3 ದಿನಗಳ ನಂತರ, ಲಕ್ಷ್ಮೀಗೆ ಸಂಬಂಧಿಸಿದ ವಿಶೇಷ ದಿನವಿದೆ, ಈ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡದಿರಿ

 ಲಕ್ಷ್ಮಿ ದೇವಿಯನ್ನು ಪೂಜಿಸಲು ಮತ್ತು ಅವಳನ್ನು ಮೆಚ್ಚಿಸಲು ಈ ದಿನ ಬಹಳ ವಿಶೇಷವಾಗಿದೆ. ಆದರೆ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಕೂಡಾ ಹೇಳಲಾಗಿದೆ.

Written by - Ranjitha R K | Last Updated : Oct 16, 2021, 04:02 PM IST
  • ಅಕ್ಟೋಬರ್ 19 ರಂದು ಈ ವರ್ಷದ ಶರದ್‌ ಹುಣ್ಣಿಮೆ
  • ಈ ಕೆಲಸವನ್ನು ತಪ್ಪಿಯೂ ಮಾಡಬೇಡಿ
  • ಈ ಕೆಲಸಗಳನ್ನು ಮಾಡಿದರೆ ಲಕ್ಷ್ಮೀಯ ಕೋಪಕ್ಕೆ ಕಾರಣವಾಗಬಹುದು
3 ದಿನಗಳ ನಂತರ, ಲಕ್ಷ್ಮೀಗೆ ಸಂಬಂಧಿಸಿದ ವಿಶೇಷ ದಿನವಿದೆ, ಈ ದಿನ ತಪ್ಪಿಯೂ ಈ ಕೆಲಸಗಳನ್ನು ಮಾಡದಿರಿ

ನವದೆಹಲಿ : ವರ್ಷದ ಕೆಲವು ದಿನಗಳು ಮಹಾಲಕ್ಷ್ಮೀಯ ಆಶೀರ್ವಾದ ಪಡೆಯಲು ಬಹಳ ವಿಶೇಷವಾಗಿರುತ್ತದೆ.  ಶರದ್ ಹುಣ್ಣಿಮೆ (Sharad Purnima) ಕೂಡಾ ಇಂಥ ದಿನಗಳಲ್ಲಿ ಒಂದು.  ಶರದ್ ಹುಣ್ಣಿಮೆಯನ್ನು ಅಶ್ವಿನಿ ತಿಂಗಳ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಈ ದಿನ ಲಕ್ಷ್ಮೀ ದೇವಿಯು (Godess Lakshmi) ಸಮುದ್ರದ ಮಂಥನದ ಸಮಯದಲ್ಲಿ ಕಾಣಿಸಿಕೊಂಡಿದ್ದಳು ಎನ್ನಲಾಗಿದೆ. ಕೆಲವು ಸ್ಥಳಗಳಲ್ಲಿ ಶರದ್ ಹುಣ್ಣಿಮೆಯನ್ನು ಕೋಜಗಿರಿ ಹುಣ್ಣೆಮೆ ಎಂದೂ ಕರೆಯಲಾಗುತ್ತದೆ. ಲಕ್ಷ್ಮಿ ದೇವಿಯನ್ನು ಪೂಜಿಸಲು (Lakshmi pooja) ಮತ್ತು ಅವಳನ್ನು ಮೆಚ್ಚಿಸಲು ಈ ದಿನ ಬಹಳ ವಿಶೇಷವಾಗಿದೆ. ಆದರೆ ಕೆಲವು ಕೆಲಸಗಳನ್ನು ಮಾಡಬಾರದು ಎಂದು ಕೂಡಾ ಹೇಳಲಾಗಿದೆ. ಈ ವರ್ಷದ, ಶರದ್ ಹುಣ್ಣೆಮೆ ಅಕ್ಟೋಬರ್ 19 ರಂದು ಅಂದರೆ ಮೂರು ದಿನಗಳ ಬಳಿಕ ಬರಲಿದೆ. 

ಶರದ್ ಹುಣ್ಣಿಮೆಯಂದು  ಕೆಲಸವನ್ನು ಮಾಡಬಾರದು : 
-ಶರದ್ ಹುಣ್ಣಿಮೆಯಂದು (Sharad Purnima)  ತಪ್ಪಿಯೂ ಮಾಂಸಾಹಾರ ಮತ್ತು ಮದ್ಯ ಸೇವಿಸಬೇಡಿ. ಒಂದು ವೇಳೆ ಈ ದಿನ ಮಾಂಸಾಹಾರ (Nonveg), ಮದ್ಯ ಸೇವಿಸಿದರೆ ಹಣಕಾಸಿನ ತೊಂದರೆಗೆ ಸಿಲುಕಬಹುದು. 

-ಶರದ್ ಹುಣ್ಣೆಮೆಯ  ದಿನದಂದು ಹಣದ ವಹಿವಾಟುಗಳನ್ನು ಮಾಡಬೇಡಿ. ಇದು ಹಣದ ನಷ್ಟಕ್ಕೆ ಕಾರಣವಾಗುತ್ತದೆ. 

ಇದನ್ನೂ ಓದಿ : Saturday Tips: ಶನಿವಾರ ಈ ವಸ್ತುಗಳನ್ನು ಖರೀದಿಸಿದರೆ ದೊಡ್ಡ ಅನಾಹುತವೇ ಎದುರಾಗಬಹುದು

-ಈ ದಿನ ಬ್ರಹ್ಮಚರ್ಯವನ್ನು ಅನುಸರಿಸಬೇಕು, ಇಲ್ಲದಿದ್ದರೆ ವೈವಾಹಿಕ ಜೀವನದಲ್ಲಿ (Married life) ಸಮಸ್ಯೆಗಳು ಉದ್ಭವಿಸುತ್ತವೆ. 

-ಶರದ್ ಹುಣ್ಣೆಮೆಯ ದಿನ, ಮದುವೆಯಾದ ಮಹಿಳೆಯರಿಗೆ ಆಹಾರವನ್ನು (food) ನೀಡಬೇಕು. ಹಾಗೆಯೇ ಕೆಲವು ಉಡುಗೊರೆಗಳನ್ನು ನೀಡಬೇಕು. ಹೀಗೆ ಮಾಡಿದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ.  

-ಸೂರ್ಯಾಸ್ತದ ಮೊದಲು ಈ ದಿನದಂದು ದಾನ (donation) ನೀಡಬೇಕು. ಆದರೆ ನೆನಪಿರಲಿ ಸೂರ್ಯಾಸ್ತದ ನಂತರ ತಪ್ಪಿಯೂ ದಾನ ನೀಡಲು  ಹೋಗಬೇಡಿ.

ಇದನ್ನೂ ಓದಿ : Wall Clock Vastu: ಗೋಡೆ ಗಡಿಯಾರದ ಬಗ್ಗೆ ಎಂದಿಗೂ ಈ ತಪ್ಪುಗಳು ಆಗದಂತೆ ನಿಗಾವಹಿಸಿ

-ಈ ದಿನ ಸಾಧ್ಯವಾದಷ್ಟು ಕರಿದ ಪದಾರ್ಥಗಳಿಂದ ದೂರವಿರಿ.  

-ಶರದ್ ಪೂರ್ಣಿಮೆಯಂದು ಸೂರ್ಯಾಸ್ತದ ನಂತರ ಮಹಿಳೆಯರು ತಮ್ಮ ಕೂದಲನ್ನು ಬಾಚಿಕೊಳ್ಳಬಾರದು. ಹಾಗೆ ಮಾಡುವುದು ಅಶುಭ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News