Budh Gochar: ಈ 5 ರಾಶಿಯವರಿಗೆ ಮುಂದಿನ 30 ದಿನಗಳು ತುಂಬಾ ಶುಭ

Mercury Transit: ಫೆಬ್ರವರಿ 4 ರಿಂದ ಬುಧ ಸಂಕ್ರಮಣಗೊಳ್ಳಲಿದೆ. ಮಕರ ರಾಶಿಯಲ್ಲಿ ಬುಧನ ಸಂಕ್ರಮಣವು 5 ರಾಶಿಚಕ್ರದ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ.

Written by - Yashaswini V | Last Updated : Feb 1, 2022, 10:47 AM IST
  • ಬುಧನ ರಾಶಿ ಪರಿವರ್ತನೆ
  • ಬುಧನ ರಾಶಿ ಬದಲಾವಣೆಯಿಂದ 5 ರಾಶಿಯವರಿಗೆ ಹಣದ ಸುರಿಮಳೆಯಾಗಲಿದೆ
  • ಈ ರಾಶಿಯವರು ಸಾಕಷ್ಟು ಪ್ರಗತಿಯನ್ನು ಪಡೆಯುತ್ತಾರೆ
Budh Gochar: ಈ 5 ರಾಶಿಯವರಿಗೆ ಮುಂದಿನ 30 ದಿನಗಳು ತುಂಬಾ ಶುಭ title=
Budh Rashi Parivartan Effects

Mercury Transit: ಫೆಬ್ರವರಿ 2022 ರಲ್ಲಿ ಗ್ರಹಗಳ ಸ್ಥಾನದಲ್ಲಿ ಅನೇಕ ಪ್ರಮುಖ ಬದಲಾವಣೆಗಳು ಸಂಭವಿಸಲಿವೆ. ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಬುಧ ಗ್ರಹವು ಫೆಬ್ರವರಿ 4 ರಿಂದ ನೇರವಾಗಿ ಚಲಿಸಲು ಪ್ರಾರಂಭಿಸುತ್ತದೆ. ಬುಧ ಗ್ರಹವು ಜ್ಞಾನ, ಸಂವಹನ, ವ್ಯವಹಾರ, ಹಣದ ಕಾರಕ ಗ್ರಹವಾಗಿದೆ, ಬುಧನ ಬದಲಾದ ಚಲನೆಯ ಪರಿಣಾಮವು ಜನರ ಜೀವನಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳ ಮೇಲೆ ಇರುತ್ತದೆ. ಆದರೆ 5 ರಾಶಿಯವರಿಗೆ ಬುಧನ ನೇರ ಸಂಚಾರವು ಹೆಚ್ಚಿನ ಲಾಭವನ್ನು ತರುತ್ತದೆ. ಮುಂದಿನ ಮಾರ್ಚ್ 6 ರವರೆಗೆ ಬುಧ ಈ ಸ್ಥಾನದಲ್ಲಿರುತ್ತಾನೆ ಮತ್ತು ನಂತರ ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ 30 ದಿನಗಳು  ಕೆಲವು ರಾಶಿಯವರಿಗೆ ತುಂಬಾ ಶುಭ ಎಂದು ಬಣ್ಣಿಸಲಾಗಿದೆ.

ಈ ರಾಶಿಯವರ ಅದೃಷ್ಟ ಹೊಳೆಯುತ್ತದೆ:
ಫೆಬ್ರವರಿ 4 ರಿಂದ ಬುಧ ಸಂಕ್ರಮಣವು (Mercury Transit)  5 ರಾಶಿಯವರಿಗೆ ತುಂಬಾ ಶುಭಕರವಾಗಿದೆ. ಮಾರ್ಗಿ ಬುಧವು ಮಾರ್ಚ್ 6 ರವರೆಗೆ ಈ ರಾಶಿಚಕ್ರ ಚಿಹ್ನೆಗಳಿಗೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ. 

ಮೇಷ ರಾಶಿ - ಬುಧ ಗ್ರಹವು ಮೇಷ ರಾಶಿಯವರಿಗೆ ಬಹಳಷ್ಟು ಲಾಭವನ್ನು ನೀಡುತ್ತದೆ. ವೃತ್ತಿ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹಣವು ಪ್ರಯೋಜನಕಾರಿಯಾಗಲಿದೆ. ನಿಮ್ಮ ಹಲವು ತೊಂದರೆಗಳು ಕೊನೆಗೊಳ್ಳಲಿವೆ.

ಇದನ್ನೂ ಓದಿ- Mauni Amavasya 2022: ಮೌನಿ ಅಮಾವಾಸ್ಯೆಯಂದು ಮಾಡುವ ಈ ತಪ್ಪುಗಳು ಜೀವನದಲ್ಲಿ ದೊಡ್ಡ ತೊಂದರೆ ತರಬಹುದು, ಎಚ್ಚರ!

ವೃಷಭ ರಾಶಿ -  ಬುಧನ ರಾಶಿ ಪರಿವರ್ತನೆಯು (Budha Rashi Parivartan) ವೃಷಭ ರಾಶಿಯವರಿಗೆ ಮಾತು ಮತ್ತು ಸಂವಹನದ ಮೂಲಕ ಪ್ರಯೋಜನವನ್ನು ನೀಡುತ್ತಾನೆ. ಮಾತು ವೃತ್ತಿಯಲ್ಲಿ ಲಾಭವನ್ನು ನೀಡುತ್ತದೆ. ಪ್ರಯಾಣದ ಸಾಧ್ಯತೆಯೂ ಇದೆ.

ಧನು ರಾಶಿ - ಧನು ರಾಶಿಯವರಿಗೆ ಈ ಬುಧ ಸಂಕ್ರಮಣ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಸಿಹಿಯಾಗಿ ಮಾತನಾಡುವ ಮೂಲಕ ನೀವು ಅನೇಕ ಕೆಲಸಗಳನ್ನು ಮಾಡಬಹುದು. ಒಳ್ಳೆಯ ಮಾತು ವ್ಯಾಪಾರದಲ್ಲಿ ಲಾಭ ತರುತ್ತದೆ. ಹಣವು ಲಾಭದಾಯಕವಾಗಬಹುದು. 

ಮಕರ ರಾಶಿ – ಬುಧನು ಈ ರಾಶಿಯಲ್ಲಿ ಹಿಮ್ಮೆಟ್ಟಿಸುತ್ತಿದ್ದು ಈಗ ತಿರುಗುತ್ತಿರುವುದರಿಂದ ಮಕರ ರಾಶಿಯವರಿಗೆ ಬುಧ ಸ್ಥಾನದ ಬದಲಾವಣೆಯು ತುಂಬಾ ಶುಭಕರವಾಗಿದೆ. ಈ ಜನರು ಉದ್ಯೋಗ-ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ನೀವು ಪ್ರಗತಿಯನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ ಆದಾಯವೂ ಹೆಚ್ಚಾಗುತ್ತದೆ. 

ಇದನ್ನೂ ಓದಿ- ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಂಭವಿಸಿದರೆ, ಈ ಬಣ್ಣವನ್ನು ಬಳಸಿ; ಮತ್ತೆ ಪ್ರಗತಿಯತ್ತ ಸಾಗಲಿದೆ ಆರ್ಥಿಕ ಸ್ಥಿತಿ

ಮೀನ ರಾಶಿ - ಮೀನ ರಾಶಿಯವರಿಗೆ ಬುಧನ ನೇರ ಸಂಚಾರ ವೃತ್ತಿಯಲ್ಲಿ ಲಾಭವನ್ನು ನೀಡುತ್ತದೆ. ಪ್ರತಿಷ್ಠೆಯೂ ಹೆಚ್ಚಾಗಲಿದ್ದು, ಬಡ್ತಿಯೂ ದೊರೆಯಲಿದೆ. ಆದಾಯ ಹೆಚ್ಚಾಗಬಹುದು. ಹೂಡಿಕೆಯಿಂದ ಲಾಭವಾಗಲಿದೆ. ಪ್ರವಾಸ ಸಾಧ್ಯತೆಯೂ ಇದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News