ಬೆಂಗಳೂರು: ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಂಬಂಧ ಮತದಾರರಲ್ಲಿ ತಮ್ಮ ಮತಗಟ್ಟೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಕ್ಕೂರು ಬಡಾವಣೆಯ ನ್ಯೂ ಕೃಷ್ಣ ಸಾಗರ ಫುಡ್ ಕೋರ್ಟ್ ವೃತ್ತದಿಂದ ಹಮ್ಮಿಕೊಂಡಿದ್ದ 'ನಮ್ಮ ನಡೆ ಮತಗಟ್ಟೆಯ ಕಡೆ' ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಮುಖ್ಯ ಚುನಾವಣಾಧಿಕಾರಿಯಾದ ಶ್ರೀ ಮನೋಜ್ ಕುಮಾರ್ ಮೀನಾ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮತ್ತು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು.
ಪಾಲಿಕೆಯ ಎಲ್ಲಾ ಅಧಿಕಾರಿ/ಸಿಬ್ಬಂದಿ ವರ್ಗ, ನಾಗರೀಕರು, ವಿದ್ಯಾರ್ಥಿಗಳು, ಸೈಕಲ್, ಕಾಲ್ನಡಿಗೆ ಮೂಲಕ ನಡೆದ ಜಾಥ ಕಾರ್ಯಕ್ರಮದಲ್ಲಿ ಎಲ್.ಇ.ಡಿ ಪರೆದೆಯುಳ್ಳ ವಾಹನದಲ್ಲಿ ಚುನಾವಣಾ ಗೀತೆಯನ್ನು ಬಳಸಿಕೊಂಡು, ರಸ್ತೆಯುದ್ದಕ್ಕೂ ಬಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ, ಘೋಷಣೆಗಳನ್ನು ಕೂಗುತ್ತಾ ರಸ್ತೆಯುದ್ದಕ್ಕೂ ಮತದಾರರಲ್ಲಿ ಎಪ್ರಿಲ್ 26 ರಂದು ತಪ್ಪದೆ ಮತದಾನ ಮಾಡಲು ಮನವರಿಕೆ ಮಾಡಲಾಯಿತು.
ಇದನ್ನೂ ಓದಿ: KPSC : ಕೆಎಎಸ್ ಪೂರ್ವಭಾವಿ ಪರೀಕ್ಷೆ, ಜುಲೈ 27ಕ್ಕೆ ಮುಂದೂಡಿಕೆ
ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುವ ಕುರಿತು ಮಾಹಿತಿ ನೀಡುವುದರ ಜೊತೆಗೆ ನೈತಿಕ ಚುನಾವಣೆ ನಡೆಸುವ ಸಂಬಂಧ ಮತದಾರರಿಗಾಗಿ ಹೊರ ತಂದಿರುವ ಸಿ-ವಿಜಿಲ್, ಕೆವೈಸಿ, ಸಕ್ಷಮ್ ತಂತ್ರಾಂಶಗಳು ಸೇರಿದಂತೆ ಮತದಾರರ ಸಹಾಯವಾಣಿ-1950 ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸಲಾಯಿತು.
ಜಕ್ಕೂರು ವೃತ್ತದಲ್ಲಿ ಮಾನವ ಸರಪಳಿ ಹಾಗೂ ಜಾಗೃತಿ ಗೀತೆ:
ಜಕ್ಕೂರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಾಗರೀಕರಲ್ಲಿ ಮತದಾನ ಮಾಡಲು ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು. ಜೊತೆಗೆ ಮತದಾನದ ಕುರಿತು ಜಾಗೃತಿ ಗೀತೆಯನ್ನು ಹಾಡಲಾಯಿತು.
ಮತಗಟ್ಟೆಗಳ ಬಳಿ ಕನಿಷ್ಟ ಸೌಲಭ್ಯಗಳ ಪರಿಶೀಲನೆ:
ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ 7 ಮತಗಟ್ಟೆಗಳು ಬರಲಿದ್ದು, ಕನಿಷ್ಟ ಸೌಲಭ್ಯಗಳಿರುವುದನ್ನು ಪರಿಶೀಲಿಸಿ, ಮತದಾನದ ದಿನ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲಾ ರೀತಿಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
'ನಮ್ಮ ನಡೆ ಮತಗಟ್ಟೆಯ ಕಡೆ' ಜಾಥ ಸಾಗಿದ ಹಾದಿ:
ಜಕ್ಕೂರು ಬಡಾವಣೆಯ ನ್ಯೂ ಕೃಷ್ಣ ಸಾಗರ ಫುಡ್ ಕೋರ್ಟ್ ನಿಂದ, ಜಕ್ಕೂರು ಮುಖ್ಯ ರಸ್ತೆ ಮೂಲಕ, ಜಕ್ಕೂರು ವೃತ್ತ, ಶ್ರೀ ಕೆ.ವಿ ಭೈರೇಗೌಡ ವೃತ್ತ, ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯವರೆಗು ಸಾಗಿ ಮತಗಟ್ಟೆಯ ಆವರಣದಲ್ಲಿ "ಚುನಾವಣಾ ಪರ್ವ ದೇಶದ ಗರ್ವ" ಎಂಬ ದ್ಯೇಯ ಒಳಗೊಂಡಿರುವ ಬಾವುಟವನ್ನು ದ್ವಜಾರೋಹಣ ಮಾಡಲಾಯಿತು.
ನಗರದಾದ್ಯಂತ 'ನಮ್ಮ ನಡೆ ಮತಗಟ್ಟೆಯ ಕಡೆ' ಕಾರ್ಯಕ್ರಮ ಆಯೋಜನೆ:
ನಗರದಾದ್ಯಂತ ವಾರ್ಡ್ ವಾರು ಅಪರ ಜಿಲ್ಲಾ ಚುನಾವಣಾಧಿಕಾರಿ, ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಜಾಥ ನಡೆಸಿ, ಸ್ಥಳೀಯ ಮತಗಟ್ಟೆ ವ್ಯಾಪ್ತಿಯ ಮತದಾರರೊಂದಿಗೆ ಮತದಾನ ಮಾಡುವ ಮತಗಟ್ಟೆಗೆ ಭೇಟಿ ನೀಡಿ ಮತದಾರರಿಗೆ ಕನಿಷ್ಟ ಮೂಲಭೂತ ಸೌಕರ್ಯಗಳ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಲಾಯಿತು.
ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಕಾಂತರಾಜು, ವಲಯ ಆಯುಕ್ತರಾದ ಕರೀಗೌಡ, ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್, ಉಪ ಆಯುಕ್ತರಾದ ಮಮತಾ, ಚುನಾವಣಾ ರಾಯಭಾರಿಯಾದ ನೀತು ವನಜಾಕ್ಷಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ನೇಹಾ ಹತ್ಯೆ ವೈಯಕ್ತಿಕ..! ಸಿಎಂ, ಗೃಹ ಸಚಿವರ ಮಾತಿಗೆ ಜೋಶಿ ಆಕ್ರೋಶ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.