ಸಿದ್ದರಾಮಯ್ಯ ರಾಜೀನಾಮೆ ಒತ್ತಡದ ಮಧ್ಯೆಯೇ ಕೇಳಿ ಬಂತು ಹೊಸ ಸಿಎಂ ಅಭ್ಯರ್ಥಿ ಹೆಸರು!ಹೈಕಮಾಂಡ್ ಒಲವು ಇವರ ಕಡೆಗೇ !

ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎನ್ನುವ ಕೂಗು ಜೋರಾಗ ತೊಡಗಿದೆ. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆಯೂ ಏಳುತ್ತದೆ. 

Written by - Ranjitha R K | Last Updated : Sep 25, 2024, 06:40 PM IST
  • ಮುಡಾ ಹಗರಣದಲ್ಲಿ ಸಿಎಂಗೆ ಶಾಕ್ ಮೇಲೆ ಶಾಕ್
  • ಹೈಕೋರ್ಟ್ ಆದೇಶವನ್ನ ಜನಪ್ರತಿನಿಧಿಗಳ ನ್ಯಾಯಾಲಯ ಎತ್ತಿಹಿಡಿದಿದೆ
  • ಲೋಕಾಯುಕ್ತ ಎಸ್‌ಪಿ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲು ಮಾಡಲಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಒತ್ತಡದ ಮಧ್ಯೆಯೇ ಕೇಳಿ ಬಂತು ಹೊಸ ಸಿಎಂ ಅಭ್ಯರ್ಥಿ ಹೆಸರು!ಹೈಕಮಾಂಡ್ ಒಲವು ಇವರ ಕಡೆಗೇ !

ಬೆಂಗಳೂರು : ಮುಡಾ ಹಗರಣದಲ್ಲಿ ಸಿಎಂಗೆ ಶಾಕ್ ಮೇಲೆ ಶಾಕ್ . ಹೈಕೋರ್ಟ್ ಆದೇಶವನ್ನ ಜನಪ್ರತಿನಿಧಿಗಳ ನ್ಯಾಯಾಲಯ ಎತ್ತಿಹಿಡಿದಿದೆ.ಲೋಕಾಯುಕ್ತ ತನಿಖೆಗೂ ಆದೇಶ ಹೊರಡಿಸಿದೆ.ಸರ್ಕಾರ ಹಾಗೂ ರಾಜಭವನ ಸಮರದಲ್ಲಿ ಗವರ್ನರ್ ಮೇಲುಗೈ ಸಾಧಿಸಿದಂತಾಗಿದೆ.

Add Zee News as a Preferred Source

ಎಫ್‌ಐಆರ್‌ ದಾಖಲಿಸುವಂತೆ ಮೈಸೂರು ಲೋಕಾಯುಕ್ತ ಎಸ್‌ಪಿಗೆ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ತೀರ್ಪು ನೀಡಿದ್ದಾರೆ.ಸಿಆರ್‌ಪಿಸಿ ಸೆಕ್ಷನ್‌ 156/3 ರ ಅಡಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದೆ.ಕೋರ್ಟ್ ಆದೇಶ ಅನ್ವಯ ಹಾಗೂ ಲೋಕಾಯುಕ್ತ ಎಡಿಜಿಪಿ ಮನೀಷ್‌ ಕರ್ಬಿಕರ್‌ ಸೂಚನೆ ಮೇರೆಗೆ ಮೈಸೂರಿನ ಲೋಕಾಯುಕ್ತ ಎಸ್‌ಪಿ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲು ಮಾಡಲಿದ್ದಾರೆ.

ಇದನ್ನೂ ಓದಿ : ಗೇಟ್ ಬಿದ್ದು ಮೃತಪಟ್ಟ ಬಾಲಕನ ಕುಟುಂಬಕ್ಕೆ 10 ಲಕ್ಷ ಮೊತ್ತದ ಪರಿಹಾರ ಚೆಕ್ ವಿತರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್

ಇವೆಲ್ಲದರ ಮಧ್ಯೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎನ್ನುವ ಕೂಗು ಜೋರಾಗ ತೊಡಗಿದೆ. ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆಯೂ ಏಳುತ್ತದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ರಾಜ್ಯದ ಚುಕ್ಕಾಣಿ ಹಿಡಿಯುವ ನಾಯಕನ ಹೆಸರು ಇದೀಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ.

ಸಭೆಯಲ್ಲಿ ನಡೆದ ಮಾತುಕತೆ ಬಗ್ಗೆ ಪರಮೇಶ್ವರ್ ತುಟಿ ಬಿಚ್ಚಿಲ್ಲ.ಆದರೆ ಮೂಡಾ ನಿವೇಶನ ಹಂಚಿಕೆ ಅವ್ಯವಹಾರ ಪ್ರಕರಣದ ಆರೋಪದ ಮೇಲೆ ಸಿದ್ದರಾಮಯ್ಯ ಒಂದು ವೇಳೆ ರಾಜೀನಾಮೆ ನೀಡಿದರೆ ಆ ಸ್ಥಾನಕ್ಕೆ ಏರುವ ನಾಯಕ ಯಾರು ಎನ್ನುವ ಪ್ರಶ್ನೆ ಇದೀಗ ಎದ್ದಿದೆ.ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಸಂದರ್ಭ ಎದುರಾದರೆ ಆ ಸ್ಥಾನವನ್ನು ಅಲಂಕರಿಸುವ ನಾಯಕನ ಹೆಸರು ಇದೀಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. 

ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆರಂಭದಲ್ಲಿ ಈ ಸ್ಥಾನಕ್ಕೆ ಪರಿಗಣಿಸಲಾಗಿತ್ತಾದರೂ, ಇತ್ತೀಚೆಗೆ ಅವರ ಕುಟುಂಬದವರು ನಿರ್ವಹಿಸುತ್ತಿರುವ ಟ್ರಸ್ಟ್‌ಗೆ ಕೆಐಎಡಿಬಿ ನಿವೇಶನ ಹಂಚಿಕೆಯಾಗಿದೆ ಎನ್ನುವ ವಿವಾದದ ಕರಿನೆರಳು ಖರ್ಗೆ ಮೇಲಿದೆ. ಎಂ.ಬಿ.ಪಾಟೀಲ್ ಗೂ ಭೂ ಸಂಬಂಧಿತ ಸಮಸ್ಯೆ ತಡೆಯಾಗಬಹುದು.ಕೆಪಿಸಿಸಿ ಮಾಜಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಈ ಹುದ್ದೆಯನ್ನು ಅಲಂಕರಿಸುವಲ್ಲಿ ಆಸಕ್ತಿ ಹೊಂದಿದ್ದಾರೆ.ಆದರೆ ಅವರನ್ನು ಈ ಸ್ಥಾನಕ್ಕೆ ಪರಿಗಣಿಸುವುದು ಕಷ್ಟ ಎನ್ನಲಾಗಿದೆ. 

ಇದನ್ನೂ ಓದಿ : ರಾಜೀನಾಮೆ ಕೊಟ್ಟು ಸಿಬಿಐ ತನಿಖೆಗೆ ಸಹಕರಿಸಿ : ಬಿ.ವೈ. ವಿಜಯೇಂದ್ರ ಒತ್ತಾಯ

ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ್ 2013ರಲ್ಲಿ ಅನಿರೀಕ್ಷಿತ ಸೋಲು ಕಂಡ ನಂತರ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿ ಹೋಯಿತು.ಇದೀಗ ಎಲ್ಲಾ ಸಾಧ್ಯತೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನೋಡಿದರೆ ಮೊದಲು ಕೇಳಿ ಬರುವ ಹೆಸರು ಜಿ. ಪರಮೇಶ್ವರ್.   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News