VIDEO: ಜೆಡಿಎಸ್ ಮುಖಂಡನ ಹತ್ಯೆ ಮಾಡಿದವರ ಶೂಟೌಟ್'ಗೆ ಆದೇಶ; ಸಿಎಂ ಯೂಟರ್ನ್

ತಾವು ಭಾವೋದ್ವೇಗದಲ್ಲಿ ಶೂಟೌಟ್ ಪದ ಬಳಸಿದ್ದಾಗಿಯೂ, ಅದೊಂದು ಭಾವನಾತ್ಮಕ ಪ್ರತಿಕ್ರಿಯೆಯೇ ಹೊರತು ಆದೇಶವಲ್ಲ ಎಂದು ಹೇಳುವ ಮೂಲಕ ಸಿಎಂ ಯೂಟರ್ನ್ ಹೊಡೆದಿದ್ದಾರೆ. 

Last Updated : Dec 25, 2018, 10:54 AM IST
VIDEO: ಜೆಡಿಎಸ್ ಮುಖಂಡನ ಹತ್ಯೆ ಮಾಡಿದವರ ಶೂಟೌಟ್'ಗೆ ಆದೇಶ; ಸಿಎಂ ಯೂಟರ್ನ್ title=

ಬೆಂಗಳೂರು: ಮದ್ದೂರಿನಲ್ಲಿ ಸೋಮವಾರ ಹಾಡಹಗಲೇ ನಡೆದ ಜೆಡಿಎಸ್ ಮುಖಂಡನ ಹತ್ಯೆ ಮಾಡಿದವರನ್ನು ಶೂಟೌಟ್ ಮಾಡಿ ಎಂದು ಆದೇಶಿಸಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇದೀಗ ಯೂಟರ್ನ್ ಹೊಡೆದಿದ್ದಾರೆ. 

ಜೆಡಿಎಸ್ ಮುಖಂಡನ ಹತ್ಯೆಗೆ ಹಳೆಯ ದ್ವೇಷ ಕಾರಣವಾಯಿತೇ?

ಕೊಲೆಯಾದ ಜೆಡಿಎಸ್ ಮುಖಂಡ ಬಹಳ ಒಳ್ಳೆಯವನಿದ್ದ. ಅಂತಹವನನ್ನು ಕೊಲೆ ಮಾಡಿದವರನ್ನು ಯಾವುದೇ ಕಾರಣಕ್ಕೂ ಬಿಡಬೇಡಿ. ಶೂಟೌತ್ ಮಾಡಿ ಎಂದು ಹೇಳಿದ್ದರು. ಆದರೀಗ ತಾವು ಭಾವೋದ್ವೇಗದಲ್ಲಿ ಶೂಟೌಟ್ ಪದ ಬಳಸಿದ್ದಾಗಿಯೂ, ಅದೊಂದು ಭಾವನಾತ್ಮಕ ಪ್ರತಿಕ್ರಿಯೆ ಎಂದು ಹೇಳುವ ಮೂಲಕ ಸಿಎಂ ಯೂಟರ್ನ್ ಹೊಡೆದಿದ್ದಾರೆ. 

ಮದ್ದೂರಿನಲ್ಲಿ ಜೆಡಿಎಸ್ ಮುಖಂಡನ ಬರ್ಬರ ಹತ್ಯೆ; ಪ್ರತಿಭಟನೆ

ಸೋಮವಾರ ವಿಜಯಪುರ ಹೆಲಿಪ್ಯಾಡ್‌ನಲ್ಲಿ ಇಳಿದ ತಕ್ಷಣವೇ ಫೋನ್‌ ಮೂಲಕ ಪೊಲೀಸ್‌ ಅಧಿಕಾರಿಗಳ ಜತೆ ಮಾತನಾಡಿದ್ದ ಕುಮಾರಸ್ವಾಮಿ ಅವರು, "ಕೊಲೆ ಮಾಡಿದವರನ್ನು ಶೂಟೌಟ್‌ ಮಾಡಿ ನಾನು ತಲೆ ಕೆಡಿಸಿಕೊಳ್ಳಲ್ಲ. ಕೊಲೆಯಾದವ ಪಕ್ಷದ ಕಾರ್ಯಕರ್ತ ಪಾಪ ಒಳ್ಳೆಯವನಿದ್ದ. ಅಂತಹವನನ್ನ ಕೊಲೆ ಮಾಡಿದ ಹಂತಕನನ್ನ ಯಾವುದೇ ಕಾರಣಕ್ಕೂ ಬಿಡಬೇಡಿ" ಎಂದು ಹೇಳಿದ್ದ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಆ ವೀಡಿಯೋ ಸಾಕಷ್ಟು ವಿವಾದಕ್ಕೂ ಕಾರಣವಾಗಿದೆ.

ತಮ್ಮ ಹೇಳಿಕೆ ವಿವಾದಗಳಿಗೆ ಕಾರಣವಾದ ಬೆನ್ನಲ್ಲೇ "ಈ ಪ್ರಕರಣ ಕುರಿತು ಮಾಹಿತಿ ಪಡೆಯುವ ಸಂದರ್ಭದಲ್ಲಿ ಬಳಸಿದ 'ಶೂಟೌಟ್' ಪದ ಭಾವನಾತ್ಮಕ ಪ್ರತಿಕ್ರಿಯೆಯೇ ಹೊರತು, ಆದೇಶವಲ್ಲ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ" ಎಂದು ಸಿಎಂ ಕಚೇರಿ ಮಾಧ್ಯಮಗಳ ಮೂಲಕ ಸ್ಪಷ್ಟನೆ ನೀಡಿದೆ.
 

Trending News