ನವದೆಹಲಿ : ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಪ್ರತಿಯೊಂದು ಕೆಲಸಕ್ಕೂ ಶುಭ ಮುಹೂರ್ತವನ್ನು ಹೇಳಲಾಗುತ್ತದೆ. ಸಾಲವನ್ನು ನೀಡುವುದು ಅಥವಾ ಮರುಪಾವತಿಸಲು, ಹೂಡಿಕೆಗೆ ಕೆಲವೊಂದು ದಿನವನ್ನು ಉತ್ತಮ ಎಂದು ಹೇಳಲಾಗುತ್ತದೆ (Special day for investment). ಇನ್ನು ಕೆಲವು ದಿನವನ್ನು ಅಶುಭ ಎಂದು ಹೇಳಲಾಗುತ್ತದೆ. ನಕ್ಷತ್ರ, ತಿಥಿ ಮತ್ತು ಸೂರ್ಯ ಸಂಕ್ರಾಂತಿಯ ಆಧಾರದ ಮೇಲೆ ಹಣದ ವ್ಯವಹಾರಗಳಿಗೆ ಶುಭ ಸಮಯ ಮತ್ತು ದಿನವನ್ನು ನಿರ್ಧರಿಸಲಾಗುತ್ತದೆ.
ಈ ನಕ್ಷತ್ರಗಳ ಕಾಲದಲ್ಲಿ ಹಣದ ವ್ಯವಹಾರ ನಡೆಸಿದರೆ ಶುಭ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology), ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಶ್ರಾವಣ, ಧನಿಷ್ಠ, ಶತಭಿಷ, ಸ್ವಾತಿ, ಅನುರಾಧ, ಚಿತ್ರ, ವಿಶಾಖ ಮತ್ತು ರೇವತಿ ಈ 12 ನಕ್ಷತ್ರಗಳ ಸಮಯದಲ್ಲಿ ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳನ್ನು ನಡೆಸುವುದು ಅತ್ಯಂತ ಶುಭಾವಾಗಿರುತ್ತದೆ. ಹಾಗೆಯೇ ಈ ನಕ್ಷತ್ರಗಳಲ್ಲಿ ಮೇಷ (Aries), ಕರ್ಕಾಟಕ, ತುಲಾ (Libra), ಮಕರ ರಾಶಿಗಳ 5, 8 ಮತ್ತು 9 ನೇ ಸ್ಥಾನಗಳು ಶುಭವಾಗಿದ್ದರೆ ಹಣದ ವ್ಯವಹಾರ, ಹೂಡಿಕೆ, ಬ್ಯಾಂಕ್ಗಳಲ್ಲಿ ಹಣ ಠೇವಣಿ ಇಡುವುದು ಮತ್ತು ಹೂಡಿಕೆ ಮಾಡಳು ಬಹಳ ಶುಭ ಸಮಯ ಎಂದು ಹೇಳಲಾಗುತ್ತದೆ (Special day for investment).
ಇದನ್ನೂ ಓದಿ : 4 ಗ್ರಹಗಳ ರಾಶಿಚಕ್ರದಲ್ಲಿ ಬದಲಾವಣೆಯಿಂದ ಎದುರಾಗಲಿದೆ ಈ ರಾಶಿಯವರಿಗೆ ಅಪಾಯ
ವಹಿವಾಟು ಮತ್ತು ಹೂಡಿಕೆಗಳಿಗೆ ಶುಭ ದಿನ :
ಮಂಗಳವಾರ (Tuesday) ಯಾರಿಂದಲೂ ಸಾಲ ತೆಗೆದುಕೊಳ್ಳಬಾರದು. ಏಕೆಂದರೆ ಈ ದಿನದಂದು ತೆಗೆದುಕೊಂಡ ಹಣವನ್ನು ಶೀಘ್ರದಲ್ಲೇ ಹಿಂತಿರುಗಿಸಲು ಸಾಧ್ಯವಾಗುವುದಿಲ್ಲ ಎನ್ನುತ್ತದೆ ಜ್ಯೋತಿಷ್ಯ (Astrology). ಆದರೆ ಸಾಲವನ್ನು ಮರುಪಾವತಿಸುವುದಾರೆ ಮಂಗಳವಾರವನ್ನು ಆಯ್ಕೆ ಮಾಡಬಹುದು. ಈ ದಿನದಂದು ಸಾಲವನ್ನು ತೀರಿಸಿದರೆ, ವ್ಯಕ್ತಿಯು ಶಾಶ್ವತವಾಗಿ ಸಾಲ ಮುಕ್ತನಾಗುತ್ತಾನೆ ಎನ್ನಲಾಗಿದೆ.
ಬುಧವಾರ ಯಾರಿಗೂ ಸಾಲ ಕೊಡಬೇಡಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧವಾರ ಯಾರಿಗಾದರೂ ಸಾಲ ನೀಡುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಈ ದಿನದಂದು ಸಾಲ ನೀಡಿದ ಹಣವನ್ನು ಮರಳಿ ಪಡೆಯಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಬುಧವಾರದಂದು (Wednesday) ತಪ್ಪಿಯೂ ಯಾರಿಗೂ ಸಾಲ ನೀಡಬೇಡಿ.
ಇದನ್ನೂ ಓದಿ : Vastu Shastra: ಮನೆಯಲ್ಲಿ ಸದಾ ಸಂತೋಷ ತುಂಬಿರಲು ನಿತ್ಯ ಈ ವಾಸ್ತು ಸಲಹೆಗಳನ್ನು ಅನುಸರಿಸಿ
ಹೂಡಿಕೆಗೆ ಬುಧವಾರ ಉತ್ತಮ ದಿನ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ರೀತಿಯ ಹೂಡಿಕೆಗೆ ಬುಧವಾರ ಅತ್ಯಂತ ಮಂಗಳಕರ ದಿನವಾಗಿದೆ. ಈ ದಿನದಂದು ಹೂಡಿಕೆ ಮಾಡುವುದರಿಂದ ನಾಲ್ಕು ಪಟ್ಟು ಲಾಭ ಬರುತ್ತದೆ ಎಂದು ನಂಬಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.