Black sesame seeds For Health: ಈ ಆರು ಕಾರಣಗಳಿಗಾಗಿ ಆಹಾರದಲ್ಲಿ ಸೇವಿಸಿ ಕಪ್ಪು ಎಳ್ಳು

 Benefits Of Eating Black sesame seeds : ಕಪ್ಪು ಎಳ್ಳಿನ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.  ಎಳ್ಳಿನಲ್ಲಿ ಔಷಧಿಯ ಗುಣಗಳು ಸಮೃದ್ದವಾಗಿರುತ್ತದೆ. ಪಾಲಿಸ್ಯಾಚುರೇಟೆಡ್ ಫಾತಿ ಆಸಿಡ್ , ಒಮೆಗಾ -6, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಅಂಶಗಳು ಕಪ್ಪು ಎಳ್ಳಿನಲ್ಲಿ ಕಂಡುಬರುತ್ತವೆ.

Written by - Ranjitha R K | Last Updated : Jul 19, 2021, 07:25 PM IST
  • ಕಪ್ಪು ಎಳ್ಳಿನ ಸೇವನೆಯು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
  • ಎಳ್ಳಿನ ಸೇವನೆಯು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
  • ರಕ್ತದೊತ್ತಡ ರೋಗಿಗಳಿಗೆ ಕಪ್ಪು ಎಳ್ಳಿನ ಸೇವನೆಯು ಪ್ರಯೋಜನಕಾರಿಯಾಗಿದೆ.
Black sesame seeds  For Health:  ಈ ಆರು ಕಾರಣಗಳಿಗಾಗಿ ಆಹಾರದಲ್ಲಿ ಸೇವಿಸಿ ಕಪ್ಪು ಎಳ್ಳು  title=
ಕಪ್ಪು ಎಳ್ಳಿನ ಸೇವನೆಯು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. (file photo)

ನವದೆಹಲಿ :  Benefits Of Eating Black sesame seeds : ಕಪ್ಪು ಎಳ್ಳಿನ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.  ಎಳ್ಳಿನಲ್ಲಿ ಔಷಧಿಯ ಗುಣಗಳು ಸಮೃದ್ದವಾಗಿರುತ್ತದೆ. ಪಾಲಿಸ್ಯಾಚುರೇಟೆಡ್ ಫಾತಿ ಆಸಿಡ್ , ಒಮೆಗಾ -6, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಅಂಶಗಳು ಕಪ್ಪು ಎಳ್ಳಿನಲ್ಲಿ ಕಂಡುಬರುತ್ತವೆ. ಇದು ದೇಹವನ್ನು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಎಳ್ಳನ್ನು ಅನೇಕ ಭಕ್ಷ್ಯಗಳು ಮತ್ತು ಸಿಹಿತಿಂಡಿಗಳಲ್ಲಿ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಎಳ್ಳನ್ನು ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯ ವೃದ್ದಿಗೂ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಕಪ್ಪು ಎಳ್ಳು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಬಹುದು. 

ಎಳ್ಳು ತಿನ್ನುವುದರ ಪ್ರಯೋಜನಗಳು: 
1. ಹೃದಯಕ್ಕಾಗಿ: ಎಳ್ಳಿನ ಸೇವನೆಯು ಹೃದಯವನ್ನು ಆರೋಗ್ಯವಾಗಿಡಲು (Healthy heart) ಸಹಾಯ ಮಾಡುತ್ತದೆ. ಎಳ್ಳಿನಲ್ಲಿರುವ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಸತು ಮತ್ತು ಸೆಲೆನಿಯಮ್ ಅನೇಕ ರೋಗಗಳ ಅಪಾಯದಿಂದ ಹೃದಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಇದನ್ನೂ  ಓದಿ : Dates and Milk Benefits : ಪುರುಷರು ಹಾಲಿನಲ್ಲಿ ಖರ್ಜೂರ ಬೆರೆಸಿ ಈ ಸಮಯದಲ್ಲಿ ಸೇವಿಸುವುದರಿಂದ ಶಕ್ತಿ ದ್ವಿಗುಣ ಮತ್ತು ಅಪಾರ ಪ್ರಯೋಜನಗಳಿವೆ!

2. ಮೂಳೆಗಳಿಗೆ: ಎಳ್ಳಿನಲ್ಲಿ ಕ್ಯಾಲ್ಸಿಯಂ, ರಂಜಕ ಮತ್ತು ಮೆಗ್ನೀಸಿಯಮ್ ಮುಂತಾದ ಅಂಶಗಳು ಕಂಡುಬರುತ್ತವೆ, ಇದು ಮೂಳೆಗಳನ್ನು ಬಲಪಡಿಸಲು ಮತ್ತು ಕೀಲು ನೋವು ನಿವಾರಿಸಲು ಸಹಾಯ ಮಾಡುತ್ತದೆ. ಮೂಳೆಗಳು ದುರ್ಬಲಗೊಳ್ಳುವುದನ್ನು (bone health) ತಡೆಯಲು, ನಿಮ್ಮ ಆಹಾರದಲ್ಲಿ ಎಳ್ಳನ್ನು ಸೇರಿಸಿಕೊಳ್ಳಬಹುದು.

3. ಅತಿಸಾರಕ್ಕೆ: ಅತಿಸಾರದಲ್ಲಿ ಕಪ್ಪು ಎಳ್ಳಿನ ಸೇವನೆಯನ್ನು ಪ್ರಯೋಜನಕಾರಿ (benefits of sesame seeds) ಎಂದು ಪರಿಗಣಿಸಲಾಗುತ್ತದೆ. ಕಲ್ಲು ಸಕ್ಕರೆ ಯೊಂದಿಗೆ ಕಪ್ಪು ಎಳ್ಳನ್ನು ತಿನ್ನುವುದರಿಂದ ಅತಿಸಾರದ ಸಮಸ್ಯೆಯನ್ನು ನಿಯಂತ್ರಿಸಬಹುದು. 

4.ರಕ್ತದೊತ್ತಡಕ್ಕಾಗಿ: ರಕ್ತದೊತ್ತಡ ರೋಗಿಗಳಿಗೆ (Blood pressure) ಕಪ್ಪು ಎಳ್ಳಿನ ಸೇವನೆಯು ಪ್ರಯೋಜನಕಾರಿಯಾಗಿದೆ. ಕಪ್ಪು ಎಳ್ಳು ಎಣ್ಣೆಯಲ್ಲಿರುವ  ಪಾಲಿ ಅನ್ಸ್ಯಾಚುರೇಟೆಡ್ ಪೈಟ್ ಬ್ಲಡ್ ಶುಗರ್ ಮಟ್ಟವನ್ನು  ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. 

ಇದನ್ನೂ  ಓದಿ : Side Effects Of Sleeping Empty Stomach : ರಾತ್ರಿ ಹೊತ್ತು ಏನೂ ತಿನ್ನದೇ ಮಲಗುವುದರಿಂದ ಎದುರಾಗುತ್ತದೆ ಈ ಸಮಸ್ಯೆಗಳು

5.ಎನರ್ಜಿಗಾಗಿ : ಎಳ್ಳಿನಲ್ಲಿರುವ ಒಮೆಗಾ -6 ನಂತಹ ಆರೋಗ್ಯಕರ ಕೊಬ್ಬಿನ (Fat) ಜೊತೆಗೆ, ಫೈಬರ್, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕ ಇರುತ್ತವೆ, ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. 

 6. ಮಲಬದ್ಧತೆಗಾಗಿ: ಮಲಬದ್ಧತೆಯ (Constipation) ಸಮಸ್ಯೆಯಿಂದ ಬಳಲುತ್ತಿದ್ದರೆ,  ಕಪ್ಪು ಎಳ್ಳು ಪರಿಹಾರವಾಗಲಿದೆ. ಎಲ್ಲಿನಲ್ಲಿ ಫೈಬರ್  ಸಮೃದ್ಧವಾಗಿದೆ. ಮಲಬದ್ಧತೆಯನ್ನು ನಿವಾರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News