ಮಕ್ಕಳ ಸಂತೋಷ ಅಭಿವೃದ್ಧಿಗೆ ಶ್ರಾವಣದಲ್ಲಿ ಈ ಕೆಲಸ ಮಾಡಿ

ತಮ್ಮ ಮಕ್ಕಳ ಯಶಸ್ಸಿಗೆ, ಶ್ರಾವಣ ತಿಂಗಳಲ್ಲಿ ಪ್ರತಿವರ್ಷ  ಈ ಪರಿಹಾರ ಕಾರ್ಯವನ್ನು ಮಾಡಬೇಕು. ಇದಕ್ಕಾಗಿ ಶಿವನ ಆರಾಧನೆ ಮಾಡುವುದು ಅಗತ್ಯ. 

Written by - Ranjitha R K | Last Updated : Jul 30, 2021, 02:16 PM IST
  • ಹೆತ್ತವರು ಮಗುವಿನ ಯಶಸ್ಸನ್ನು ಸದಾ ಬಯಸುತ್ತಾರೆ.
  • ಶಿವನ ಆಶೀರ್ವಾದ ಪಡೆಯಲು ಇಲ್ಲಿದೆ ಸುಲಭ ಮಾರ್ಗ
  • ಶ್ರಾವಣದಲ್ಲಿ ರುದ್ರಾಭಿಷೇಕ ಮಾಡಬೇಕು
ಮಕ್ಕಳ ಸಂತೋಷ ಅಭಿವೃದ್ಧಿಗೆ ಶ್ರಾವಣದಲ್ಲಿ ಈ ಕೆಲಸ ಮಾಡಿ title=
ಶಿವನ ಆಶೀರ್ವಾದ ಪಡೆಯಲು ಇಲ್ಲಿದೆ ಸುಲಭ ಮಾರ್ಗ (photo zee news)

ನವದೆಹಲಿ: ಕೆಲವು ಮಕ್ಕಳು ಬಾಲ್ಯದಿಂದಲೂ ಬಹಳ ಪ್ರತಿಭಾವಂತರಾಗಿರುತ್ತಾರೆ. ಓದುವುದು, ಬರೆಯುವುದು, ಕ್ರೀಡೆ, ಪಠ್ಯೇತರ ಚಟುವಟಿಕೆಗಳು ಎಲ್ಲದರಲ್ಲೂ ಮುಂದಿರುತ್ತಾರೆ. ಎಲ್ಲಾ ಹೆತ್ತವರು ತಮ್ಮ ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ವಿಯಾಗಬೇಕೆಂದು ಬಯಸುತ್ತಾರೆ. ಉತ್ತಮ ವೃತ್ತಿಜೀವನ ಪಡೆಯಬೇಕೆಂದು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಇದರ ಜೊತೆ ದೇವರ ಕೃಪೆಯೂ (blessings of god) ಅಗತ್ಯವಿರುತ್ತದೆ. ದೇವರ ಕೃಪೆಯಿದ್ದರೆ, ಮಗು ಉತ್ತಮ ಆರೋಗ್ಯ ಹೊಂದುತ್ತದೆ. ಅಲ್ಲದೆ, ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸನ್ನು ಪಡೆಯುತ್ತದೆ.

ಶ್ರಾವಣ ತಿಂಗಳಲ್ಲಿ ಮಾಡಿ ಈ ಪರಿಹಾರ : 
ತಮ್ಮ ಮಕ್ಕಳ ಯಶಸ್ಸಿಗೆ, ಶ್ರಾವಣ ತಿಂಗಳಲ್ಲಿ (Shrawana month) ಪ್ರತಿವರ್ಷ  ಈ ಪರಿಹಾರ ಕಾರ್ಯವನ್ನು ಮಾಡಬೇಕು. ಇದಕ್ಕಾಗಿ ಶಿವನ (Lord Shiva)ಆರಾಧನೆ ಮಾಡುವುದು ಅಗತ್ಯ. ಶ್ರಾವಣ ಎಂದರೆ, ಶಿವನಿಗೆ ಪ್ರಿಯವಾದ ತಿಂಗಳು. ಈ ತಿಂಗಳಲ್ಲಿ ಕುಟುಂಬದೊಂದಿಗೆ ರುದ್ರಭಿಷೇಕ ಸಲ್ಲಿಸಬೇಕು. ರುದ್ರಾಭಿಷೇಕ ಮಾಡುವಾಗ ಮಗುವಿನ ಕೈಯಿಂದಲೂ ಮಾಡಿಸಬೇಕು. ಹೀಗೆ ಮಾಡುವುದರಿಂದ, ಮಗು ಜೀವನದ ಪ್ರತಿಯೊಂದು ಹಂತದಲ್ಲೂ ಯಶಸ್ಸು ಪಡೆಯುತ್ತದೆ. ಸದಾ ಆರೋಗ್ಯದಿಂದ ಇರುತ್ತದೆ. 

ಇದನ್ನೂ ಓದಿ : Home Remedies: ಹಲ್ಲಿಯನ್ನು ಮನೆಯಿಂದ ಓಡಿಸಲು ಈ ಮನೆಮದ್ದನ್ನು ಟ್ರೈ ಮಾಡಿ, ಕ್ಷಣಾರ್ಧದಲ್ಲಿ ಪರಿಹಾರ ಪಡೆಯಿರಿ

ಮಗುವಿಗೆ ಸ್ವಸ್ತಿಕ ಧರಿಸಿ :
ಸ್ವಸ್ತಿಕದ ಸಂಕೇತವನ್ನು ಸನಾತನ ಧರ್ಮದಲ್ಲಿ ಬಹಳ ಶುಭವೆಂದು ಪರಿಗಣಿಸಲಾಗಿದೆ. ಕೆಂಪು ದಾರದಲ್ಲಿ ಚಿನ್ನ (Gold) ಅಥವಾ ಬೆಳ್ಳಿಯ ಸ್ವಸ್ತಿಕವನ್ನು ಹಾಕಿ ಮಗುವಿನ ಕೊರಳಿಗೆ ಹಾಕಬೇಕು. ಹೀಗೆ ಮಾಡುವುದರಿಂದಲೂ ಹೆಚ್ಚಿನ ಪ್ರಯೋಜನ ಸಿಗುತ್ತದೆ ಎನ್ನಲಾಗಿದೆ. ಸ್ವಸ್ತಿಕವನ್ನು (Benefits of swasthik) ಧರಿಸಿದರೆ ಈಶ್ವರನ ವಿಶೇಷ ಕೃಪೆಗೆ ಪಾತ್ರರಾಗಬಹುದಂತೆ. ಇದರೊಂದಿಗೆ, ಮಗು ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸು ಸಿಗುತ್ತದೆ. ಮಾಡುವ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯನಾಗಿರುತ್ತಾನೆ.

ಇದನ್ನೂ ಓದಿ: ಪೂಜಾ ಕಾರ್ಯ ಮಾತ್ರವಲ್ಲ ಈ ಎಲ್ಲಾ ಕಾರಣಗಳಿಗೂ ಪ್ರಯೋಜನಕಾರಿ ಕರ್ಪೂರ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News