ಬೆಂಗಳೂರು: ಅಮಿತ್ ಶಾ ರವರ ಮಹಾದಾಯಿ ಸಮಸ್ಯೆಯ ಕುರಿತ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು "ಅಮಿತ್ ಶಾರವರೆ ಚುನಾವಣೆಗೇಕೆ ಕಾಯುತ್ತಿರಿ, ಈಗಲೇ ಮಹಾದಾಯಿ ಸಮಸ್ಯೆ ಬಗೆಹರಿಸಿ" ಎಂದು ವಿನಂತಿಸಿಕೊಂಡಿದ್ದಾರೆ.
In Karnataka all political parties have worked through consensus on issues of land, water & language (ನೆಲ ಜಲ ಭಾಷೆ).
So, @AmitShah ರವರೆ why are you now prolonging the misery of our farmers. Why wait for elections? Let us solve it now.
Let us do ಕಾಯಕ now. #NoMoreJumlas https://t.co/BtErDeiKEZ
— Siddaramaiah (@siddaramaiah) February 26, 2018
ಅಮಿತ್ ಶಾ ರವರು ಕಲ್ಬುರ್ಗಿಯಲ್ಲಿ ಮಾತನಾಡುತ್ತಾ ಬಿಜೆಪಿಯನ್ನು ಅಧಿಕಾರಕ್ಕೆ ತಂದರೆ ಮಹಾದಾಯಿ ಸಮಸ್ಯೆಯನ್ನು ಬಗೆ ಹರಿಸಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈಗ ಈ ಕುರಿತಾಗಿ ಪ್ರತಿಕ್ರಯಿಸಿರುವ ಸಿದ್ದರಾಮಯ್ಯ"ಕರ್ನಾಟಕದಲ್ಲಿ ನೆಲ-ಜಲ-ಭಾಷೆಗಳ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮಾತುಕತೆಯ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಲು ಯತ್ನಿಸುತ್ತವೆ. ಆದ್ದರಿಂದ ಅಮಿತ್ ಶಾ ಅವರೇ ನಮ್ಮ ರೈತರ ಸಂಕಟಗಳನ್ನು ಚುನಾವಣೆಯರೆಗೂ ಏಕೆ ವಿಸ್ತರಿಸುವಿರಿ ಈಗಲೇ ಪರಿಹರಿಸಿ. ಈಗ ಮೊದಲು ಕಾಯಕ ಮಾಡಿ" ಎಂದು ಅವರು ಟ್ವೀಟ್ ಮೂಲಕ ಅಮಿತ್ ಶಾ ರವರ ಹೇಳಿಕೆ ಪ್ರತಿಕ್ರಿಯೆ ನೀಡಿದ್ದಾರೆ.