Daily Horoscope: ದಿನಭವಿಷ್ಯ 10-01-2021 Today astrology

ಶೃಂಗೇರಿ ಶಾರದಾಂಬೆಯನ್ನು ನೆನೆದುಕೊಂಡು ಇಂದಿನ ದಿನ ಆರಂಭಿಸಿ.   

Written by - Zee Kannada News Desk | Last Updated : Jan 10, 2021, 08:43 AM IST
  • ಮೇಷ ರಾಶಿಯವರು ಸಂಗಾತಿಯ ಕ್ಷಮೆ ಯಾಚಿಸುವ ಮೂಲಕ ವೈವಾಹಿಕ ಜೀವನವನ್ನು ಸಂತೋಷವಾಗಿ ಇರಿಸಿ
  • ಕಟಕ ರಾಶಿಯವರು ಖರ್ಚಿನ ದಾಖಲಾತಿಯನ್ನು ಸರಿಯಾಗಿ ಪಡೆಯುವುದು ಉತ್ತಮ
  • ಮಕರ ರಾಶಿಯವರಿಗೆ ನಿಮ್ಮ ಪ್ರೀತಿ ಪಾತ್ರರೊಡನೆ ಸಮಯ ಕಳೆಯುವ ಅವಕಾಶ ದೊರೆಯುತ್ತದೆ
Daily Horoscope: ದಿನಭವಿಷ್ಯ 10-01-2021 Today astrology title=
ಶೃಂಗೇರಿ ಶಾರದಾಂಬೆಯನ್ನು ನೆನೆದುಕೊಂಡು ಇಂದಿನ ದಿನ ಆರಂಭಿಸಿ.

ನಿತ್ಯ ಭವಿಷ್ಯ: ಇಂದಿನ ನಿಮ್ಮ ದಿನ ಹೇಗಿರುತ್ತದೆ. ನಿಮ್ಮ ರಾಶಿಫಲದ ಪ್ರಕಾರ ದಿನ ಹೇಗಿರಬಹುದು ನಾವು ಹೇಳುತ್ತೇವೆ.  ಶೃಂಗೇರಿ ಶಾರದಾಂಬೆಯನ್ನು ನೆನೆದುಕೊಂಡು ಇಂದಿನ ದಿನ ಆರಂಭಿಸಿ. 

ಮೇಷ ರಾಶಿ:- ಇಂದು ಕೆಲವು ವಿಚಾರಗಳು ನಿಮಗೆ ಕಿರಿಕಿರಿ ಉಂಟುಮಾಡಬಹುದು ಮತ್ತು ಕೆಲವರ ಮಾತುಗಳು ನಿಮಗೆ ತೊಂದರೆ ಅನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ತಾಳ್ಮೆ ಮತ್ತು ಶಾಂತಿಯಿಂದ ಕೆಲಸ ಮಾಡಿ. ಇತರರ ಮಾತುಗಳಿಗೆ ಅತಿಯಾಗಿ ಪ್ರಭಾವಿತರಾಗಬೇಡಿ. ಇಂದು ಕಚೇರಿಯಲ್ಲಿ ಕೆಲಸ ಹೆಚ್ಚು ಇರುತ್ತದೆ. 

ವೃಷಭ ರಾಶಿ:- ನೀವು ತಪ್ಪು ಮಾಡಿದ್ದರು ಕೂಡ ನಿಮ್ಮ ಸಂಗಾತಿ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ ಆದ್ದರಿಂದ ನಿಮ್ಮ ಸಂಗಾತಿಯ ಬಳಿ ಕ್ಷಮೆ ಯಾಚಿಸುವ ಮೂಲಕ ವೈವಾಹಿಕ ಜೀವನವನ್ನು ಸಂತೋಷವಾಗಿ ಇರಿಸಿ. ಇಂದು ಉತ್ತಮವಾದ ದಿನ. ಹಣ ಸಂಪಾದಿಸಲು ಇಂದು ತುಂಬಾ ಶ್ರಮ ಪಡಬೇಕಾಗುತ್ತದೆ. 

ಮಿಥುನ ರಾಶಿ:- ಇಂದು ನಿಮ್ಮ ಆರೋಗ್ಯ ಚೆನ್ನಾಗಿರುವುದಿಲ್ಲ ಆದರೆ ನಿಮ್ಮ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ ಕಚೇರಿಯಲ್ಲಿ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯನ್ನು ನೋಡಿ ಎಲ್ಲರೂ ನಿಮ್ಮನ್ನು ಹೊಗಳುತ್ತಾರೆ.

ಕಟಕ ರಾಶಿ:- ಹಣಕಾಸಿನ ವಿಚಾರದಲ್ಲಿ ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಖರ್ಚಿನ ದಾಖಲಾತಿಯನ್ನು ಸರಿಯಾಗಿ ಪಡೆಯುವುದು ಉತ್ತಮ. ಇಲ್ಲದಿದ್ದರೆ ಭವಿಷ್ಯದಲ್ಲಿ ದೊಡ್ಡ ಬಿಕ್ಕಟ್ಟು ಎದುರಿಸಬೇಕಾಗುತ್ತದೆ ವೈಯಕ್ತಿಕ ಸಂಬಂಧದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. 

ಇದನ್ನೂ ಓದಿ : ಅಕಾಲ ಮೃತ್ಯು ಭಯ ನಿವಾರಣೆಗೆ ಶನಿವಾರ ಈ ಕೆಲಸ ತಪ್ಪದೆ ಮಾಡಿ

ಸಿಂಹ ರಾಶಿ:- ಸಂಗಾತಿಯೊಂದಿಗೆ ತುಂಬಾ ಪ್ರಾಮಾಣಿಕರಾಗಿರಿ. ನಿಮ್ಮ ಸಂಬಂಧವನ್ನು ಮುಂದುವರೆಯಲು ಸಾಧ್ಯವಾಗುತ್ತದೆ ಸಂಬಂಧಗಳಲ್ಲಿ ಸುಳ್ಳು ಹೇಳುವುದು ಒಳ್ಳೆಯದಲ್ಲ ಇಂದು ನೀವು ಸ್ವಲ್ಪ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗುತ್ತದೆ. 

ಕನ್ಯಾ ರಾಶಿ:- ಮನೆಯ ವಾತಾವರಣವು ಇಂದು ಶಾಂತವಾಗಿ ಇರುತ್ತದೆ ನಿಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ಸಮಯದಿಂದ ತೊಂದರೆಗಳನ್ನು ಎದುರಿಸುತ್ತಿದ್ದೀರಿ. ಆದರೆ ಇಂದು ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಕುಟುಂಬದ ಸದಸ್ಯರು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ

ತುಲಾ ರಾಶಿ:- ಕುಟುಂಬ ಸದಸ್ಯರು ಅಗತ್ಯಗಳನ್ನು ಪೂರೈಸಲು ಇಂದು ಸಾಕಷ್ಟು ಖರ್ಚು ಮಾಡುತ್ತೀರಿ. ಮಗುವಿನ ಶಿಕ್ಷಣಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ. ಪರಿಸ್ಥಿತಿಗಳು ಅನುಕೂಲಕರವಾಗಿ ಇರುತ್ತದೆ ಆದ್ದರಿಂದ ಚಿಂತಿಸಬೇಡಿ. 

ವೃಶ್ಚಿಕ ರಾಶಿ:- ಕೆಲಸದಲ್ಲಿ ಇಂದು ಉತ್ತಮ ಫಲಿತಾಂಶಗಳನ್ನು ಪಡೆಯುತ್ತಿರಿ. ನಿಮ್ಮ ದಕ್ಷತೆಯನ್ನು ಬಹಳವಾಗಿ ಪ್ರಶಂಸಿಸಲಾಗುತ್ತದೆ. ನಿಮ್ಮ ಮೇಲಾಧಿಕಾರಿಗಳ ಪ್ರಮುಖ ಯೋಜನೆಯಲ್ಲಿ ಭಾಗವಹಿಸಲು ನಿಮಗೆ ಅವಕಾಶವನ್ನು ನೀಡುವ ಸಾಧ್ಯತೆ ಇದೆ. ನೀವು ಯಾವುದರ ಬಗ್ಗೆಯೂ ಗೊಂದಲಕ್ಕೆ ಒಳಗಾಗುವುದು ಬೇಡ

ಧನುಸ್ಸು ರಾಶಿ:- ನಿಮ್ಮ ವೈಯಕ್ತಿಕ ಜೀವನವು ಇಂದು ಆನಂದಮಯವಾಗಿ ಇರುತ್ತದೆ ನಿಮ್ಮ ತಿಳುವಳಿಕೆಯೊಂದಿಗೆ ಮನೆಯ ಪರಿಸ್ಥಿತಿ ಸುಧಾರಿಸಲು ಸಾಧ್ಯವಾಗುತ್ತದೆ ನಿಮ್ಮ ಪೋಷಕರು ನಿಮ್ಮೊಂದಿಗೆ ತುಂಬಾ ಸಂತೋಷವಾಗಿ ಇರುತ್ತಾರೆ ಇವತ್ತು ಖರ್ಚಿನ ವಿಷಯದಲ್ಲಿ ಇಂದಿನ ದಿನ ತುಂಬಾ ದುಬಾರಿಯಾಗಿರುತ್ತದೆ. 

ಇದನ್ನೂ ಓದಿ : Makar Sankranti 2021: ಸಂಕ್ರಾಂತಿಯ ದಿನ ಈ ಶುಭ ಯೋಗ ನಿರ್ಮಾಣ, 6 ರಾಶಿಯ ಜನರಿಗೆ ಮಹಾಲಾಭ

ಮಕರ ರಾಶಿ:- ಇಂದು ನಿಮ್ಮ ಪ್ರೀತಿ ಪಾತ್ರರೊಡನೆ ಸಮಯ ಕಳೆಯುವ ಅವಕಾಶ ದೊರೆಯುತ್ತದೆ ಮತ್ತು ಆ ಅವಕಾಶದ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತಿರ ನೀವು ನಿಮ್ಮ ಕುಟುಂಬದೊಂದಿಗೆ ಸಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಬಹುದು

ಕುಂಭ ರಾಶಿ:- ಕೆಲಸದಲ್ಲಿ ಸಣ್ಣ ಅಡೆತಡೆಗಳು ಇರಬಹುದು. ಆದರೆ ನೀವು ಯಶಸ್ಸು ಪಡೆಯುವರಿ. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಜಾಗರೂಕರಾಗಿರಬೇಕು. ಇಂದು ನಿಮ್ಮ ಸಹೋದ್ಯೋಗಿಗಳು ಮೇಲಾಧಿಕಾರಿಯ ಮುಂದೆ ನಿಮಗೆ ಕಳಂಕ  ಅಂಟಿಸಲು ಪ್ರಯತ್ನಿಸಬಹುದು. 

ಮೀನ ರಾಶಿ:- ಇಂದು ನಿಮ್ಮ ಮನಸ್ಸು ಚಂಚಲವಾಗಿರುತ್ತದೆ ಮತ್ತು ಪ್ರೀತಿಪಾತ್ರರೊಂದಿಗೆ ನಿಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದು ಅದನ್ನು ಎದುರಿಸಬಹುದು ಇಲ್ಲವಾದರೆ ನೀವು ದಿನದ ಕೊನೆಯಲ್ಲಿ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಸಮಸ್ಯೆಗೆ ಸಿಲುಕುತ್ತಿರಿ

ಇದನ್ನೂ ಓದಿ : ವಿಸ್ಮಯ ತಾಣ ಈ ಶಿವ ದೇಗುಲ, ನಿತ್ಯ 3 ಬಾರಿ ಬಣ್ಣ ಬದಲಾಯಿಸುತ್ತದೆ ಇಲ್ಲಿನ ಶಿವಲಿಂಗ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News