ನವದೆಹಲಿ : Lord Shiva Favourite Zodiac Signs : ಶ್ರಾವಣ ಮಾಸ ಇನ್ನೇನು ಆರಂಭವಾಗಲಿದೆ. ಶಿವನಿಗೆ ಈ ತಿಂಗಳು ಅತ್ಯಂತ ಪ್ರಿಯವಾದುದು ಎನ್ನಲಾಗಿದೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಗಳೆಂದರೆ ಶಿವನಿಗೆ ಬಹಳ ಇಷ್ಟವಂತೆ. ಈ ರಾಶಿಚಕ್ರ ಚಿಹ್ನೆಗಳ (Zodiac sign) ಮೇಲೆ ಶಿವನಿಗೆ ವಿಶೇಷ ಅನುಗ್ರಹವಿರುತ್ತದೆ.
ಮೇಷ ರಾಶಿ : ಮೇಷ ರಾಶಿಯ ಜನರು ಶಿವನ ವಿಶೇಷ ಅನುಗ್ರಹವನ್ನು ಹೊಂದಿರುತ್ತಾರೆ. ಜ್ಯೋತಿಷ್ಯ (Astrology) ನಂಬಿಕೆಗಳ ಪ್ರಕಾರ, ಮೇಷ ರಾಶಿಯ ಜನರು ಶಿವನನ್ನು ಪೂಜಿಸಬೇಕು (Lord Shiva) . ಮೇಷ ರಾಶಿಯವರು ನಿಯಮಿತವಾಗಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು. ಶಿವಲಿಂಗಕ್ಕೆ ನೀರು ಅರ್ಪಿಸುವ ಮೂಲಕ, ಶಿವನ ವಿಶೇಷ ಅನುಗ್ರಹವನ್ನು ಪಡೆಯಲಾಗುತ್ತದೆ.
ಇದನ್ನೂ ಓದಿ : ನಡೆದಾಡುವಾಗ ಮಾಡುವ ಈ ತಪ್ಪು ಶನಿ ರಾಹುವಿನ ಪ್ರಕೋಪಕ್ಕೆ ಕಾರಣವಾಗಬಹುದು
ಮಕರ ರಾಶಿ : ಮಕರ ರಾಶಿಯ ಜನರು ಶಿವನ ವಿಶೇಷ ಆಶೀರ್ವಾದವನ್ನು ಹೊಂದಿದ್ದಾರೆ. ಮಕರ ರಾಶಿಯ ಜನರು ಪ್ರತಿದಿನ ಶಿವನನ್ನು ಪೂಜಿಸಬೇಕು (Shiva pooja) . ಈ ರಾಶಿಯ ಜನರು ಓಂ ನಮ ಶಿವ ಎಂದು ಜಪಿಸಬೇಕು. ಭಗವಾನ್ ಶಿವ ಕೃಪೆಯಿಂದ ಈ ರಾಶಿಯ ಜನರು ಪ್ರತಿಯೊಂದು ಕಾರ್ಯದಲ್ಲೂ ಯಶಸ್ಸನ್ನು ಪಡೆಯುತ್ತಾರೆ.
ಕುಂಭ ರಾಶಿ : ಕುಂಭ ರಾಶಿಯ ಜನರು ಶಿವನಿಗೆ ಪ್ರಿಯರು. ಈ ರಾಶಿಯ ಜನರು ಕೂಡಾ ಶಿವಲಿಂಗಕ್ಕೆ (Shivalinga) ನೀರು ಅರ್ಪಿಸಬೇಕು. ಕುಂಭ ರಾಶಿಯ ಜನರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ (Donate) ಮಾಡಬೇಕು. ಧಾರ್ಮಿಕ ನಂಬಿಕೆಗಳ ಪ್ರಕಾರ, ದಾನ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.