close

News WrapGet Handpicked Stories from our editors directly to your mailbox

ಫಲಿತಾಂಶಕ್ಕೂ ಮುನ್ನವೇ ಸಿದ್ಧವಾಯ್ತು ಜಯಭೇರಿ ಬ್ಯಾನರ್!

ನಾಲ್ಕನೇ ಸುತ್ತಿನ ಮತಎಣಿಕೆಯಲ್ಲಿ 20 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ.  

Updated: Nov 6, 2018 , 10:04 AM IST
ಫಲಿತಾಂಶಕ್ಕೂ ಮುನ್ನವೇ ಸಿದ್ಧವಾಯ್ತು ಜಯಭೇರಿ ಬ್ಯಾನರ್!

ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿರುವ ಅನಿತಾ ಕುಮಾರಸ್ವಾಮಿ ಗೆಲುವು ಖಚಿತವಾಗಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಜಯಭೇರಿ ಬ್ಯಾನರ್ ಸಿದ್ಧವಾಗಿಸಿಕೊಂಡಿದ್ದಾರೆ. 

ಮೊದಲನೇ ಸುತ್ತಿನಿಂದಲೂ ಮುನ್ನಡೆ ಸಾಧಿಸಿರುವ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ನಾಲ್ಕನೇ ಸುತ್ತಿನ ಮತಎಣಿಕೆಯಲ್ಲಿ 20 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ. ಹೀಗಾಗಿ ಗೆಲುವು ಬಹುತೇಕ ಖಚಿತವಾಗಿದೆ. 

ಅನಿತಾ ಕುಮಾರಸ್ವಾಮಿ ಅವರಿಗೆ ಪ್ರಮುಖ ಸ್ಪರ್ಧಿಯಾಗಿದ್ದ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಲ್.ಚಂದ್ರಶೇಖರ್ ಅವರು, ಮತದಾನ ಇನ್ನೇನು ಎರಡೇ ದಿನಗಳಿರುವಾಗ ಚುನಾವಣಾ ಕಣದಿಂದ ಹಿಂದೆ ಸರಿದು ಭಾರತೀಯ ಜನತಾ ಪಕ್ಷಕ್ಕೆ ಕೈಕೊಟ್ಟು ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ, ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಗೆಲುವು ಬಹುತೇಕ ಖಚಿತವಾಗಿದೆ.