ಅಧಿವೇಶನದ ನಂತರ ಡೆಲ್ಲಿ ಪ್ರವಾಸ: ಡಿಕೆಶಿ ವಿರುದ್ಧ ದೂರು ಕೊಡ್ತಾರಾ ಸಿದ್ದರಾಮಯ್ಯ?

ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆಯ ಕ್ರೆಡಿಟ್ ಪಡೆಯಲು ಡಿಕೆಶಿ ಕಸರತ್ತು ನಡೆಸುತ್ತಿದ್ದಾರೆ ಎಂಬುದು ಕಂಡುಬಂದಿದೆ. ಹೀಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮುನಿಸಿಕೊಂಡು ಏಕಾಂಗಿಯಾಗಿ ಹೆಜ್ಜೆ ಹಾಕಿದರು.

Written by - Prashobh Devanahalli | Edited by - Puttaraj K Alur | Last Updated : Mar 6, 2022, 01:54 PM IST
  • ಬಜೆಟ್ ಅಧಿವೇಶನದ ಬಳಿಕ ದೆಹಲಿ ಪ್ರವಾಸ ಕೈಗೊಳ್ಳಲಿರುವ ಸಿದ್ದರಾಮಯ್ಯ
  • ಕಾಂಗ್ರೆಸ್ ಹೈಕಮಾಂಡ್ ಬಳಿ ಡಿಕೆಶಿ ವಿರುದ್ಧ ದೂರು ನೀಡಲಿದ್ದಾರಾ ಸಿದ್ದು?
  • ತಮಗೊಬ್ಬರಿಗೆ ಮಾತ್ರ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿರುವ ವಿಪಕ್ಷ ನಾಯಕ
ಅಧಿವೇಶನದ ನಂತರ ಡೆಲ್ಲಿ ಪ್ರವಾಸ: ಡಿಕೆಶಿ ವಿರುದ್ಧ ದೂರು ಕೊಡ್ತಾರಾ ಸಿದ್ದರಾಮಯ್ಯ? title=
ಮುಗಿಯದ ಸಿದ್ದರಾಮಯ್ಯ-ಡಿಕೆಶಿ ನಡುವೆ ಶೀತಲ ಸಮರ!

ಬೆಂಗಳೂರು: ಮೇಕೆದಾಟು ಪಾದಯಾತ್ರೆ 2.0(Mekedatu Padaytre 2.0)ಗೂ ಮುನ್ನ ಹೈಕಮಾಂಡ್ ಭೇಟಿಯ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಇರುವ ಮುಸುಕಿನ ಗುದ್ದಾಟ ಸದ್ಯಕ್ಕೆ ಬೇಡವೆಂದರೂ ಶಿತಲಸಮರ ಮುಂದುವರೆದಿದೆ.

ಮುಗಿಯದ ಸಿದ್ದರಾಮಯ್ಯ-ಡಿಕೆಶಿ ನಡುವೆ ಶೀತಲ ಸಮರ!

ಪಾದಯಾತ್ರೆಯಿಂದ ಚುನಾವಣೆಯವರೆಗೆ ರಾಜ್ಯ ಕೆಪಿಸಿಸಿ ನಾಯಕರಲ್ಲಿ ಒಗ್ಗಟ್ಟಿರಲಿ ಎಂದು ಕಾಂಗ್ರೆಸ್ ಹೈಕಮಾಂಡ್(Congress High Command) ಡಿಕೆಶಿ ಮತ್ತು ಸಿದ್ದರಾಮಯ್ಯ(Siddaramaiah)ಗೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಒಗ್ಗಟ್ಟಿನಿಂದ ಪಾದಯಾತ್ರೆ ಆರಂಭಿಸಿದ ನಾಯಕರ ನಡುವೆ 2ನೇ ಹಂತದ ಪಾದಯಾತ್ರೆ ಪ್ರಾರಂಭವಾದ 2 ದಿನಕ್ಕೆ ಮುನಿಸು ಆರಂಭವಾಯಿತು.

ಇದನ್ನೂ ಓದಿ: Congress : ಮೃತ ನವೀನ್ ಕುಟುಂಬಕ್ಕೆ ಸಾಂತ್ವಾನ ಹೇಳಿದ 'ಕೈ' ನಾಯಕರು

ಮೇಕೆದಾಟು ಕಾಂಗ್ರೆಸ್ ಪಾದಯಾತ್ರೆಯ ಕ್ರೆಡಿಟ್ ಪಡೆಯಲು ಡಿಕೆಶಿ(DK Shivakumar) ಕಸರತ್ತು ನಡೆಸುತ್ತಿದ್ದಾರೆ ಎಂಬುದು ಕಂಡುಬಂದಿದೆ. ಹೀಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮುನಿಸಿಕೊಂಡು ಏಕಾಂಗಿಯಾಗಿ ಹೆಜ್ಜೆ ಹಾಕಿದರು. ಇದಲ್ಲದೆ ಬೆಂಗಳೂರಿನಲ್ಲಿ ಹೂವಿನ ಹಾರ ಹಾಕುವಲ್ಲಿ ಕೂಡ ತಾರತಮ್ಯ ಆಗಿದ್ದು, ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಇನ್ನು ಮೇಕೆದಾಟು ಪಾದಯಾತ್ರೆಯ ಸಮಾರೋಪ ಸಮಾವೇಶದಲ್ಲಿ ಸಿದ್ದರಾಮಯ್ಯರಿಗೆ ಕೊನೆಯಲ್ಲಿ ಭಾಷಣ ಅವಕಾಶ ನೀಡಲಾಯಿತು.

ಹೀಗಾಗಿ ಬಜೆಟ್ ಅಧಿವೇಶನ(Budget Session)ಮುಗಿಸಿದ ಬಳಿಕ ದೆಹಲಿ ಪ್ರವಾಸ ಕೈಗೊಳ್ಳಲಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ತಮ್ಮೊಬ್ಬರಿಗೆ ಮಾತ್ರ ಭೇಟಿಗೆ ಅವಕಾಶ ನೀಡುವಂತೆ ಕೇಳಿದ್ದಾರೆ. ಹೈಕಮಾಂಡ್ ಭೇಟಿ ವೇಳೆ ಸಿದ್ದರಾಮಯ್ಯ(Siddaramaiah)ನವರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ದೂರು ನಿಡ್ತಾರಾ ಅನ್ನೋ ಮಾತುಗಳು ಸಿದ್ದು ಆಪ್ತ ವಲಯದಲ್ಲಿ ಕೇಳಿಬಂದಿದೆ.    

ಇದನ್ನೂ ಓದಿ: ಮೇಕೆದಾಟು ವಿಚಾರವನ್ನಿಟ್ಟುಕೊಂಡು ರಾಷ್ಟ್ರೀಯ ಪಕ್ಷಗಳಿಂದ ಚುನಾವಣಾ ಆಟ: ಎಚ್​ಡಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News