ಬೆಂಗಳೂರು : ಮೂರು ದಿನಗಳ 24ನೇ ತಂತ್ರಜ್ಞಾನ ಶೃಂಗ ಸಮಾವೇಶ ಬೆಂಗಳೂರಿನಲ್ಲಿ ಆರಂಭವಾಗಿದೆ; ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಸಮಾವೇಶಕ್ಕೆ ಚಾಲನೆ ನೀಡಿದರು.
'ಬೆಂಗಳೂರು ಟೆಕ್ ಸಮ್ಮಿಟ್' 2021 (Bengaluru Tech Summit 2021) ಕಾರ್ಯಕ್ರಮವನ್ನ ಉಪರಾಷ್ಟ್ರಪತಿ ಎಂ ವೆಂಕಯ್ಯನಾಯ್ಡು ಅವರು ಇಂದು ಉದ್ಘಾಟಿಸಿದರು. ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸರಾಜ್ ಬೊಮ್ಮಾಯಿ, ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ, ಐಟಿಬಿಟಿ ಸಚಿವ ಸಿಎನ್ ಅಶ್ವತ್ ನಾರಾಯಣ್ಮ ತ್ತಿತರರು ಸಮಾರಂಭದಲ್ಲಿ ಭಾಗವಹಿಸಿದರು.
ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಟೆಕ್ ಸಮ್ಮೀಟ್ ಸಮಾವೇಶ ಆರಂಭವಾಗಿದೆ. ಸಮಾವೇಶ ಉದ್ಘಾಟಿಸಿದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು(M. Venkaiah Naidu) ಅವರು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಮೊದಲಿಗೆ ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿದ ಉಪ ರಾಷ್ಟ್ರಪತಿ, ಅಪ್ಪು ಕೇವಲ ನಟ ಮಾತ್ರನಲ್ಲ. ಅವರು ಉತ್ತಮ ವ್ಯಕ್ತಿ. ಪುನೀತ್ ತೀರಿಕೊಂಡಿರುವುದು ತುಂಬಾ ನೋವಿನ ಸಂಗತಿ ಎಂದು ಹೇಳಿದರು.
ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai), ಬೆಂಗಳೂರು ಟೆಕ್ ಸಮಿಟ್ ಯಶಸ್ಸಿನತ್ತ ದಾಪುಗಾಲು ಇಡುತ್ತಿದೆ. ಇಂಥ ಸಮ್ಮಿಟ್ ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಜರುಗಬೇಕು. ಇಲ್ಲಾಗುವ ಚರ್ಚೆ, ನಿರ್ಣಯ ನವ ಭಾರತ ನಿರ್ಮಾಣಕ್ಕೆ ಅನುಕೂಲವಾಗಬೇಕು. ತಂತ್ರಜ್ಞಾನ ಪ್ರತಿಯೊಬ್ಬ ಮನುಕುಲಕ್ಕೆ ಒಳಿತು ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ : Heavy Rain : ರಾಜ್ಯಾದ್ಯಂತ ಇದೇ 20ರವರೆಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆ!
ತಂತ್ರಜ್ಞಾನ ಕ್ಷೇತ್ರದಲ್ಲಿ ಕಿರಣ್ ಮಜುಂದೂರ್ ಷಾ, ಕ್ರಿಷ್ ಕೃಷ್ಣಮೂರ್ತಿ ಅಂತಹವರು ಸಾಕಷ್ಟು ಸಾಧಕರಿದ್ದಾರೆ. ಇಂಥ ಸಾಧಕರು ನಮ್ಮ ಕರ್ನಾಟಕ(Karnataka)ದವರು ಎಂಬ ಹೆಮ್ಮೆ ನಮಗಿದೆ. ವಿಶ್ವದಲ್ಲಿಯೇ ಐಟಿ ಕ್ಷೇತ್ರದಲ್ಲಿ ನಮ್ಮ ಕರ್ನಾಟಕ ಸಾಕಷ್ಟು ಅಭಿವೃದ್ದಿಯತ್ತ ದಾಪುಗಾಲು ಇಡುತ್ತಿದೆ. ಐಟಿ, ಬಿಟಿ, ತಂತ್ರಜ್ಞಾನ, ವಿಜ್ಞಾನ, ಕೃಷಿ, ರಕ್ಷಣೆ, ಕೃತಕ ಬುದ್ದಿಮತ್ತೆ ಎಲ್ಲ ವಿಷಯದಲ್ಲಿ ನಾವು ತೆರೆದುಕೊಳ್ಳಲು ಸರ್ಕಾರ ಸಿದ್ಧವಿದೆ. ಸಾಧಕರಿಗೆ ನಮ್ಮ ಸರ್ಕಾರ ಯಾವಾಗಲೂ ಸಹಕಾರಿ, ಬೆಂಬಲವಾಗಿ ನಿಲ್ಲುತ್ತದೆ. ನವ ಭಾರತ ನಿರ್ಮಾಣಕ್ಕೆ ನಮ್ಮ ಸರ್ಕಾರ ಯಾವಾಗಲೂ ಸಿದ್ಧವಾಗಿದೆ. ಮೇಕ್ ಇನ್ ಇಂಡಿಯಾ ಮೂಲಕ ಐಟಿ ಬಿಟಿ ಕ್ಷೇತ್ರದಲ್ಲಿ ಅಭಿವೃದ್ದಿಗೆ ಇನ್ನಷ್ಟು ಮುಂದಡಿ ಇಡುತ್ತಿದ್ದೇವೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ