Budh Gochar 2022: ಇಂದಿನಿಂದ ಈ 5 ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ

ಇಂದು ಬುಧ ಗ್ರಹ ತನ್ನ ರಾಶಿಯನ್ನು ಬದಲಿಸಿಕೊಂಡು ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ. ಈ ರಾಶಿಚಕ್ರ ಬದಲಾವಣೆಯು 5 ರಾಶಿಗಳ ಜನರಿಗೆ ವರದಾನವಾಗಿ ಪರಿಣಮಿಸುತ್ತದೆ. ಈ ಜನರು ಸಾಕಷ್ಟು ಹಣವನ್ನು ಪಡೆಯುತ್ತಾರೆ. ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಅದೃಷ್ಟದ ನೆರವಿನಿಂದ ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಎಲ್ಲಾ ಕೆಲಸಗಳು ಒಂದೊಂದಾಗಿ ಪೂರ್ಣಗೊಳ್ಳಲಿವೆ.   

Written by - Puttaraj K Alur | Last Updated : Mar 6, 2022, 07:25 AM IST
  • ಇಂದು ಬುಧ ಗ್ರಹ ತನ್ನ ರಾಶಿ ಬದಲಿಸಿಕೊಂಡು ಕುಂಭ ರಾಶಿಯನ್ನು ಪ್ರವೇಶಿಸುತ್ತಿದೆ
  • ಈ ರಾಶಿಚಕ್ರ ಬದಲಾವಣೆಯು 5 ರಾಶಿಗಳ ಜನರಿಗೆ ವರದಾನವಾಗಿ ಪರಿಣಮಿಸುತ್ತದೆ
  • ಈ ರಾಶಿಯ ಜನರಿಗೆ ಸಾಕಷ್ಟು ಧನಲಾಭ, ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ
Budh Gochar 2022: ಇಂದಿನಿಂದ ಈ 5 ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ   title=
ಬುಧ ಗ್ರಹವು ರಾಶಿಚಕ್ರವನ್ನು ಬದಲಾಯಿಸುತ್ತಿದೆ

ನವದೆಹಲಿ: ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವು ಬುದ್ಧಿಮತ್ತೆ, ತರ್ಕ, ಸಂಭಾಷಣೆ, ವ್ಯವಹಾರಕ್ಕೆ ಕಾರಣವಾಗುವ ಗ್ರಹವೆಂದು ಪರಿಗಣಿಸಲಾಗಿದದೆ. ಇಂದು ಅಂದರೆ ಮಾರ್ಚ್ 6ರ ಭಾನುವಾರ ಬುಧ ಗ್ರಹವು ರಾಶಿಚಕ್ರವನ್ನು ಬದಲಾಯಿಸುತ್ತಿದೆ(Budh Gochar 2022). ಬುಧನು ಕುಂಭ ರಾಶಿಯನ್ನು ಪ್ರವೇಶಿಸುತ್ತಿದ್ದು, ಇದು 5 ರಾಶಿಚಕ್ರದ ಜನರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಈ ಜನರು ಬುಧ ಗ್ರಹದ ಅನುಗ್ರಹದಿಂದ ಬಹಳಷ್ಟು ಹಣವನ್ನು ಪಡೆಯುತ್ತಾರೆ ಜೊತೆಗೆ ವೃತ್ತಿಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ.

ಈ ಜನರ ಅದೃಷ್ಟವು ಬೆಳಗಲಿದೆ

ಮೇಷ ರಾಶಿ (Aries) : ಮೇಷ ರಾಶಿಯವರಿಗೆ ಹಣದ ಲಾಭವಾಗಲಿದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಧೈರ್ಯ ಮತ್ತು ಶಕ್ತಿ ಹೆಚ್ಚಾಗುತ್ತದೆ. ಗೌರವ ಸಿಗಲಿದ್ದು, ಪ್ರತಿಯೊಂದು ಕೆಲಸದಲ್ಲೂ ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ. ಈ ಸಮಯವು ಉದ್ಯೋಗ ಮತ್ತು ವ್ಯವಹಾರ ಎರಡರ ದೃಷ್ಟಿಯಿಂದಲೂ ಬಹಳ ಮಂಗಳಕರವಾಗಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.

ಮಿಥುನ ರಾಶಿ (Gemini) : ಬುಧ ಸಂಕ್ರಮಣವು ಮಿಥುನ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಬಹಳಷ್ಟು ಲಾಭವನ್ನು ನೀಡುತ್ತದೆ. ಖ್ಯಾತಿ ಹೆಚ್ಚಲಿದೆ. ವೈವಾಹಿಕ ಜೀವನ ಉತ್ತಮವಾಗಿರಲಿದೆ. ಈ ಸಮಯದಲ್ಲಿ ಮಾಡುವ ಕೆಲಸವು ಯಶಸ್ಸನ್ನು ತರುತ್ತದೆ. ನೀವು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯುತ್ತೀರಿ. ಬಡ್ತಿ ಹೆಚ್ಚಳ ಪಡೆಯುವ ಸಾಧ್ಯತೆಗಳಿವೆ. ಹೊಸ ಉದ್ಯೋಗವನ್ನು ಪ್ರಾರಂಭಿಸಲು ಬಯಸುವವರಿಗೆ ಇದು ಉತ್ತಮ ಸಮಯ.

ಇದನ್ನೂ ಓದಿ: Rahu Ketu Rashi Parivartan: ರಾಹು-ಕೇತುಗಳ ಹಿಮ್ಮುಖ ಚಲನೆ, ಈ 5 ರಾಶಿಯವರು ಎಚ್ಚರದಿಂದಿರಿ

ವೃಶ್ಚಿಕ ರಾಶಿ (Scorpio): ವೃಶ್ಚಿಕ ರಾಶಿಯ ಜನರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಲಾಭವನ್ನು ಪಡೆಯುತ್ತಾರೆ. ನಿರುದ್ಯೋಗಿಗಳು ಮತ್ತು ಹೊಸ ಉದ್ಯೋಗಗಳನ್ನು ಹುಡುಕುತ್ತಿರುವವರ ಕಾಯುವಿಕೆ ಕೊನೆಗೊಳ್ಳುತ್ತದೆ. ಆತ್ಮವಿಶ್ವಾಸ ಹೆಚ್ಚಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. ಹೂಡಿಕೆಗೆ ಇದು ಉತ್ತಮ ಸಮಯವಾಗಿದೆ.

ಧನು ರಾಶಿ (Sagittarius): ಈ ಸಮಯವು ಧನು ರಾಶಿಯವರಿಗೆ ಲಾಭವನ್ನು ತರುತ್ತದೆ. ಹಣ ಬರಲು ಹೊಸ ಮಾರ್ಗಗಳಿರುತ್ತವೆ. ಆದಾಯ ಹೆಚ್ಚಲಿದೆ. ವೃತ್ತಿಯಲ್ಲಿ ಪ್ರಗತಿ ಮತ್ತು ಗೌರವ ಇರುತ್ತದೆ. ಈ ಸಮಯವು ನಿಮ್ಮ ಅನೇಕ ಸ್ಥಗಿತಗೊಂಡ ಕೆಲಸಗಳನ್ನು ಪೂರ್ಣಗೊಳಿಸುತ್ತದೆ.

ಮೀನ ರಾಶಿ (Pisces): ಈ ಸಮಯವು ಮೀನ ರಾಶಿಯವರಿಗೆ ವರವಾಗಿ ಪರಿಣಮಿಸುತ್ತದೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ನಿಮ್ಮ ಕೌಟುಂಬಿಕ ಜೀವನ ಉತ್ತಮವಾಗಿರಲಿದ್ದು, ಆರ್ಥಿಕ ಸ್ಥಿತಿ ಬಲವಾಗಿರುತ್ತದೆ.

ಇದನ್ನೂ ಓದಿ: Shukra Gochar 2022: ಶುಕ್ರನ ಕೃಪೆಯಿಂದ ಕೆಲವೇ ದಿನಗಳಲ್ಲಿ ಸಿರಿವಂತರಾಗಲಿದ್ದಾರೆ ಈ 3 ರಾಶಿಯವರು

(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News