ಲಕ್ಷ್ಮೀ ಸ್ವರೂಪವಾಗಿಯೇ ಗಂಡನ ಮನೆ ಪ್ರವೇಶ ಮಾಡುತ್ತಾರೆಯಂತೆ ಈ ರಾಶಿಯ ಹುಡುಗಿಯರು

ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿ ಮತ್ತು 9 ಗ್ರಹಗಳ ಉಲ್ಲೇಖವಿದೆ. ಪ್ರತಿಯೊಂದು ರಾಶಿಚಕ್ರವು ತನ್ನದೇ ಆದ ಅಧಿಪತಿ ಗ್ರಹವನ್ನು ಹೊಂದಿದೆ.

Written by - Ranjitha R K | Last Updated : Oct 8, 2021, 10:26 PM IST
  • ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿ ಮತ್ತು 9 ಗ್ರಹಗಳ ಉಲ್ಲೇಖವಿದೆ
  • ರಾಶಿಚಕ್ರವು ತನ್ನದೇ ಆದ ಅಧಿಪತಿ ಗ್ರಹವನ್ನು ಹೊಂದಿದೆ.
  • ಈ ರಾಶಿಯ ಹೆಣ್ಣುಮಕ್ಕಳು ಅತ್ತೆಯ ಮನೆಗೆ ತುಂಬಾ ಅದೃಷ್ಟ
ಲಕ್ಷ್ಮೀ ಸ್ವರೂಪವಾಗಿಯೇ ಗಂಡನ ಮನೆ ಪ್ರವೇಶ ಮಾಡುತ್ತಾರೆಯಂತೆ ಈ ರಾಶಿಯ ಹುಡುಗಿಯರು  title=
ಜ್ಯೋತಿಷ್ಯದಲ್ಲಿ ಒಟ್ಟು 12 ರಾಶಿ ಮತ್ತು 9 ಗ್ರಹಗಳ ಉಲ್ಲೇಖವಿದೆ (File photo)

ನವದೆಹಲಿ : ಜ್ಯೋತಿಷಿಗಳ ಪ್ರಕಾರ, ಯಾವುದೇ ವ್ಯಕ್ತಿಯ ರಾಶಿಚಕ್ರ ಮತ್ತು ಜಾತಕದ ಪ್ರಕಾರ, ಅವನ ಗುಣಗಳು, ನ್ಯೂನತೆಗಳು ಮತ್ತು ವೃತ್ತಿಜೀವನದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಮದುವೆಯ ಬಗ್ಗೆ ಪ್ರತಿಯೊಬ್ಬ ಹುಡುಗಿಯೂ ತನ್ನದೇ ಆದ ಕನಸನ್ನು ಹೊಂದಿರುತ್ತಾಳೆ. ಒಂದು ಹುಡುಗಿ ಮದುವೆಯಾಗಿ, ಗಂಡನ ಮನೆಗೆ ಬಂದಾಗ,  ಲಕ್ಷ್ಮಿಯ ರೂಪದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತಾಳೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ.

ಜ್ಯೋತಿಷ್ಯದಲ್ಲಿ (Astrology) ಒಟ್ಟು 12 ರಾಶಿ ಮತ್ತು 9 ಗ್ರಹಗಳ ಉಲ್ಲೇಖವಿದೆ. ಪ್ರತಿಯೊಂದು ರಾಶಿಚಕ್ರವು ತನ್ನದೇ ಆದ ಅಧಿಪತಿ ಗ್ರಹವನ್ನು ಹೊಂದಿದೆ. ಈ  ಗ್ರಹಗಳು ವ್ಯಕ್ತಿಯ ಸ್ವಭಾವದ ಮೇಲೆ ಪ್ರಭಾವ ಬೀರುತ್ತವೆ. ಜ್ಯೋತಿಷ್ಯದಲ್ಲಿ, 4 ರಾಶಿಚಕ್ರ ಚಿಹ್ನೆಗಳನ್ನು ಉಲ್ಲೇಖಿಸಲಾಗಿದೆ. ಈ ರಾಶಿಯ  (Zodiac Sign) ಹೆಣ್ಣುಮಕ್ಕಳು  ಅತ್ತೆಯ ಮನೆಗೆ ತುಂಬಾ ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ. ಅವರು ಪ್ರವೇಶವಾಧ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆ ಎದುರಾಗುವುದೇ ಇಲ್ಲವಂತೆ.  ಜ್ಯೋತಿಷಿಗಳು ಈ ರಾಶಿಚಕ್ರದ ಹುಡುಗಿಯರನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸುತ್ತಾರೆ.

ಇದನ್ನೂ ಓದಿ : ನಿಮ್ಮ ಕೈಯಲ್ಲಿರುವ ವಾಚ್‌ ಕೂಡಾ ಸಮಸ್ಯೆ ಹೆಚ್ಚಿಸಬಹುದು, ಈ ತಪ್ಪುಗಳಾಗದಂತೆ ನೋಡಿಕೊಳ್ಳಿ

ಕರ್ಕ: ಈ ರಾಶಿಯ (Zodiac Sign) ಹುಡುಗಿಯರು ತಮ್ಮ ಅತ್ತೆಯ ಮನೆಗೆ ಲಕ್ಷ್ಮಿಯಾಗಿ ಬರುತ್ತಾರೆ. ಇವರು ಕರುಣೆಯ ಸ್ವಭಾವದವರಾಗಿರುತ್ತಾರೆ. ಅವರು ಮನೆಗೆ ಪ್ರವೇಶಿಸುವ ಮೂಲಕ, ದುಃಖಗಳು ಮತ್ತು ಸಂಕಟಗಳು ದೂರವಾಗುತ್ತವೆ. ಈ ರಾಶಿಯ ಹುಡುಗಿಯರು ತಮ್ಮ ಗಂಡಂದಿರಿಗೆ ತುಂಬಾ ಅದೃಷ್ಟವಂತರಾಗಿರುತ್ತಾರೆ. ಪ್ರತಿಯೊಂದು ಸನ್ನಿವೇಶದಲ್ಲೂ ಆಕೆ ತನ್ನ ಗಂಡನನ್ನು ಬೆಂಬಲಿಸುತ್ತಾಳೆ.

ತುಲಾ ರಾಶಿ (Libra) : ಜ್ಯೋತಿಷ್ಯದ ಪ್ರಕಾರ, ತುಲಾ ರಾಶಿಯ ಹುಡುಗಿಯನ್ನು ಯಾರು ವಿವಾಹವಾಗುತ್ತಾರೆಯೋ,  ಅವರ ಭವಿಷ್ಯ ಸಂಪೂರ್ಣವಾಗಿ ಬದಲಾಗುತ್ತದೆ. ಈ ರಾಶಿಯ ಹುಡುಗಿಯರು, ಸಂಬಂಧಗಳನ್ನು ಬಹಳವಾಗಿ ಗೌರವಿಸುತ್ತಾರೆ. ಈ ರಾಶಿಚಕ್ರದ ಹುಡುಗಿಯರಿಗೆ ಪ್ರತಿ ಸನ್ನಿವೇಶವನ್ನು ಹೇಗೆ ಚೆನ್ನಾಗಿ ನಿಭಾಯಿಸಬೇಕು ಎನ್ನುವುದು ತಿಳಿದಿದೆ.

ಇದನ್ನೂ ಓದಿ : Feng Shui Tips: ನಿಮ್ಮ ಪ್ರತಿ ಆಸೆಯನ್ನೂ ಪೂರೈಸಬಲ್ಲದು ನಿಮ್ಮ ಮನೆ, ಅಂಗಡಿಯಲ್ಲಿರುವ ಈ ರೀತಿಯ ಕುದುರೆ ಪ್ರತಿಮೆ

ಕುಂಭ: ಈ ರಾಶಿಯ ಹುಡುಗಿಯರನ್ನು ಗಂಡ ಮತ್ತು ಗಂಡನ ಮನೆಯವರ ಪಾಲಿಗೆ ತುಂಬಾ ಅದೃಷ್ಟವಂತರೆಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಹುಡುಗಿಯರು ಅತ್ತೆ-ಮಾವಂದಿರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾರೆ. ಈ ರಾಶಿಯವರು ಗಂಡನ ಮನೆಗೆ ಸಾಕ್ಷಾತ್‌ ಲಕ್ಷ್ಮಿಯಾಗಿಯೇ ಪ್ರವೇಶಿಸುತ್ತಾಳೆ. 

ಮೀನ ರಾಶಿ: ಮೀನ ರಾಶಿಯ ಹುಡುಗಿಯರು ತಮ್ಮ ಗಂಡಂದಿರಿಗೆ ಅತ್ಯಂತ ಪ್ರಾಮಾಣಿಕ ಮತ್ತು ನಿಷ್ಠಾವಂತರಾಗಿರುತ್ತಾರೆ. ಅವರು ತಮ್ಮ ಗಂಡನ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಾರೆ. ಈ ರಾಶಿಚಕ್ರದ ಹುಡುಗಿಯರು ಮದುವೆಯಾಗುವ (Marriage) ಯಾವುದೇ ವ್ಯಕ್ತಿ, ಅವರ ವೃತ್ತಿಜೀವನವು ಉತ್ತುಂಗಕ್ಕೇರುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News