ಟಿಪ್ಪು ಜಯಂತಿ: ಕೇಂದ್ರ ಸಚಿವ ಅನಂತಕುಮಾರ್ ಹೆಗಡ್ಡೆ ಹಾಗೂ ಸಿ.ಟಿ. ರವಿಗೆ ಸಂಕಷ್ಟ

                       

Last Updated : Oct 26, 2017, 09:50 AM IST
ಟಿಪ್ಪು ಜಯಂತಿ: ಕೇಂದ್ರ ಸಚಿವ ಅನಂತಕುಮಾರ್ ಹೆಗಡ್ಡೆ ಹಾಗೂ ಸಿ.ಟಿ. ರವಿಗೆ ಸಂಕಷ್ಟ  title=

ಬೆಂಗಳೂರು: ಟಿಪ್ಪು ಜಯಂತಿಗೆಯ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡ್ಡೆ ಹಾಗೂ ಸಿ.ಟಿ. ರವಿ ವಿರುದ್ಧ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿದೆ.

ಟಿಪ್ಪು ಓರ್ವ ಮಾಸ್ ಲೀಡರ್, ಟೆರಿಬಲ್ ಕಿಲ್ಲರ್ ಸೇರಿದಂತೆ ಹಲವು ಪದ ಬಳಕೆ ಮಾಡಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡ್ಡೆ ನಿಂದಿಸಿದ್ದರು. ಇದರಿಂದಾಗಿ ಮುಸ್ಲಿಮರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ  ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಉದ್ಯಮಿ ಅಲ್ಲಾಂ ಪಾಷ ಖಾಸಗಿ ದೂರು ಸಲ್ಲಿಸಿದ್ದಾರೆ.

ಈ ಹಿಂದೆ ನನ್ನ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸದಂತೆ ಸರ್ಕಾರಕ್ಕೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡ್ಡೆ ಪತ್ರ ಬರೆದಿದ್ದರು.

 

ಅಲ್ಲದೆ, ಟಿಪ್ಪು ಜಯಂತಿ ಮಾಡಿ ಹಿಂದೂಗಳಿಗೆ ಸರ್ಕಾರ ಅವಮಾನ ಮಾಡುತ್ತಿದೆ ಎಂದು ಹೇಳಿದ್ದ ಬಿಜೆಪಿ ವಕ್ತಾರ ಸಿ.ಟಿ. ರವಿ ವಿರುದ್ಧವೂ ಸಹ ದೂರು ದಾಖಲಿಸಲಾಗಿದೆ. 

Trending News