ನವದೆಹಲಿ: ನಮಗೆ ಪ್ರತಿನಿತ್ಯ ಅಥವಾ ಆಗಾಗ ಕನಸುಗಳು ಬೀಳುತ್ತಿರುತ್ತವೆ. ಇವುಗಳಲ್ಲಿ ಕೆಲವು ಒಳ್ಳೆಯ ಕನಸುಗಳಾದರೆ, ಕೆಲವು ಭಯಾನಕ ಅನುಭವ ನೀಡುತ್ತವೆ. ಕೆಲ ನಂಬಿಕೆಗಳ ಪ್ರಕಾರ ಈ ಕನಸುಗಳು ನಮ್ಮ ಮುಂದಿನ ಜೀವನದ ಬಗ್ಗೆ ಮುನ್ಸೂಚನೆಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಕನಸುಗಳು ಶುಭವಾಗಲಿ ಅಥವಾ ಅಶುಭವಾಗಲಿ(Auspicious or Inauspicious) ಕನಸಿನ ಗ್ರಂಥದಲ್ಲಿ ನೀಡಿರುವ ಅವುಗಳ ಅರ್ಥದಿಂದ ತಿಳಿದುಬರುತ್ತದೆ.
ಸ್ವಪ್ನ ಶಾಸ್ತ್ರ(Swapana Shastra)ದಲ್ಲಿ ಉಲ್ಲೇಖಿಸಿರುವ ಪ್ರಕಾರ ಕೆಲವು ಕನಸುಗಳನ್ನು ಅತ್ಯಂತ ಮಂಗಳಕರವೆಂದು ವಿವರಿಸಲಾಗಿದೆ. ಈ ಕನಸುಗಳು ಬಂದಾಗ ವ್ಯಕ್ತಿಯ ಅದೃಷ್ಟ ತೆರೆದುಕೊಳ್ಳುತ್ತದೆ. ಅಂತಹವರು ಅಪಾರ ಸಂಪತ್ತನ್ನು ಪಡೆಯುತ್ತಾರೆ ಜೊತೆಗೆ ಅವರ ಜೀವನದಲ್ಲಿ ಸಂತೋಷದ ವಾತಾವರಣ ಮನೆಮಾಡಿರುತ್ತದೆ. ಕನಸುಗಳ ಆಧಾರದ ಮೇಲೆ ಶ್ರೀಮಂತರಾಗುವುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಇದನ್ನೂ ಓದಿ: ಲಕ್ಷ್ಮೀ ಸ್ವರೂಪವಾಗಿಯೇ ಗಂಡನ ಮನೆ ಪ್ರವೇಶ ಮಾಡುತ್ತಾರೆಯಂತೆ ಈ ರಾಶಿಯ ಹುಡುಗಿಯರು
ಈ ಕನಸುಗಳು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತವೆ
ಕನಸಿನಲ್ಲಿ ಆನೆ(Elephant in Dream)ಯನ್ನು ನೋಡುವುದು ತುಂಬಾ ಮಂಗಳಕರ. ಕನಸಿನಲ್ಲಿ ಆನೆಯನ್ನು ನೋಡುವುದು ಎಂದರೆ ನೀವು ಎಲ್ಲಿಂದಲಾದರೂ ಸಾಕಷ್ಟು ಹಣವನ್ನು ಪಡೆಯಲಿದ್ದೀರಿ. ನಿಮ್ಮ ಕನಸಿನಲ್ಲಿ ನೀವು ಬಿಳಿ ಆನೆಯನ್ನು ನೋಡಿದರೆ, ನೀವು ತುಂಬಾ ಅದೃಷ್ಟವಂತರು ಎಂದರ್ಥ. ಈ ಕನಸು ಅಪಾರ ಸಂಪತ್ತಿನೊಂದಿಗೆ ಖ್ಯಾತಿ ಮತ್ತು ಗೌರವವನ್ನು ತರುತ್ತದೆ ಎಂದು ನಂಬಲಾಗಿದೆ. ಕನಸಿನಲ್ಲಿ ಕಮಲದ ಹೂವನ್ನು ನೋಡುವುದರಿಂದ ನೀವು ಸಾಕಷ್ಟು ಹಣವನ್ನು ಪಡೆಯಲಿದ್ದೀರಿ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಕಮಲ(Lotus)ದ ಹೂವು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ನೆಚ್ಚಿನ ಹೂವಾಗಿದೆ. ಅದರಂತೆ ಒಂದು ಗಿಳಿಯನ್ನು ನೀವು ಕನಸಿನಲ್ಲಿ ನೋಡಿದರೆ ಇದ್ದಕ್ಕಿದ್ದಂತೆ ಎಲ್ಲಿಂದಲೋ ಸಾಕಷ್ಟು ಹಣವನ್ನು ಪಡೆಯುತ್ತೀರಿ. ಉದಾಹರಣೆಗೆ ನಿಮ್ಮ ಹೆಸರಿಗೆ ಸಂಬಂಧಿಯೊಬ್ಬರು ತಮ್ಮ ಸಂಪೂರ್ಣ ಸಂಪತ್ತು ಮತ್ತು ಆಸ್ತಿಯನ್ನು ಬರೆಯುತ್ತಾರೆ.
ಇದನ್ನೂ ಓದಿ: ನಿಮ್ಮ ಕೈಯಲ್ಲಿರುವ ವಾಚ್ ಕೂಡಾ ಸಮಸ್ಯೆ ಹೆಚ್ಚಿಸಬಹುದು, ಈ ತಪ್ಪುಗಳಾಗದಂತೆ ನೋಡಿಕೊಳ್ಳಿ
ನಿಮ್ಮ ಕನಸಿನಲ್ಲಿ ಹಣ್ಣುಗಳಿಂದ ತುಂಬಿದ ಮರವನ್ನು ನೋಡುವುದು ಎಂದರೆ ನೀವು ಶೀಘ್ರದಲ್ಲೇ ಶ್ರೀಮಂತರಾಗುತ್ತೀರಿ. ನಿಮ್ಮ ಕಠಿಣ ಪರಿಶ್ರಮದ ಉತ್ತಮ ಫಲಿತಾಂಶಗಳನ್ನು ನೀವು ಪಡೆಯಲಿದ್ದೀರಿ. ವ್ಯಾಪಾರದಲ್ಲಿ ದೊಡ್ಡ ಲಾಭ ನಿಮಗೆ ಸಿಗಲಿದೆ ಎಂದರ್ಥ. ಕನಸಿನಲ್ಲಿ ಜೇನುಗೂಡನ್ನು ನೋಡುವುದು ಕೂಡ ತುಂಬಾ ಮಂಗಳಕರ. ಹಣ ಗಳಿಸುವುದರೊಂದಿಗೆ, ಇದು ಜೀವನದಲ್ಲಿ ಸಂತೋಷವನ್ನೂ ತರುತ್ತದೆ. ನಿಮ್ಮ ಕನಸಿನಲ್ಲಿ ನೀವು ಹಾಲು ಕುಡಿಯುವುದನ್ನು ನೋಡುವುದು ಎಂದರೆ ಹಣಕಾಸಿನ ಲಾಭಕ್ಕೆ ಸಂಬಂಧಿಸಿದೆ. ಆದರೆ ನೀವು ಈ ಹಣವನ್ನು ಯಾರೋ ಒಬ್ಬರ ಮೂಲಕ ಪಡೆಯುತ್ತೀರಿ. ಬ್ರೋಕರೇಜ್ ನಂತಹ ಕೆಲಸಕ್ಕೆ ಸಂಬಂಧಿಸಿದ ಜನರು ಈ ಕನಸನ್ನು ಕಂಡರೆ ಅವರು ದೊಡ್ಡ ಲಾಭವನ್ನು ಪಡೆಯುತ್ತಾರೆ.
(ವಿಶೇಷ ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.)