Coriander: ಕೊತ್ತಂಬರಿ ಸೊಪ್ಪನ್ನು ಫ್ರಿಡ್ಜ್ ನಲ್ಲಿ ಇಡದೆ ತಾಜಾ ಆಗಿ ಇಡುವುದು ಹೇಗೆ..!ತಿಳಿಯಿರಿ

Coriander: ಕೊತ್ತಂಬರಿ ಸೊಪ್ಪು ತುಂಬಾ ಹೊತ್ತು ಫ್ರಿಡ್ಜ್ ನಲ್ಲಿಟ್ಟರೆ ಅದು ಕರಗಲು ಶುರುವಾಗುತ್ತದೆ. ಎಲೆಯೂ ಮೃದುವಾಗುತ್ತದೆ. ಫ್ರೀಡ್ಜ್‌ನ ಬದಲಾಗಿ ಕೊತ್ತಂಬರಿ ಸೊಪ್ಪನ್ನು ಫ್ರೆಶ್ ಆಗಿ ಇಡಬೇಕೆಂದರೆ ಕೆಲವೊಂದು ವಿಧಾನಗಳನ್ನು ಅನುಸರಿಸಬಹುದು.

Written by - Zee Kannada News Desk | Last Updated : Feb 17, 2024, 10:14 AM IST
  • ಕೊತ್ತಂಬರಿ ಸೊಪ್ಪನ್ನು ಜನರು ಅಡುಗೆ ಮಾಡಿದ ನಂತರ ಅಲಂಕಾರ ಮತ್ತು ಪರಿಮಳಕ್ಕಾಗಿ ಆಹಾರಕ್ಕೆ ಸೇರಿಸುತ್ತಾರೆ.
  • ಕೊತ್ತಂಬರಿ ಸೊಪ್ಪಿನ ಬೇರುಗಳನ್ನು ಕತ್ತರಿಸಿ ಶುದ್ಧ ನೀರಿನಲ್ಲಿ ಇಡಿ. ಹೀಗೆ ಮಾಡುವುದರಿಂದ ದಿನಗಟ್ಟಲೆ ಫ್ರೆಶ್ ಆಗಿರುತ್ತದೆ.
  • ಪ್ಲಾಸ್ಟಿಕ್ ಪಾತ್ರೆಯನ್ನು ಶುಭ್ರಗೊಳಿಸಿ ಅದರಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಅದು ಹೆಚ್ಚು ಕಾಲ ಕೆಡುವುದಿಲ್ಲ.
Coriander: ಕೊತ್ತಂಬರಿ ಸೊಪ್ಪನ್ನು ಫ್ರಿಡ್ಜ್ ನಲ್ಲಿ ಇಡದೆ ತಾಜಾ ಆಗಿ ಇಡುವುದು ಹೇಗೆ..!ತಿಳಿಯಿರಿ title=

Coriander greens: ಹೆಚ್ಚಿನವರು ತಮ್ಮ ರೆಸಿಪಿಯಲ್ಲಿ ಕೊತ್ತಂಬರಿ ಸೊಪ್ಪನ್ನು ಬಳಸುತ್ತಾರೆ. ಎಲ್ಲರ ಮನೆಯಲ್ಲೂ ಕೊತ್ತಂಬರಿ ಸೊಪ್ಪು ಇದ್ದೆ ಇರುತ್ತದೆ. ಆದರೆ ಕೊತ್ತಂಬರಿ ಸೊಪ್ಪನ್ನು ಫ್ರಿಡ್ಜ್ ನಲ್ಲಿ ಇಡದೆ ಹೆಚ್ಚು ಹೊತ್ತು ತಾಜಾವಾಗಿರಲು ಏನು ಮಾಡಬೇಕು. ಇದು ನಿಮಗೆ ತಿಳಿಯದೆ ಇದ್ದರೆ  ಈ ಸಲಹೆಗಳು ನಿಮಗಾಗಿ.

ಯಾವುದೇ ಆಹಾರವನ್ನು ತಯಾರಿಸಿದ ನಂತರ, ಅದನ್ನು ಹೆಚ್ಚು ಸುಂದರವಾಗಿ ಮತ್ತು ರುಚಿಯಾಗಿ ಮಾಡುವುದರಲ್ಲಿ ಕೆಲವು ರೀತಿಯ ತರಕಾರಿಗಳನ್ನು ಬಳಸುತ್ತೇವೆ. ಅದರಲ್ಲಿ ಕೊತ್ತಂಬರಿ ಸೊಪ್ಪು ಕೂಡ ಒಂದು. ಕೊತ್ತಂಬರಿ ಸೊಪ್ಪನ್ನು ಜನರು ಅಡುಗೆ ಮಾಡಿದ ನಂತರ ಅಲಂಕಾರ ಮತ್ತು ಪರಿಮಳಕ್ಕಾಗಿ ಆಹಾರಕ್ಕೆ ಸೇರಿಸುತ್ತಾರೆ. ಇದನ್ನು ಸೇರಿಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಆದರೆ ಅದನ್ನು ತಾಜಾವಾಗಿ ಇಡುವುದು ಹೇಗೆ ಎಂದು ತಿಳಿಯುವುದು ಬಹಳ ಮುಖ್ಯ. ರೆಫ್ರಿಜರೇಟರ್ ಇಲ್ಲದೆ ಕೊತ್ತಂಬರಿ ಸೊಪ್ಪನ್ನು ತಾಜಾವಾಗಿ ಇಡುವುದು ಹೇಗೆ ಎಂಬುದು ಈ ಸ್ಟೋರಿಯಲ್ಲಿ ತಿಳಿಯಿರಿ..

ಇದನ್ನೂ ಓದಿ: Ayurvedic Tips: ಬೆಳಗಿನ ಉಪಾಹಾರಕ್ಕಾಗಿ ಫೀನಟ್‌ ಬಟರ್‌ ತಿನ್ನುವುದು ಒಳ್ಳೆಯದ? ತಿಳಿಯಿರಿ

ಕೊತ್ತಂಬರಿ ಸೊಪ್ಪು ತುಂಬಾ ಹೊತ್ತು ಫ್ರಿಡ್ಜ್ ನಲ್ಲಿಟ್ಟರೆ ಅದು ಕರಗಲು ಶುರುವಾಗುತ್ತದೆ. ಎಲೆಯೂ ಮೃದುವಾಗುತ್ತದೆ. ಫ್ರೀಡ್ಜ್‌ನ ಬದಲಾಗಿ ಕೊತ್ತಂಬರಿ ಸೊಪ್ಪನ್ನು ಫ್ರೆಶ್ ಆಗಿ ಇಡಬೇಕೆಂದರೆ ಕೆಲವೊಂದು ವಿಧಾನಗಳನ್ನು ಅನುಸರಿಸಬಹುದು. ಅವುಗಳೆಂದರೆ,

ಮಾರುಕಟ್ಟೆಯಿಂದ ಕೊತ್ತಂಬರಿ ಸೊಪ್ಪನ್ನು ತರುವಾಗ ಅದರ ಬೇರುಗಳನ್ನು ಕತ್ತರಿಯಿಂದ ಕತ್ತರಿಸಿ. ಇದರ ನಂತರ, ಅದನ್ನು ಶುದ್ಧ ನೀರಿನಲ್ಲಿ ಇಡಿ. ಹೀಗೆ ಮಾಡುವುದರಿಂದ ದಿನಗಟ್ಟಲೆ ಫ್ರೆಶ್ ಆಗಿರುತ್ತದೆ. ಇಲ್ಲವಾಲ್ಲಿ ನೀವು ಕೊತ್ತಂಬರಿ ಸೊಪ್ಪನ್ನು ನೀರಿಗೆ ಸೇರಿಸಲು ಹೋಗುವ ನೀರಿಗೆ ಸ್ವಲ್ಪ ವಿನೆಗರ್ ಅನ್ನು ಕೂಡ ಸೇರಿಸಬಹುದು ಇದರಿಂದ ಸೋಪ್ಪು ಫ್ರೇಶ್‌ ಆಗಿರುತ್ತದೆ.

ಇದನ್ನೂ ಓದಿ: Anti Hair Fall Herbs: ಕೂದಲು ಉದುರುವ ಸಮಸ್ಯೆಗೆ ವರದಾನ ಇದ್ದಂತೆ ಈ ನಾಲ್ಕು ಗಿಡಮೂಲಿಕೆಗಳು!

ಇದಲ್ಲದೆ, ನೀವು ಕೊತ್ತಂಬರಿ ಸೊಪ್ಪನ್ನು ಒದ್ದೆಯಾದ ಟವೆಲ್‌ನಲ್ಲಯೂ ಇಡಬಹುದು. ಈಗೆ ಮಾಡುವಾಗ, ಅದು ಚೆನ್ನಾಗಿ ಮುಚ್ಚಲ್ಪಟ್ಟಿದೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಈ ರೀತಿ ಮಾಡುವುದರಿಂದ ಅದು ಸಂಪೂರ್ಣವಾಗಿ ತಾಜಾವಾಗಿರುತ್ತದೆ. ನೀವು ಟವೆಲ್ ಬದಲಿಗೆ ಹತ್ತಿ ಬಟ್ಟೆಯನ್ನು ಕೂಡ ಬಳಸಬಹುದು.

ಹಾಗೆಯೇ, ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಮೊದಲು ಪೇಪರ್ ಇರುವ ಪ್ಲಾಸ್ಟಿಕ್ ಪಾತ್ರೆಯಲ್ಲಿ ಹಾಕಬಹುದು. ಪ್ಲಾಸ್ಟಿಕ್ ಪಾತ್ರೆಯನ್ನು ಶುಭ್ರಗೊಳಿಸಿ ಅದರಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಅದು ಹೆಚ್ಚು ಕಾಲ ಕೆಡುವುದಿಲ್ಲ.

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News