ಬೆಂಗಳೂರು : ಪ್ರತಿಯೊಬ್ಬ ವ್ಯಕ್ತಿಯೂ ಕನಸು ಕಾಣುತ್ತಾನೆ. ವ್ಯಕ್ತಿಯು ಎಚ್ಚರವಿದ್ದಾಗ ಕಾಣುವ ಕನಸು ನನಸಾಗಬೇಕಾದರೆ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಆ ಪರಿಶ್ರಮದ ಫಲವಾಗಿ ಯಶಸ್ಸು ಸಿಗುತ್ತದೆ. ಆದರೆ ರಾತ್ರಿ ನಿದ್ದೆಯ ವೇಳೆ ಬೀಳುವ ಕನಸು ಮುಂಬರುವ ಸಮಯದಲ್ಲಿ ಸಂಭವಿಸುವ ಘಟನೆಗಳನ್ನು ಸೂಚಿಸುತ್ತವೆ. ಸಪ್ನ ಶಾಸ್ತ್ರದಲ್ಲಿ, ರಾತ್ರಿಯ ವೇಳೆ ಬೀಳುವ ಕನಸುಗಳ ಅರ್ಥವನ್ನು ಹೇಳುವುದರ ಜೊತೆಗೆ, ಯಾವ ಕನಸುಗಳು ಯಾವ ಸಮಯದಲ್ಲಿ ಬಿದ್ದರೆ ಅದು ನನಸಾಗುತ್ತವೆ ಎಂದು ಹೇಳಲಾಗಿದೆ. ಅಲ್ಲದೆ ಕನಸುಗಳ ಶುಭ ಮತ್ತು ಅಶುಭ ಫಲಿತಾಂಶಗಳನ್ನು ಕೂಡಾ ವಿವರಿಸಲಾಗಿದೆ.
ನನಸಾಗುತ್ತವೆ ಬ್ರಾಹ್ಮೀ ಮುಹೂರ್ತದ ಕನಸುಗಳು :
ಸಪ್ನ ಶಾಸ್ತ್ರದ ಪ್ರಕಾರ ಬ್ರಾಹ್ಮೀ ಮುಹೂರ್ತದಲ್ಲಿ ಕಂಡ ಕನಸುಗಳು ನನಸಾಗುವ ಸಾಧ್ಯತೆ ಹೆಚ್ಚು. ಈ ಕನಸುಗಳು ತಮ್ಮ ಶುಭ ಮತ್ತು ಅಶುಭ ಫಲಿತಾಂಶಗಳನ್ನು ತ್ವರಿತವಾಗಿ ನೀಡುತ್ತವೆ ಎಂದು ಹೇಳಲಾಗುತ್ತದೆ. ಮುಂಜಾನೆ 3 ರಿಂದ 5 ಗಂಟೆಯ ನಡುವಿನ ಸಮಯವನ್ನು ಬ್ರಾಹ್ಮೀ ಮುಹೂರ್ತ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಕಂಡ ಕನಸುಗಳು ಹೆಚ್ಚಾಗಿ ನನಸಾಗುತ್ತವೆ. ಈ ಸಮಯದಲ್ಲಿ ಕಂಡ ಕನಸುಗಳು ಬಲವಾದ ಹಣಕಾಸಿನ ಲಾಭವನ್ನು ಸೂಚಿಸುತ್ತವೆ.
ಇದನ್ನೂ ಓದಿ : ಮಂಗಳ ಗೋಚರ : ಈ ಮೂರು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸಿಗಲಿದೆ ಬಹು ದೊಡ್ಡ ಯಶಸ್ಸು ..!
ಕನಸಿನಲ್ಲಿ ಚಿಕ್ಕ ಮಗು ನಗುವುದು ಮತ್ತು ಮೋಜು ಮಾಡುವುದನ್ನು ಕಂಡರೆ : ಕನಸಿನಲ್ಲಿ ಚಿಕ್ಕ ಮಗು ನಗುವುದು ಅಥವಾ ಮೋಜು ಮಾಡುವುದನ್ನು ನೋಡಿದರೆ, ಅದು ತುಂಬಾ ಶ್ರೀಮಂತವಾಗಿರುವ ಸಂಕೇತವಾಗಿದೆ. ಅಂದರೆ, ಯಾವುದೇ ಸಮಯದಲ್ಲಿ ಬಹಳಷ್ಟು ಹಣವನ್ನು ಪಡೆಯಲಿದ್ದೀರಿ ಎನ್ನುವ ಸಂಕೇತವನ್ನು ನೀಡುತ್ತದೆ.
ಕನಸಿನಲ್ಲಿ ಧಾನ್ಯಗಳ ರಾಶಿಯನ್ನು ನೋಡುವುದು: ಕನಸಿನಲ್ಲಿ ಧಾನ್ಯಗಳ ರಾಶಿಯನ್ನು ನೋಡುವುದು ಕೂಡಾ ತುಂಬಾ ಮಂಗಳಕರ. ಮತ್ತೊಂದೆಡೆ, ಧಾನ್ಯಗಳ ರಾಶಿಯ ಮೇಲೆ ಏರುತ್ತಿರುವುದನ್ನು ನೋಡುವುದು ಕೂಡಾ ಶೀಘ್ರ ಶ್ರೀಮಂತರಾಗುವ ಸೂಚನೆಯಾಗಿರುತ್ತದೆ.
ಇದನ್ನೂ ಓದಿ : Shani Gochar 2022: ಇಂದಿನಿಂದ ಬರೋಬ್ಬರಿ ಒಂದು ತಿಂಗಳ ಬಳಿಕ ಈ ಜನರ ಕೆಟ್ಟ ಕಾಲ ಆರಂಭ, ಪಾರಾಗಲು ಈ ಉಪಾಯ ಮಾಡಿ
ಕನಸಿನಲ್ಲಿ ನೀರು ತುಂಬಿದ ಮಡಕೆಯನ್ನು ನೋಡುವುದು: ನೀವು ಯಾವುದಾದರೂ ಕೆಲಸಕ್ಕಾಗಿ ಅಥವಾ ಪ್ರಯಾಣಕ್ಕೆ ಹೊರಟ ವೇಳೆ, ದಾರಿಯಲ್ಲಿ ನೀರು ತುಂಬಿದ ಪಾತ್ರೆಯನ್ನು ನೋಡಿದರೆ, ಅದು ತುಂಬಾ ಮಂಗಳಕರವಾಗಿರುತ್ತದೆ. ಅದೇ ರೀತಿ, ಕನಸಿನಲ್ಲಿ ನೀರು ತುಂಬಿದ ಪಾತ್ರೆಯನ್ನು ನೋಡುವುದು ಕೂಡಾ ತುಂಬಾ ಮಂಗಳಕರವಾಗಿರುತ್ತದೆ. ಇದು ಅಪಾರ ಸಂಪತ್ತನ್ನು ಹೊಂದಿರುವ ಸಂಕೇತವಾಗಿದೆ.
ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ಕಂಡರೆ : ನಿಮ್ಮ ಕನಸಿನಲ್ಲಿ ನೀವು ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ಕಂಡರೆ ಯಾವುದೋ ಮೂಲೆಯಿಂದ ಹಠಾತ್ ಹಣ ಬರುವ ಸಂಕೇತವಾಗಿದೆ.
ಕನಸಿನಲ್ಲಿ ಪೂರ್ವಜರನ್ನು ನೋಡುವುದು: ನಿಮ್ಮ ಪೂರ್ವಜರು ನಗುತ್ತಿರುವುದನ್ನು ಕನಸಿನಲ್ಲಿ ಕಂಡರೆ ಅಥವಾ ನಿಮಗೆ ಆಶೀರ್ವಾದ ಮಾಡಿದಂತೆ ಕಂಡರೆ ತುಂಬಾ ಒಳ್ಳೆಯದು. ಅಂತಹ ಕನಸು ಬಹಳಷ್ಟು ಹಣ, ಯಶಸ್ಸನ್ನು ಸೂಚಿಸುತ್ತದೆ.
ಇದನ್ನೂ ಓದಿ : Early Marriage Tips: ವಿವಾಹ ಯೋಗ ಕೂಡಿ ಬರುತ್ತಿಲ್ಲವೇ? ಇಂದೇ ಈ ಉಪಾಯ ಅನುಸರಿಸಿ
( ಸೂಚನೆ : ಈ ಮೇಲಿನ ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.