನವನ್ನು ಹೊಂದಿರುವ ದಾಖಲೆಯನ್ನು ಎರಡು ವಾರಗಳಲ್ಲಿ ಸಿದ್ಧಪಡಿಸಬೇಕೆಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
"ಕೊರೊನಾ ಮೂರನೇ ಅಲೆ ಸಾಧ್ಯತೆ, ಈಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿ" ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ  title=
file photo

ಬೆಂಗಳೂರು: ಕೊರೋನಾದ ಮೂರನೇ ಸಂಭವನೀಯ ಅಲೆಯನ್ನು ಎದುರಿಸಲು ಕ್ರಿಯಾ ಯೋಜನೆ ಹಾಗೂ ಸಮಸ್ಯೆ ನಿವಾರಣೆಗೆ ದೃಷ್ಟಿಕೋನವನ್ನು ಹೊಂದಿರುವ ದಾಖಲೆಯನ್ನು ಎರಡು ವಾರಗಳಲ್ಲಿ ಸಿದ್ಧಪಡಿಸಬೇಕೆಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಇದನ್ನೂ ಓದಿ- COVID-19: 14 ದಿನಗಳ Quarantine ನಂತರ ಆರ್‌ಟಿ-ಪಿಸಿಆರ್ ಟೆಸ್ಟ್ ಏಕೆ ಅಗತ್ಯವಿಲ್ಲ?

ಈ ವಿಚಾರವಾಗಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ವಿಭಾಗೀಯ ಪೀಠವು  "ಕಳೆದ ಕೆಲವು ದಿನಗಳಲ್ಲಿ ನಾವು ಕೊರೊನಾ (COVID-19) ಒಡ್ಡಿದ ಅಗಾಧ ಸವಾಲನ್ನು ಎದುರಿಸಲು ತಕ್ಷಣದ ಕ್ರಮಗಳನ್ನು ಕೈಗೊಂಡಿದ್ದರೂ ಸಹಿತ, ಈಗ ರಾಜ್ಯ ಸರ್ಕಾರವು ಮೂರನೇ ಅಲೆಯನ್ನು ಎದುರಿಸಲು ಸ್ಪಷ್ಟ ಯೋಜನೆಯನ್ನು ರೂಪಿಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ.

ಇದನ್ನೂ ಓದಿ- ಇದುವರೆಗೆ 44 ದೇಶಗಳಿಗೆ ತಲುಪಿದ Corona ಭಾರತೀಯ ರೂಪಾಂತರಿ, WHO ಹೇಳಿದ್ದೇನು ?

"ಹಾಸಿಗೆಗಳು / ಔಷಧಗಳು, ಆಮ್ಲಜನಕ, ವೈದ್ಯಕೀಯ ಸಿಬ್ಬಂದಿ ಇತ್ಯಾದಿಗಳ ಅಗತ್ಯತೆಯ ಅಂದಾಜುಗಳನ್ನು ಪ್ರಕ್ಷೇಪಿಸುವ ಮೂಲಕ ಕೊರೋನಾದ ಮೂರನೇ ಸಂಭವನೀಯ ಅಲೆಯನ್ನು ಎದುರಿಸಲು ಕ್ರಿಯಾ ಯೋಜನೆ ಮತ್ತು ದೃಷ್ಟಿಕೋನವನ್ನು ಹೊಂದಿರುವ ದಾಖಲೆಯನ್ನು ಸಿದ್ಧಪಡಿಸಲು ನಾವು ರಾಜ್ಯವನ್ನು ನಿರ್ದೇಶಿಸುತ್ತೇವೆ" ಎಂದು ಹೈಕೋರ್ಟ್ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News