ಬಸವ ಧರ್ಮ ಸ್ವತಂತ್ರ ಧರ್ಮ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ- ಸಿದ್ದರಾಮಯ್ಯ

ಬಸವ ಧರ್ಮ ಸ್ವತಂತ್ರ ಧರ್ಮ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.   

Last Updated : Jul 27, 2019, 06:48 PM IST
ಬಸವ ಧರ್ಮ ಸ್ವತಂತ್ರ ಧರ್ಮ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ- ಸಿದ್ದರಾಮಯ್ಯ  title=
Photo courtsey: Twitter

ಬೆಂಗಳೂರು:  ಬಸವ ಧರ್ಮ ಸ್ವತಂತ್ರ ಧರ್ಮ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. 

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು ಬರೆದಿರುವ 'ಲಿಂಗಾಯತ ಕನ್ನಡದ ವಚನ ಧರ್ಮ ಹಾಗೂ ವಚನ ಧರ್ಮ ಅರಿವಿನ ಬೆರಗು' ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು ' ಬಸವ ಧರ್ಮ ಸ್ವತಂತ್ರ ಧರ್ಮ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿ ಆಗಿದ್ದಾಗ ನಾನು ಈ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ, ಕಾರಣ ಆಗ ಎಲ್ಲಾರ ಅಭಿಪ್ರಾಯವನ್ನು ನಾನು ಪರಿಗಣಿಸಬೇಕಿತ್ತು' ಎಂದರು.

'ಸಂವಿಧಾನದ ಆಶಯಗಳ ವಿರುದ್ಧವಾಗಿ ಕೆಲಸ ಮಾಡುವವರು ಇಡೀ ಸಮಾಜದ ವಿರೋಧಿಗಳು. ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ನಾನು ಪ್ರಮಾಣ ವಚನ ಸ್ವೀಕರಿಸಿದ್ದೆ, ನಾನೇನು ತೋರಿಕೆಗಾಗಿ ಮಾಲಾರ್ಪಣೆ ಮಾಡಿದವನಲ್ಲ.ಅದಕ್ಕೂ ಕೆಲವರು ಟೀಕೆಗಳನ್ನು ಮಾಡಿದ್ರು, ಇಂಥ ಟೀಕೆಗಳಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ ' ಎಂದು ವಿಷಾದ ವ್ಯಕ್ತಪಡಿಸಿದರು.

'ಸಮಾಜದಲ್ಲಿ ಇನ್ನೂ ಗುಲಾಮಗಿರಿ ಮನೆ ಮಾಡಿಕೊಂಡಿದೆ. ಈಗಲೂ ಅದರಿಂದ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ. ನಮ್ಮ ನಡವಳಿಕೆಗಳ ಮೂಲಕ ಆಗಾಗ ಗುಲಾಮಗಿರಿಯನ್ನು ತೋರಿಸಿಕೊಳ್ಳುತ್ತಾ ಇರುತ್ತೇವೆ. ಉದಾಹರಣೆಗೆ, ಮೇಲ್ವರ್ಗದವರನ್ನು ಕಂಡರೆ ಏನ್ ಸ್ವಾಮಿ ಅಂತ ಮಾತನಾಡಿಸ್ತಾರೆ, ಕೆಳವರ್ಗದವರನ್ನು ಕಂಡರೆ ಏಲ್ ಲಾ ಅಂತ ಮಾತನಾಡಿಸ್ತಾರೆ. ಇದೇ ಗುಲಾಮಗಿರಿ' ಎಂದು ಸಮಾಜದಲ್ಲಿರುವ ಅಸಮಾನತೆ ಬಗ್ಗೆ ವಿವರಿಸಿದರು.

Trending News