ನವೆಂಬರ್ 24 ರಿಂದ, 5 ರಾಶಿಯವರ ಅದೃಷ್ಟ ಬದಲಿಸಲಿದ್ದಾನೆ ಗುರು.!

ನವೆಂಬರ್ 24 ರಂದು, ಮುಂಜಾನೆ 4:36 ಕ್ಕೆ ಗುರು ಮತ್ತೆ ನೇರ ಚಲನೆ ಆರಂಭಿಸಲಿದ್ದಾನೆ.  ಗುರುವಿನ ನೇರ ಚಲನೆಯಿಂದ ಸಂಪತ್ತು, ಉದ್ಯೋಗ, ಮದುವೆಯ ವಿಷಯದಲ್ಲಿ ಶುಭ ಫಲಿತಾಂಶಗಳು ಸಿಗಲಿವೆ. ವಿಶೇಷವಾಗಿ 5 ರಾಶಿಯವರಿಗೆ ಗುರುಗ್ರಹದ ನೇರ ಚಲನೆ ಪ್ರಯೋಜನಕಾರಿಯಾಗಿ ಸಾಬೀತಗಲಿದೆ.  

Written by - Ranjitha R K | Last Updated : Nov 14, 2022, 08:43 AM IST
  • ಗುರುವನ್ನು ಅತ್ಯಂತ ಶ್ರೇಷ್ಠ ಗ್ರಹ ಎಂದು ಹೇಳಲಾಗುತ್ತದೆ.
  • ಗುರುವನ್ನು ಅದೃಷ್ಟದ ಗ್ರಹ ಎಂದು ಕರೆಯಲಾಗುತ್ತದೆ.
  • 5 ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ಗುರು
ನವೆಂಬರ್ 24 ರಿಂದ, 5 ರಾಶಿಯವರ ಅದೃಷ್ಟ ಬದಲಿಸಲಿದ್ದಾನೆ ಗುರು.!  title=
guru rashi parivarthane (file photo)

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಗುರುವನ್ನು ಅತ್ಯಂತ ಶ್ರೇಷ್ಠ ಗ್ರಹ ಎಂದು ಹೇಳಲಾಗುತ್ತದೆ. ಗುರು ಅದೃಷ್ಟದ ಗ್ರಹ. ಯಾರ ಜಾತಕದಲ್ಲಿ ಗುರು ಗ್ರಹದ ಸ್ಥಾನ ಉತ್ತಮವಾಗಿರುತ್ತದೆಯೋ, ಅವರ ಎಲ್ಲಾ ಕೆಲಸಗಳು ಕೈ ಗೂಡುತ್ತವೆ.   ಇನ್ನು ಗುರುವಿನ ನೇರ ಸಂಚಾರವನ್ನು ಬಹಳ ಮಂಗಳಕರವೆಂದು ಹೇಳಲಾಗುತ್ತದೆ. ಇದೀಗ ಗುರು ತನ್ನದೇ  ರಾಶಿಯಾದ ಮೀನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಿದ್ದಾನೆ. ಆದರೆ ನವೆಂಬರ್ 24 ರಂದು, ಮುಂಜಾನೆ 4:36 ಕ್ಕೆ ಗುರು ಮತ್ತೆ ನೇರ ಚಲನೆ ಆರಂಭಿಸಲಿದ್ದಾನೆ. ಗುರುವಿನ ನೇರ ಚಲನೆಯಿಂದ ಸಂಪತ್ತು, ಉದ್ಯೋಗ, ಮದುವೆಯ ವಿಷಯದಲ್ಲಿ ಶುಭ ಫಲಿತಾಂಶಗಳು ಸಿಗಲಿವೆ. ವಿಶೇಷವಾಗಿ 5 ರಾಶಿಯವರಿಗೆ ಗುರುಗ್ರಹದ ನೇರ ಚಲನೆ ಪ್ರಯೋಜನಕಾರಿಯಾಗಿ ಸಾಬೀತಗಲಿದೆ.  

ಈ ರಾಶಿಯವರ ಅದೃಷ್ಟ ಬೆಳಗಲಿದ್ದಾನೆ ಗುರು : 
ವೃಷಭ ರಾಶಿ : ವೃಷಭ ರಾಶಿಯವರಿಗೆ ಗುರುವಿನ ನೇರ ಚಲನೆ ಶುಭ ಫಲ ನೀಡಲಿದೆ. ವೃತ್ತಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಲಾಭಗಳಾಗಬಹುದು. ಬಡ್ತಿ ಸಿಗುವ ಅವಕಾಶಗಳು ಹೆಚ್ಚಿರಲಿವೆ. ಹೊಸ ಕೆಲಸಕ್ಕೆ ಸೇರಬಹುದು. ಆದಾಯ ಹೆಚ್ಚಲಿದೆ. ವ್ಯಾಪಾರ ಪ್ರಾರಂಭಿಸಲು ಉತ್ತಮ ಸಮಯ. ವೈವಾಹಿಕ ಜೀವನ ಉತ್ತಮವಾಗಿರಲಿದೆ. 

ಇದನ್ನೂ ಓದಿ : Dream Science: ನೀವು ಅದೃಷ್ಟವಂತರಾಗಿದ್ದರೆ, ಈ ರೀತಿಯ ಕನಸು ಬೀಳುತ್ತವಂತೆ!

ಕರ್ಕಾಟಕ ರಾಶಿ : ಗುರುಗ್ರಹದ ನೇರ ಚಲನೆಯು ಕರ್ಕಾಟಕ ರಾಶಿಯವರ ವೃತ್ತಿಜೀವನದಲ್ಲಿ ಹೊಸ ಮಾರ್ಗಗಳನ್ನು ತೆರೆಯುತ್ತದೆ. ಹಣ, ವೃತ್ತಿ, ಮದುವೆಯ ವಿಚಾರದಲ್ಲಿ ಬರುವ ಅಡೆತಡೆಗಳು ನಿವಾರಣೆಯಾಗುತ್ತವೆ. ವಿದೇಶಕ್ಕೆ ತೆರಳುವ ಯೋಗ ಕೂಡಿ  ಬರಲಿದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ. ನೀವು ಹೊಸ ಕೆಲಸವನ್ನು ಪ್ರಾರಂಭಿಸಬಹುದು. ಆರ್ಥಿಕ ಸ್ಥಿತಿ  ಉತ್ತಮವಾಗಿರಲಿದೆ. 

ಕನ್ಯಾ ರಾಶಿ : ದೇವಗುರು ಬೃಹಸ್ಪತಿಯ ಸಂಚಾರದಲ್ಲಿ ಆಗುವ ಬದಲಾವಣೆಯು ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ವ್ಯಾಪಾರಸ್ಥರ ಲಾಭ ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಂಭವವಿದೆ. ವೇತನ ಹೆಚ್ಚಳವಾಗುವ ಸಂಭವವಿದೆ. ಎಲ್ಲಾ ಕೆಲಸಗಳಲ್ಲಿಯೂ ಜೀವನ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. 

ಇದನ್ನೂ ಓದಿ : Chanakya Niti : ಕೋಟ್ಯಾಧಿಪತಿಯಾಗಲು ಚಾಣಕ್ಯನ ಈ 4 ಉಪಾಯಗಳನ್ನು ಅನುಸರಿಸಿ!

ವೃಶ್ಚಿಕ ರಾಶಿ : ನವೆಂಬರ್ 24 ರಿಂದ ವೃಶ್ಚಿಕ ರಾಶಿಯವರಿಗೆ ಸುವರ್ಣ ದಿನಗಳು ಆರಂಭವಾಗಲಿವೆ. ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಬರಲಿವೆ. ಉನ್ನತ ಹುದ್ದೆ ಪ್ರಾಪ್ತಿಯಾಗಲಿದೆ. ವೇತನ ಹೆಚ್ಚಾಗುವ ಸಾಧ್ಯತೆಗಳಿವೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸಂಬಂಧವು ಉತ್ತಮವಾಗಿರುತ್ತದೆ. ಕೆಲಸದ ಸಂಬಂಧ ವಿದೇಶಕ್ಕೆ ತೆರಳುವ ಅವಕಾಶ ಸಿಗಬಹುದು. ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುತ್ತೀರಿ. 

ಕುಂಭ ರಾಶಿ : ನೇರ ನಡೆ ಆರಂಭಿಸುವ ಗುರು ನಿಮ್ಮ ಅನೇಕ ಇಷ್ಟಾರ್ಥಗಳನ್ನು ಪೂರೈಸಲಿದ್ದಾನೆ. ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಅದೃಷ್ಟದ ಸಹಾಯದಿಂದ, ಎಲ್ಲಾ ಕೆಲಸಗಳು  ಯಶಸ್ವಿಯಾಗುತ್ತದೆ. ಹೊಸ ಉದ್ಯೋಗಾವಕಾಶ ಸಿಗಲಿದೆ. ವಿದೇಶದಿಂದ ಉದ್ಯೋಗಾವಕಾಶಗಳು ಬರಬಹುದು. ವ್ಯಾಪಾರದಲ್ಲಿ ಭಾರೀ ಲಾಭ ಬರಬಹುದು. ಸಂಗಾತಿಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. 

 

(  ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News