Daily Horoscope: ದಿನಭವಿಷ್ಯ 23-01-2021 Today astrology

ಶ್ರೀ  ಶ್ರೀ ಅಯ್ಯಪ್ಪ ಸ್ವಾಮಿಯ  ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

Written by - ZH Kannada Desk | Last Updated : Jan 23, 2021, 06:50 AM IST
  • ಅಹಂ ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ
  • ಆತ್ಮವಿಶ್ವಾಸದಿಂದ ಮುಂದುವರಿಯುವುದು ಉತ್ತಮ
  • ಕಷ್ಟಪಟ್ಟು ಕೆಲಸ ಮಾಡಿ ಕಂಡಿತವಾಗಿಯೂ ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚಿದೆ
Daily Horoscope: ದಿನಭವಿಷ್ಯ 23-01-2021 Today astrology

Daily horoscope (ದಿನಭವಿಷ್ಯ 23-01-2021):  ಶ್ರೀ  ಶ್ರೀ ಅಯ್ಯಪ್ಪ ಸ್ವಾಮಿಯ  ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ

ಮೇಷ ರಾಶಿ:- ಇಂದು ನೀವು ನಿಮ್ಮ ಮಾತನ್ನು ನಿಯಂತ್ರಿಸಬೇಕು ಇಲ್ಲದಿದ್ದರೆ ಯಾರೊಂದಿಗಾದರೂ ಜಗಳ ವಾಗಬಹುದು. ಅಹಂ ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ, ಆತ್ಮವಿಶ್ವಾಸದಿಂದ ಮುಂದುವರಿಯುವುದು ಉತ್ತಮ, ಆದರೆ ನಕಾರಾತ್ಮಕ ಆಲೋಚನೆಗಳಿಂದ ದೂರ ಇರುವುದು ಒಳ್ಳೆಯದು. ಕೆಲಸದಲ್ಲಿ ಪರಿಸ್ಥಿತಿಯು ಅನುಕೂಲಕರವಾಗಿ ಇರುತ್ತದೆ.

ವೃಷಭ ರಾಶಿ:- ಕೆಲವು ಸಮಯದಿಂದ ಹಣಕಾಸಿನ ಪರಿಸ್ಥಿತಿ ನಿರಂತರವಾಗಿ ಏರಿಳಿತ ಕಾಣುತ್ತಿರುವುದರಿಂದ ಮಾನಸಿಕವಾಗಿ ಒತ್ತಡ ಹೆಚ್ಚಾಗುತ್ತದೆ. ಚಿಂತೆಯನ್ನು ಬಿಟ್ಟು ಆದಾಯ ಹೆಚ್ಚಿಸುವ ಬಗ್ಗೆ ಯೋಚನೆ ಮಾಡಿದರೆ ಸೂಕ್ತ. ಕೆಲಸದಲ್ಲಿ ಇಂದು ಉತ್ತಮ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. 

ಮಿಥುನ ರಾಶಿ:- ಇಂದು ನಿಮಗೆ ಉತ್ತಮವಾದ ದಿನವಾಗಿರುತ್ತದೆ, ಇಂದು ನಿಮ್ಮ ಎಲ್ಲಾ ವಿಷಯಗಳು ನಿಮ್ಮ ಪರವಾಗಿ ಇರುತ್ತದೆ, ಕಷ್ಟಪಟ್ಟು ಕೆಲಸ ಮಾಡಿ ಕಂಡಿತವಾಗಿಯೂ ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚಿದೆ. ಇಂದು ವ್ಯಾಪಾರಸ್ಥರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈ ನಿರ್ಧಾರಗಳು ನಿಮ್ಮ ವ್ಯವಹಾರದಲ್ಲಿ ದೊಡ್ಡ ಬದಲಾವಣೆಯನ್ನು ಉಂಟುಮಾಡಬಹುದು.

ಕಟಕ ರಾಶಿ:- ನಿಮ್ಮ ಮನಸ್ಸಿನಲ್ಲಿ ಅಸಮಾಧಾನ ಮತ್ತು ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತೀರಿ. ಇಂದು ನೀವು ನಿಮ್ಮ ಹೆಚ್ಚಿನ ಸಮಯವನ್ನು ಈ ವಿಷಯದ ಬಗ್ಗೆ ಯೋಚಿಸಲು ಕಳೆಯಲಾಗುತ್ತದೆ. ನಿಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಾಧ್ಯವಾಗುವುದಿಲ್ಲ. 

ಇದನ್ನೂ ಓದಿ - ಅಶ್ವತ್ಥ ಮರದ ಈ ಆಧ್ಯಾತ್ಮಿಕ ಸಂಗತಿಗಳ ಕುರಿತು ನಿಮಗೆ ತಿಳಿದಿದೆಯೇ

ಸಿಂಹ ರಾಶಿ:- ಇಂದು ಕಚೇರಿಯಲ್ಲಿ ಪ್ರತಿಕೂಲತೆಯನ್ನು ಹೆಚ್ಚಿಸಬಹುದು. ತಡವಾಗಿ ಬರುವ ನಿಮ್ಮ ಅಭ್ಯಾಸವು ಮೇಲಧಿಕಾರಿಯ ಕೋಪವನ್ನು ಹೆಚ್ಚಿಸುತ್ತದೆ ಮತ್ತು ನೀವು ಅವರಿಗೆ ಉತ್ತರಿಸಬೇಕಾಗಿದೆ. ವ್ಯಾಪಾರಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಿದೆ. ನಿಮ್ಮ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರವನ್ನು ಗೌಪ್ಯವಾಗಿ ಇಡಬೇಕಾಗುತ್ತದೆ.

ಕನ್ಯಾ ರಾಶಿ:- ಇಂದು ನೀವು ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ತುಂಬಿರುವುದನ್ನು ಕಾಣಬಹುದು. ಸ್ವಲ್ಪ ಸಮಯ ಕಚೇರಿಯಲ್ಲಿ ಶ್ರಮವಹಿಸಿದರೂ ನೀವು ನಿರೀಕ್ಷಿಸಿದಂತೆ ಫಲಿತಾಂಶಗಳನ್ನು ಪಡೆಯುತ್ತಿಲ್ಲ. ಅತಂಕದಲ್ಲಿ ಇರಬೇಡಿ. ಕಠಿಣ ಪರಿಶ್ರಮವನ್ನು ನಂಬಿ. 

ತುಲಾ ರಾಶಿ:- ಇಂದು ಕಚೇರಿಯಲ್ಲಿ ಕೆಲಸ ಮಾಡಲು ನಿಮಗೆ ಆಸಕ್ತಿ ಇರುವುದಿಲ್ಲ. ನೀವು ಆಲಸ್ಯವನ್ನು ಅನುಭವಿಸುವಿರಿ ಮತ್ತು ವಿಶ್ರಾಂತಿ ಪಡೆಯಲು ಬಯಸುತ್ತೀರಿ. ಇಂದು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗದಿದ್ದರೆ ಹಿರಿಯರು ನಿಮಗೆ ಕಟ್ಟುನಿಟ್ಟಾಗಿ ಎಚ್ಚರಿಕೆಯನ್ನು ನೀಡಬಹುದಾಗಿದೆ.

ವೃಶ್ಚಿಕ ರಾಶಿ:- ಹಣದ ವಿಷಯದಲ್ಲಿ ಇಂದು ನಿಮಗೆ ಒಳ್ಳೆಯದಲ್ಲ. ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನಿಮಗೆ ತುಂಬಾ ಸಮಯ ಬೇಕಾಗಬಹುದು. ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡರೆ ಪರಿಸ್ಥಿತಿ ಸುಧಾರಣೆಯಾಗುತ್ತದೆ. ವಿದ್ಯಾರ್ಥಿಗಳು ಒಳ್ಳೆಯ ಫಲಿತಾಂಶವನ್ನು ಕಾಣಬಹುದು.

ಇದನ್ನೂ ಓದಿ - Mantra For Beautiful Wife: ಸುಂದರ ಮಡದಿ ಸಿಗಬೇಕೆ? ಈ ಮಂತ್ರ ಪಠಿಸಿ

ಧನು ರಾಶಿ:- ನೀವು ಎಂದೂ ಕಷ್ಟಕರ ಸನ್ನಿವೇಶಗಳನ್ನು ಎದುರಿಸಬೇಕಾಗಿದೆ. ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಸಾಧ್ಯವಾಗುತ್ತದೆ. ಇಂದು ಕಚೇರಿಯಲ್ಲಿ ನಿಮ್ಮ ಹಿರಿಯರ ವರ್ತನೆ ಸರಿಯಾಗಿರುವುದಿಲ್ಲ. ನೀವು ಬಹಳ ಕಠಿಣ ಮಾತುಗಳನ್ನು ಕೇಳಬಹುದು.

ಮಕರ ರಾಶಿ:- ಆರ್ಥಿಕ ದೃಷ್ಟಿಯಿಂದ ಕೆಲಸಕ್ಕೆ ಕೆಲವು ತೊಂದರೆಗಳು ಎದುರಾಗಬಹುದು. ಖರ್ಚುಗಳು ನಿಯಂತ್ರಿಸಲು ಸೂಚಿಸಲಾಗುತ್ತದೆ. ಅನಗತ್ಯ ವಿಚಾರಗಳಿಗೆ ಹಣ ವ್ಯಯ ಮಾಡುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ವಿಷಾದಿಸುತ್ತೀರಿ. ವ್ಯಾಪರಿಗಳಿಗೆ ಇಂದು ಸಾಮಾನ್ಯವಾದ ದಿನವಾಗಿರುತ್ತದೆ.

ಕುಂಭ ರಾಶಿ:- ಇಂದು ನಿಮ್ಮ ವೈಯಕ್ತಿಕ ಸಂಬಂಧದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಬಾಂಧವ್ಯ ಸುಧಾರಿಸುತ್ತದೆ ಮತ್ತು ಇಂದು ನೀವು ಅವರ ಸಂಪೂರ್ಣ ಬೆಂಬಲವನ್ನು ಸಹ ಪಡೆಯುತ್ತಿರ. ಮದುವೆಯಾಗುವುದರ ಬಗ್ಗೆ ಒಂದು ಹೆಜ್ಜೆ ಮುಂದೆ ಇಡುವುದು ಉತ್ತಮ.

ಮೀನಾ ರಾಶಿ:- ಇಂದು ಯಾವುದೇ ಒಳ್ಳೆಯ ಸುದ್ದಿಯನ್ನು ಸ್ವೀಕರಿಸುವ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ. ನೀವು ವಿದ್ಯಾರ್ಥಿಯಾಗಿದ್ದರೆ ಇಂದು ನಿಮ್ಮ ಕಠಿಣ ಪರಿಶ್ರಮ ಸಿಹಿ ಫಲವನ್ನು ನೀವು ಪಡೆಯಬಹುದು. ಇಂದು ಹಣದ ದೃಷ್ಟಿಯಿಂದ ಉತ್ತಮ ಫಲಿತಾಂಶವನ್ನು ಪಡೆಯುವ ನಿರೀಕ್ಷೆಯಿದೆ.

ಇದನ್ನೂ ಓದಿ - ಸುಖ, ಸಮೃದ್ಧಿ ತರಬಲ್ಲದು ಚಿಟಿಕೆ ಉಪ್ಪು..! ವಾಸ್ತು ನಂಬುವವರು ಓದಲೇ ಬೇಕು,!

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News