ಚಳಿಗಾಲದಲ್ಲಿಯೂ ಗುಲಾಬಿಯಂತಹ ತ್ವಚೆ ಹೊಂದಲು ಈ ಅಡುಗೆ ವಸ್ತುವನ್ನು ಬಳಸಿ..!

Winter skin care : ಚಳಿಗಾಲದಲ್ಲಿ ಸುಂದರ ಮತ್ತು ಹೊಳೆಯುವ ತ್ವಚೆಯನ್ನು ಪಡೆಯುವುದು ಕಷ್ಟ ಅಂತ ಎಷ್ಟೋ ಜನರು ಭಾವಿಸಿರುತ್ತಾರೆ. ಆದ್ರೆ ನೀವು ಅಂದುಕೊಂಡಷ್ಟು ಕಷ್ಟವೇನಲ್ಲ. ಚಳಿಗಾಲದಲ್ಲಿ ಚರ್ಮವು ಒಣಗಲು ಪ್ರಾರಂಭಿಸಿದಾಗ ಮತ್ತು ಮುಖದ ಹೊಳಪು ಕಣ್ಮರೆಯಾದಾಗ ನೀವು ಈ ಕೆಳಗೆ ನೀಡಿರುವ ಮನೆಮದ್ದನ್ನು ಬಳಸಬಹದು.

Written by - Krishna N K | Last Updated : Nov 13, 2023, 10:18 AM IST
  • ಚಳಿಗಾಲದಲ್ಲೂ ಗುಲಾಬಿ ಬಣ್ಣದ ತ್ವಚೆ ಪಡೆಯಬಹುದು
  • ಅಡುಗೆಮನೆಯಲ್ಲಿ ಸಿಗುವ ಈ ಒಂದು ವಸ್ತು ಬಳಸಿ
  • ಬಿರುಕು ತ್ವಜೆಯಿಂದ ಸಂಪೂರ್ಣವಾಗಿ ಮುಕ್ತಿಯೊಂದಿ
ಚಳಿಗಾಲದಲ್ಲಿಯೂ ಗುಲಾಬಿಯಂತಹ ತ್ವಚೆ ಹೊಂದಲು ಈ ಅಡುಗೆ ವಸ್ತುವನ್ನು ಬಳಸಿ..! title=

Skin care tips : ಚಳಿಗಾಲದಲ್ಲಿ ಚರ್ಮವು ಡ್ರೈ ಆಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಮುಖದ ಹೊಳಪು ಮಾಯವಾಗಿ, ಬಿರುಕು ಬಿಟ್ಟಂತೆ ಭಾಸವಾಗುತ್ತದೆ. ಈ ಸಮಸ್ಯೆಯಿಂದ ಪಾರಾಗಳು ನೀವು ಈ ಮನೆಮದ್ದನ್ನು ಮಾಡಬಹುದು.. ಬನ್ನಿ ಯಾವುದು ಆ ಟಿಪ್ಸ್‌, ಹೇಗೆ ಬಳಕೆ ಮಾಡ್ಬೇಕು ಅಂತ ನಾವು ನಿಮಗೆ ತಿಳಿಸಿಕೊಡುತ್ತೇವೆ..

ಎಷ್ಟೋ ಚರ್ಮದ ಆರೈಕೆ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಸಹ ಅವು, ಚಳಿಗಾಲದಲ್ಲಿ ಅಂದುಕೊಂಡತೆ ಕೆಲಸ ಮಾಡುವುದಿಲ್ಲ. ಈ ಸಂದರ್ಭದಲ್ಲಿಯೂ ನೀವು ಚರ್ಮ ಗುಲಾಬಿಯಂತೆ ಹೊಳೆಯುವಂತೆ ಮಾಡಲು ಅಕ್ಕಿ ನೀರನ್ನು ಬಳಸಬಹುದು. 

ಇದನ್ನೂ ಓದಿ:ಮೈಗ್ರೇನ್ ತಲೆನೋವನ್ನು ತಪ್ಪಿಸಲು, ಈ ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ!

ಹೌದು.. ಅಕ್ಕಿಯನ್ನು ಬಳಸುವಾಗ, ಮೊದಲು ಅದನ್ನು ಚನ್ನಾಗಿ ಒಮ್ಮೆ ಅಕ್ಕಿಯನ್ನು ತೊಳೆದುಕೊಳ್ಳಬೇಕು. ನಂತರ ನೆನೆ ಹಾಕಿ ಅದರ ನೀರನ್ನು ಬಳಸಬಹುದು. ಈ ನೀರು ನಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಅನೇಕ ಅಂಶಗಳನ್ನು ಒಳಗೊಂಡಿದೆ. ದಕ್ಷಿಣ ಕೊರಿಯಾ ಮತ್ತು ಜಪಾನ್ನಲ್ಲಿ ಈ ನೀರನ್ನು ಹೆಚ್ಚಾಗಿ ಚರ್ಮಕ್ಕಾಗಿ ಬಳಸಲಾಗುತ್ತದೆ. 

ಅಕ್ಕಿ ನೀರನ್ನು ಕೂದಲಿಗೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಈ ನೀರಿನಲ್ಲಿ ಅಮೈನೋ ಆಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಸಮೃದ್ಧವಾಗಿರುತ್ತವೆ. ಅಲ್ಲದೆ, ಇದು ಆಂಟಿ ಎಜಿಂಗ್‌ ಸಹಾಯ ಮಾಡುತ್ತದೆ. ಈ ನೀರನ್ನು ಹಚ್ಚುವುದರಿಂದ ತ್ವಚೆಯ ದೃಢತೆ ಹೆಚ್ಚುತ್ತದೆ. ಅಕ್ಕಿ ನೀರು ಟ್ಯಾನಿಂಗ್, ಕಲೆಗಳು ಮತ್ತು ಸನ್‌ಬರ್ನ್ ಸಮಸ್ಯೆಗಳಿಂದಲೂ ಪರಿಹಾರ ನೀಡುತ್ತದೆ.

ಇದನ್ನೂ ಓದಿ: ಭೇದಿಯಾದಾಗ ಈ 4 ಬಗೆಯ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ...!

ಅಕ್ಕಿ ನೀರನ್ನು ಹೇಗೆ ತಯಾರಿಸುವ ವಿಧಾನ : ಇದಕ್ಕಾಗಿ ಒಂದು ಕಪ್ ಅಕ್ಕಿಯನ್ನು ಕನಿಷ್ಠ ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಬಿಳಿ ಅಕ್ಕಿಯ ಹೊರತಾಗಿ, ನೀವು ಬಯಸಿದರೆ ನೀವು ಕೆಂಪು ಅಕ್ಕಿ, ಕಂದು ಅಕ್ಕಿ ಅಥವಾ ಬಾಸ್ಮತಿ ಅಕ್ಕಿಯನ್ನೂ ಸಹ ಬಳಸಬಹುದು. 

ಅಕ್ಕಿ ನೀರನ್ನು ತಯಾರಿಸುವ ಇನ್ನೊಂದು ವಿಧಾನವೆಂದರೆ ನೀವು ಅದನ್ನು ಬೇಯಿಸಲು ನೀರನ್ನು ಸೇರಿಸಿದಾಗ ಅಕ್ಕಿಗೆ ಹೆಚ್ಚಿನ ನೀರನ್ನು ಸೇರಿಸುವುದು. ಅಕ್ಕಿ ಬೇಯಿಸಿದ ನಂತರ, ಹೆಚ್ಚುವರಿ ನೀರನ್ನು ಬೇರ್ಪಡಿಸಿ ಮತ್ತು ಅದು ತಣ್ಣಗಾದಾಗ ಅದನ್ನು ಬಳಸಿ.

ಇದನ್ನೂ ಓದಿ: ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ಈ ಎರಡು ಯೋಗಗಳನ್ನು ಮಾಡಿ...!

ಅಕ್ಕಿ ನೀರನ್ನು ಟೋನರ್ ಆಗಿ ಬಳಸಿ : ಅಕ್ಕಿ ನೀರನ್ನು ಟೋನರಿನಂತೆ ಮುಖಕ್ಕೆ ಹಚ್ಚಬಹುದು. ಅಕ್ಕಿ ನೀರನ್ನು ಟೋನರ್ ಆಗಿ ಅನ್ವಯಿಸಲು, ಅದನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಸ್ವಲ್ಪ ಸಮಯದ ನಂತರ ನೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ.

ಫೇಸ್ ಮಾಸ್ಕ್  : ಅಕ್ಕಿ ನೀರನ್ನು ಬೇಳೆ ಹಿಟ್ಟಿನೊಂದಿಗೆ ಬೆರೆಸಿ ಮುಖಕ್ಕೆ ಮಾಸ್ಕ್‌ ರೀತಿ ಹಚ್ಚಿಕೊಳ್ಳಿ. ಇದು ಮುಖದ ಮೇಲಿನ ಕಲೆಗಳನ್ನು ಹೋಗಲಾಡಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News