'ಉಮೇಶ್ ಕತ್ತಿ ಮಂತ್ರಿ ಆಗಲಿಕ್ಕೆ ಯೋಗ್ಯ ಅಲ್ಲ'

ಮಾಸ್ಕ ಧರಿಸಲ್ಲ ಎಂದು ಉದ್ದಟತನದ ಹೇಳಿಕೆ ನೀಡಿದ್ದ ಸಚಿವ ಉಮೇಶ್ ಕತ್ತಿ ವಿರುದ್ಧ ಹರಿಹಾಯ್ದಿರುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ 'ಕತ್ತಿ ಮಂತ್ರಿ ಆಗಲಿಕ್ಕೆ ಯೋಗ್ಯರಲ್ಲ' ಎಂದು ಅವರು ಕಿಡಿ ಕಾರಿದ್ದಾರೆ.

Last Updated : Jan 19, 2022, 07:48 PM IST
  • ಬೇರೆಯವರಿಗೆ ದಂಡ ಹಾಕ್ತಾರೆ, ಕೇಸ್ ದಾಖಲು ಮಾಡ್ತಾರೆ.‌ಮಾಸ್ಕ್ ಧರಿಸದ ಮಂತ್ರಿ ಮೇಲೆ ಕೇಸ್ ಹಾಕಬೇಕು ತಾನೆ.
  • ನನ್ನ ಪ್ರಕಾರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಅಗತ್ಯ ಇಲ್ಲ.ವೀಕೆಂಡ್ ಕರ್ಫ್ಯೂನಿಂದ ಕೊರೋನಾ ತಡೆಗಟ್ಟಲು ಸಾಧ್ಯವಿಲ್ಲ
'ಉಮೇಶ್ ಕತ್ತಿ ಮಂತ್ರಿ ಆಗಲಿಕ್ಕೆ ಯೋಗ್ಯ ಅಲ್ಲ' title=
file photo

ಮಂಡ್ಯ: ಮಾಸ್ಕ ಧರಿಸಲ್ಲ ಎಂದು ಉದ್ದಟತನದ ಹೇಳಿಕೆ ನೀಡಿದ್ದ ಸಚಿವ ಉಮೇಶ್ ಕತ್ತಿ ವಿರುದ್ಧ ಹರಿಹಾಯ್ದಿರುವ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ 'ಕತ್ತಿ ಮಂತ್ರಿ ಆಗಲಿಕ್ಕೆ ಯೋಗ್ಯರಲ್ಲ' ಎಂದು ಅವರು ಕಿಡಿ ಕಾರಿದ್ದಾರೆ.

ಮಾಸ್ಕ್ ಹಾಕದೆ ಅವರು ನಿಯಮ ಉಲ್ಲಂಘನೆ ಮಾಡಿದ್ದಾರೆ.‌‌ ಮಂತ್ರಿಯಾಗಲು ಲಾಯಕ್ಕಾ ಇವರು? ಇವರ ಮೇಲೆ ಸರ್ಕಾರ ಯಾಕೆ ಕೇಸ್ ಹಾಕಿಲ್ಲ.? ಒಬ್ಬ ಮಂತ್ರಿಯಾಗಿ ಕತ್ತಿ, ಮಾಸ್ಕ್ ಹಾಕದಿರುವವರನ್ನ ಬಿಟ್ಟುಬಿಡಿ, ಕಡ್ಡಾಯ ಮಾಡಬೇಡಿ. ಇಷ್ಟ ಬಂದವರು ಹಾಕ್ತಾರೆ, ಇಷ್ಟ ಇಲ್ಲದವರು ಇರ್ತಾರೆ.ಒತ್ತಾಯ ಮಾಡಬೇಡಿ ಅಂತ ಹೇಳ್ತಾರೆ.ಸರ್ಕಾರ ನಡೆಸಲಿಕ್ಕೆ ಇವರಿಗೆ ಯೋಗ್ಯತೆ ಇದ್ಯಾ ? ಮಂತ್ರಿಯೇ ಮಾಸ್ಕ್  ಹಾಕಲಿಲ್ಲ ಅಂದರೆ ಬೇರೆಯವರು ಏಕೆ ಹಾಕಬೇಕು? ಎಂದು ಸಿದ್ಧರಾಮಯ್ಯ ಅವರು ಪ್ರಶ್ನಿಸಿದರು.

ಇದನ್ನೂ ಓದಿ: O Antava..Oo Oo Antava Video: 'ಪುಷ್ಪ' ಚಿತ್ರದ ಈ ಹಾಡಿನ ಚಿತ್ರೀಕರಣದ ಮತ್ತೊಂದು ವಿಡಿಯೋ ವೈರಲ್

ಬೇರೆಯವರಿಗೆ ದಂಡ ಹಾಕ್ತಾರೆ, ಕೇಸ್ ದಾಖಲು ಮಾಡ್ತಾರೆ.‌ಮಾಸ್ಕ್ ಧರಿಸದ ಮಂತ್ರಿ ಮೇಲೆ ಕೇಸ್ ಹಾಕಬೇಕು ತಾನೆ.ನನ್ನ ಪ್ರಕಾರ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಅಗತ್ಯ ಇಲ್ಲ.ವೀಕೆಂಡ್ ಕರ್ಫ್ಯೂನಿಂದ ಕೊರೋನಾ ತಡೆಗಟ್ಟಲು ಸಾಧ್ಯವಿಲ್ಲ.ಸರ್ಕಾರ ಎಲ್ಲರಿಗೂ ಲಸಿಕೆ ನೀಡಲಿ.ಜನ ಕೊವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಿ.ವೀಕೆಂಡ್ ಕರ್ಫ್ಯೂನಿಂದ ಏನಾಗುತ್ತೆ? ಅದರಿಂದ ಕೊರೋನಾ ತಡೆಗಟ್ಟಲು ಸಾಧ್ಯವಿಲ್ಲ ಎಂದು ಅವರು ಸರ್ಕಾರಕ್ಕೆ ತಿಳಿ ಹೇಳಿದರು.

ಬಿಜೆಪಿಯವರು ಯಾವಾಗಲೂ ಡಬಲ್ ಸ್ಟ್ಯಾಂಡರ್ಡ್ ನವರೇ.ಅವರಿಗೆ ಯಾವ ಸಿಂಗಲ್ ಸ್ಟ್ಯಾಂಡರ್ಡ್ ಇದೆ.? ಅವರು ಯಾವಾಗಲೂ ಹೇಳುವುದು ಒಂದು, ಮಾಡುವುದು ಇನ್ನೊಂದು..ಇವತ್ತು ಕೊರೋನಾ ನಿಯಮಗಳ ಉಲ್ಲಂಘನೆ ಆಗಿದ್ರೆ, ಅದು ಬಿಜೆಪಿಯಿಂದ. ಬಿಜೆಪಿ ಅವರಿಂದಲೇ ಜಾಸ್ತಿ ಉಲ್ಲಂಘನೆ ಆಗಿದೆ. ಮಾಸ್ಕ್ ಹಾಕದೆ ಅವರು ನಿಯಮ ಉಲ್ಲಂಘನೆ ಮಾಡಿದ್ದಾರೆ.‌‌ ಮಂತ್ರಿಯಾಗಲು ಲಾಯಕ್ಕಾ  ಇವರು? ಇವರ ಮೇಲೆ ಸರ್ಕಾರ ಯಾಕೆ ಕೇಸ್ ಹಾಕಿಲ್ಲ.? ಎಂದು ಸಿದ್ಧರಾಮಯ್ಯ ಅವರು ಪ್ರಶ್ನಿಸಿದರು.

ಇದನ್ನೂ ಓದಿ: Viral Video: ‘ಪುಷ್ಪ’ ಸಿನಿಮಾದ ಮತ್ತೊಂದು ಹಾಡಿಗೆ ಮಸ್ತ್ ಡ್ಯಾನ್ಸ್ ಮಾಡಿದ ತಾಂಜಾನಿಯಾದ ಯುವಕ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News