Planet Mercury: ಈ ಎರಡು ರಾಶಿಗಳ ಜನರ ಮೇಲೆ ಬುಧನ ವಿಶೇಷ ಕೃಪೆ ಇರುತ್ತದೆ, ಇವರಿಗೆ ಜೀವನದಲ್ಲಿ ಎಲ್ಲಾ ಸುಖ-ಸೌಕರ್ಯಗಳು ಸಿಗುತ್ತವೆ

Planet Mercury - ಜ್ಯೋತಿಷ್ಯಶಾಸ್ತ್ರದಲ್ಲಿ (Astrology)  9 ಗ್ರಹಗಳ ಉಲ್ಲೇಖವಿದೆ. ಈ ಎಲ್ಲಾ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಬುಧ ಗ್ರಹವನ್ನು ಮಾತು, ಬುದ್ಧಿವಂತಿಕೆ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಬುಧ ಗ್ರಹದ (Budh Dev) ಅನುಗ್ರಹದಿಂದ ವ್ಯಾಪಾರ ಮತ್ತು ವಾಣಿಗೆ  ಸಂಬಂಧಿತ ಕೆಲಸಗಳಲ್ಲಿ ಸಾಕಷ್ಟು ಯಶಸ್ಸು ಸಿಗುತ್ತವೆ. 

Written by - Nitin Tabib | Last Updated : Jan 31, 2022, 04:48 PM IST
  • ಸಿಗುತ್ತವೆ ಎಲ್ಲಾ ರೀತಿಯ ಸುಖ ಸೌಕರ್ಯಗಳು
  • ಬಧ ದೇವನ ಕೃಪಾವೃಷ್ಟಿ ಇವರ ಮೇಲೆ ಇರುತ್ತದೆ
  • ಈ ಎರಡು ರಾಶಿಗಳ ಅಧಿಪತಿ ಬುಧ
Planet Mercury: ಈ ಎರಡು ರಾಶಿಗಳ ಜನರ ಮೇಲೆ ಬುಧನ ವಿಶೇಷ ಕೃಪೆ ಇರುತ್ತದೆ, ಇವರಿಗೆ ಜೀವನದಲ್ಲಿ ಎಲ್ಲಾ ಸುಖ-ಸೌಕರ್ಯಗಳು ಸಿಗುತ್ತವೆ  title=
Planet Mercury (File Photo)

ನವದೆಹಲಿ: Planet Mercury - ಜ್ಯೋತಿಷ್ಯ ಶಾಸ್ತ್ರದಲ್ಲಿ 9 ಗ್ರಹಗಳ ಉಲ್ಲೇಖವಿದೆ. ಈ ಎಲ್ಲಾ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಬುಧ ಗ್ರಹವನ್ನು ಮಾತು, ಬುದ್ಧಿವಂತಿಕೆ ಮತ್ತು ವ್ಯವಹಾರದ ಅಂಶವೆಂದು ಪರಿಗಣಿಸಲಾಗುತ್ತದೆ. ಬುಧ ಗ್ರಹದ ಅನುಗ್ರಹದಿಂದ ವ್ಯಾಪಾರ ಮತ್ತು ವಾಣಿಗೆ ಸಂಬಂಧಿತ ಕೆಲಸಗಳು ಬಹಳಷ್ಟು ಯಶಸ್ಸನ್ನು ಪಡೆಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಯಾವ ಎರಡು ರಾಶಿಚಕ್ರದ ಮನರು ಬುಧನ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಿಥುನ ಮತ್ತು ಕನ್ಯಾ ರಾಶಿಯ ಅಧಿಪತಿ ಬುಧ
ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಬುಧ ಗ್ರಹವು ಮಿಥುನ ಮತ್ತು ಕನ್ಯಾ ರಾಶಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಏಕೆಂದರೆ ಈ ಎರಡು ರಾಶಿಗಳ ಅಧಿಪತಿ ಬುಧ. ಈ ಎರಡು ರಾಶಿಗಳ ಜನರು ಬುಧದ ವಿಶೇಷ ಅನುಗ್ರಹವನ್ನು ಹೊಂದಲು ಇದೆ ಕಾರಣವಾಗಿದೆ. ಅಲ್ಲದೆ, ಬುಧನ ಅನುಗ್ರಹದಿಂದ, ಈ ರಾಶಿಗಳ ಜನರ ಭೌತಿಕ ಜೀವನವು ಸಂತೋಷದಿಂದ ಕಳೆಯುತ್ತದೆ. ಇವರಿಗೆ ಯಾವುದೇ ರೀತಿಯ ಆರ್ಥಿಕ ಕೊರತೆ ಎದುರಾಗುವುದಿಲ್ಲ.

ಇದನ್ನೂ ಓದಿ-Astrology : ಲಕ್ಷ್ಮಿದೇವಿಯ ಆಶೀರ್ವಾದದಿಂದ ಈ 4 ರಾಶಿಯವರು ಶ್ರೀಮಂತರಾಗಿರುತ್ತಾರೆ!

ಮಿಥುನ ರಾಶಿ (Gemini)
ಈ ರಾಶಿಚಕ್ರದ ಜನರನ್ನು ಸ್ವತಂತ್ರ ಮತ್ತು ಬುದ್ಧಿವಂತ ಎಂದು ಪರಿಗಣಿಸಲಾಗುತ್ತದೆ. ಈ ಜನರಲ್ಲಿ ಅನೇಕ ರೀತಿಯ ಪ್ರತಿಭೆಗಳು ಅಡಗಿರುತ್ತವೆ. ಇದರಿಂದ ಇವರು ಪ್ರೀತಿಯ ಬದುಕಿನ ಸವಾಲುಗಳನ್ನೂ ಕೂಡ ದಿಟ್ಟತನದಿಂದ ಎದುರಿಸುತ್ತಾರೆ. ಇದಲ್ಲದೆ, ಬುಧ ಗ್ರಹದ ಪ್ರಭಾವದಿಂದಾಗಿ, ಈ ರಾಶಿ  ಜನರು ವ್ಯವಹಾರ ಮತ್ತು ಮಾತುಗಳಿಗೆ  ಸಂಬಂಧಿತ ಕೆಲಸಗಳಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ. 

ಇದನ್ನೂ ಓದಿ-ಮೌನಿ ಅಮಾವಾಸ್ಯೆಯಂದು ಈ ಸುಲಭ ಕೆಲಸ ಮಾಡಿ; ಲಕ್ಷ್ಮಿದೇವಿ ವರ್ಷವಿಡೀ ನಿಮ್ಮ ಮೇಲೆ ಸಂಪತ್ತು ಸುರಿಸುತ್ತಾಳೆ

ಕನ್ಯಾ ರಾಶಿ (Virgo)
ಈ ರಾಶಿಯ ಜನರು ಚಿಕ್ಕ-ಪುಟ್ಟ ವಿಷಯಗಳಿಗೆ ಕೊಪಿಸಿಕೊಳ್ಳುತ್ತಾರೆ, ಆದರೆ ಹೃದಯದಲ್ಲಿ ಇವರು ತುಂಬಾ ಪರಿಶುದ್ಧರಾಗಿರುತ್ತಾರೆ. ಕನ್ಯಾ ರಾಶಿಯ ಜನರು ತಮ್ಮ ಮಾತುಗಳಿಂದ ಯಾರನ್ನಾದರೂ ಬೇಗನೆ ಆಕರ್ಷಿಸುತ್ತಾರೆ. ಈ ರಾಶಿಯಲ್ಲಿ ಬುಧ ಗ್ರಹವು ಪ್ರಬಲವಾಗಿದೆ. ಇದರಿಂದ ಈ ರಾಶಿಯವರಿಗೆ ಜೀವನದಲ್ಲಿ ಎಲ್ಲ ಸೌಕರ್ಯಗಳೂ ಸಿಗುತ್ತವೆ. ಈ ರಾಶಿಯ ಜನರು ಜಾಣತನದಿಂದ ಹಣ ಗಳಿಸುವುದರಲ್ಲಿ ಇತರರಿಗಿಂತ ಮುಂದಿರುತ್ತಾರೆ. ಇದಲ್ಲದೆ, ಈ ರಾಶಿಯ ಜನರು ಸಂತೋಷಕ್ಕಾಗಿ ಹಣವನ್ನು ಬಹಿರಂಗವಾಗಿ ಖರ್ಚು ಮಾಡುತ್ತಾರೆ.

ಇದನ್ನೂ ಓದಿ-ವ್ಯಾಪಾರ, ವ್ಯವಹಾರದಲ್ಲಿ ನಷ್ಟ ಸಂಭವಿಸಿದರೆ, ಈ ಬಣ್ಣವನ್ನು ಬಳಸಿ; ಮತ್ತೆ ಪ್ರಗತಿಯತ್ತ ಸಾಗಲಿದೆ ಆರ್ಥಿಕ ಸ್ಥಿತಿ

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಮಾಹಿತಿಯನ್ನು ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News