ಬೆಂಗಳೂರು: ಕೇಂದ್ರ ಸರ್ಕಾರವು 2020 ರ ಪ್ರಧಾನ ಮಂತ್ರಿ ಮತ್ಸ್ಯ ಸಂಪದ (PMMSY) ಯೋಜನೆಯನ್ನು ಜಾರಿಗೊಳಿಸಿದೆ. ಇದು ದೇಶದ ಮೀನುಗಾರಿಕ ಕ್ಷೇತ್ರದ ಸುಸ್ಥಿರ ಮತ್ತು ಜವಾಬ್ದಾರಿಯುತ ಬೆಳವಣಿಗೆಗಾಗಿ ರೂಪಿಸಿರುವ ಯೋಜನೆಯಾಗಿದ್ದು, ಮೀನುಗಾರರ ಸಾಮಾಜಿಕ ಮತ್ತು ಆರ್ಥಿಕ ಸರ್ವತೋಮುಖ ಅಭಿವೃಧ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಮುಖ್ಯವಾಗಿ ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ ಅಭಿವೃಧ್ಧಿ, ಕರಾವಳಿ ಮೀನುಗಾರಿಕೆ ಮೂಲಭೂತ ಸೌಲಭ್ಯ ಮತ್ತು ಹಿಡುವಳಿ ನಂತರದ ಕಾರ್ಯಾಚರಣೆಗಳ ಅಭಿವೃಧ್ಧಿ, ಮೀನುಗಾರಿಕಾ ವಲಯದ ದತ್ತಾಂಶ ಮತ್ತು ಭೂಶಾಸ್ತ್ರ ಮಾಹಿತಿಯನ್ನು ಬಲಪಡಿಸುವುದು, ಮೀನುಗಾರಿಕ ವಲಯಕ್ಕೆ ಸುಸ್ಥಿರ ವ್ಯವಸ್ಥೆ ಹಾಗೂ ಮೀನುಗಾರರ ಕಲ್ಯಾಣಕ್ಕಾಗಿ ರಾಷ್ಟ್ರೀಯ ಯೋಜನೆಗಳಾಗಿವೆ.
ಆಸಕ್ತರು ಯೋಜನೆಯ ಸದುಪಯೋಗ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲೂಕು ಮೀನುಗಾರಿಕಾ ಅಧಿಕಾರಿಗಳನ್ನು/ಇಲಾಖೆಯನ್ನು ಸಂಪರ್ಕಿಸಲು ತಿಳಿಸಿದೆ. ಹಾಗೂ ಹೆಚ್ಚಿನ ವಿವರಗಳನ್ನು ವೆಬ್‍ಸೈಟ್ ವಿಳಾಸ http://www.fisherieskarnatakagov.in ನಲ್ಲಿ ಪಡೆಯಬಹುದು ಎಂದು ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.