ಗುರುವಾರ ಬಾಳೆಗಿಡಕ್ಕೆ ಈ ರೀತಿ ಪೂಜೆ ಮಾಡಿ: ಅಪಾರ ಧನಲಾಭ ನಿಮ್ಮದಾಗುತ್ತದೆ..!

ಶಾಸ್ತ್ರೀಯ ನಂಬಿಕೆಗಳ ಪ್ರಕಾರ ಯಾವುದೇ ತಿಂಗಳ ಗುರುವಾರ ಗೋಪಿ ಶ್ರೀಗಂಧದ 9 ಗಟ್ಟಿಗಳನ್ನು ತೆಗೆದುಕೊಂಡು ಬಾಳೆ ಮರದಲ್ಲಿ ನೇತುಹಾಕಬೇಕು.

Written by - Puttaraj K Alur | Last Updated : Jan 5, 2022, 07:40 PM IST
  • ಗೋಪಿ ಶ್ರೀಗಂಧದ ಬಳಕೆ ಸಂಪತ್ತು ಮತ್ತು ಸಮೃದ್ಧಿಗಾಗಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ
  • ಗುರುವಾರ ಗೋಪಿ ಶ್ರೀಗಂಧದ 9 ಗಟ್ಟಿಗಳನ್ನು ತೆಗೆದುಕೊಂಡು ಬಾಳೆ ಮರದಲ್ಲಿ ನೇತುಹಾಕಬೇಕು
  • ಗೋಪಿ ಶ್ರೀಗಂಧದ ಈ ಪರಿಹಾರವನ್ನು ಮಾಡುವ ದೇಹ ಮತ್ತು ಮನಸ್ಸು ಶುದ್ಧವಾಗಿರಬೇಕು
ಗುರುವಾರ ಬಾಳೆಗಿಡಕ್ಕೆ ಈ ರೀತಿ ಪೂಜೆ ಮಾಡಿ: ಅಪಾರ ಧನಲಾಭ ನಿಮ್ಮದಾಗುತ್ತದೆ..!  title=
ಬಾಳೆಗಿಡಕ್ಕೆ ಈ ರೀತಿ ಪೂಜಿಸಿದರೆ ಧನಲಾಭ

ನವದೆಹಲಿ: ಪೂಜೆಯ ವೇಳೆ ಹಲವು ರೀತಿಯ ಪೂಜಾ ಸಾಮಗ್ರಿಗಳನ್ನು ಬಳಸುತ್ತಾರೆ. ಪೂಜೆಯಲ್ಲಿ ಕರ್ಪೂರ, ಕುಂಕುಮ, ದಾರ, ಶ್ರೀಗಂಧ ಮತ್ತು ಧೂಪದ್ರವ್ಯಗಳನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದಲ್ಲದೇ ವಸ್ತುಗಳನ್ನು ಹಣ ಗಳಿಕೆಗೂ ಬಳಸುತ್ತಾರೆ. ಗೋಪಿ ಶ್ರೀಗಂಧ ಬಳಕೆಯನ್ನು ಸಂಪತ್ತು ಮತ್ತು ಸಮೃದ್ಧಿಗಾಗಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಗೋಪಿ ಶ್ರೀಗಂಧ(Gopi Chandan Benefits)ವನ್ನು ಹಣದ ಲಾಭಕ್ಕಾಗಿ ಹೇಗೆ ಬಳಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿರಿ.  

ಶಾಸ್ತ್ರೀಯ ನಂಬಿಕೆಗಳ ಪ್ರಕಾರ ಯಾವುದೇ ತಿಂಗಳ ಗುರುವಾರ(Thursday Remedies) ಗೋಪಿ ಶ್ರೀಗಂಧದ 9 ಗಟ್ಟಿಗಳನ್ನು ತೆಗೆದುಕೊಂಡು ಬಾಳೆ ಮರದಲ್ಲಿ ನೇತುಹಾಕಿ(Banana Tree Remedy). ಈ ಗಟ್ಟಿಗಳನ್ನು ಹಳದಿ ದಾರದಿಂದ ಕಟ್ಟುವುದು ಇನ್ನೂ ಉತ್ತಮ. ಗುರು-ಪುಷ್ಯ ನಕ್ಷತ್ರದ ಶುಭ ಸಂಯೋಗದಲ್ಲಿ ಇದನ್ನು ಮಾಡುವುದರಿಂದ ಹೆಚ್ಚಿನ ಲಾಭಗಳು ಸಿಗುತ್ತವೆ. ಗೋಪಿ ಶ್ರೀಗಂಧದ ಈ ಪರಿಹಾರವು ಯಾರ ಬಳಿಯೋ ಸಿಕ್ಕಿಹಾಕಿಕೊಂಡಿರುವ ನಿಮ್ಮ ಹಣ ಮರಳಿ ಪಡೆಯಲು ಸಹಕಾರಿಯಾಗಿದೆ. ಇದಲ್ಲದೆ ಈ ಪರಿಹಾರವು ಹಣಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಿಗೂ ತುಂಬಾ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ವರದ ಚತುರ್ಥಿ 2022: ಇಲ್ಲಿವೆ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಗಣೇಶ ಮಂತ್ರಗಳು

ಅನೇಕ ಬಾರಿ ಎಲ್ಲಾ ಪ್ರಯತ್ನಗಳ ನಂತರವೂ ಹಣದ ಸಮಸ್ಯೆ(Thursday Remedy For Wealth)ಗೆ ಶೀಘ್ರವೇ ಪರಿಹಾರ ದೊರಕುವುದಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಗೋಪಿ ಶ್ರೀಗಂಧಕ್ಕೆ ಸಂಬಂಧಿಸಿದ ಈ ಪರಿಹಾರವು ನಿಮಗೆ ಸಹಾಯ ಮಾಡಲಿದೆ. ಇದರೊಂದಿಗೆ ಸಾಲದ ಹೊರೆಯೂ ಹಗುರವಾಗುತ್ತದೆ. 

ನಂಬಿಕೆಯ ಪ್ರಕಾರ ಗೋಪಿ ಶ್ರೀಗಂಧದ ಈ ಪರಿಹಾರವನ್ನು ಮಾಡುವ ದೇಹ ಮತ್ತು ಮನಸ್ಸು ಶುದ್ಧವಾಗಿರಬೇಕು. ಅಲ್ಲದೆ ಬೆಳಿಗ್ಗೆ ಈ ಪರಿಹಾರವನ್ನು ಮಾಡುವುದು ಒಳ್ಳೆಯದು. ಈ ಪರಿಹಾರವನ್ನು ಮಾಡುವಾಗ ಮನಸ್ಸಿನಲ್ಲಿ ಆಸೆ ಮತ್ತು ಬಯಕೆ ಇರಬೇಕು. ಆಗ ಮಾತ್ರ ಇದರ ಲಾಭ ಸಿಗುತ್ತದೆ.

ಗೋಪಿ ಶ್ರೀಗಂಧವು ದ್ವಾರಕೆಯ ಗೋಪಿ ಕೊಳದ ಮಣ್ಣು. ಇದು ವೈಷ್ಣವ ಸಮುದಾಯದ ಜನರಿಗೆ ತುಂಬಾ ಇಷ್ಟವಾಗಿದೆ. ಏಕೆಂದರೆ ಅದು ಪವಿತ್ರವಾಗಿದೆ. ಸ್ಕಂದ ಪುರಾಣದ ಪ್ರಕಾರ, ಗೋಪಿಕೆಯರ ಭಕ್ತಿಗೆ ಮೆಚ್ಚಿದ ಶ್ರೀ ಕೃಷ್ಣನು ದ್ವಾರಕಾದಲ್ಲಿ ಗೋಪಿ ತಾಲಬ್ ಅನ್ನು ನಿರ್ಮಿಸಿದನು. ಈ ಕೊಳದಲ್ಲಿ ಸ್ನಾನ ಮಾಡುವುದರಿಂದ ದೇಹದ ಕಾಂತಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಗೋಪಿ ಶ್ರೀಗಂಧ(Gopi Chandan)ದ ತಿಲಕವನ್ನು ಹಣೆಯ ಮೇಲೆ ಹಚ್ಚಲಾಗುತ್ತದೆ. ಇದರಿಂದ ಮನಸ್ಸಿನಗೆ ನೆಮ್ಮದಿ, ಜೀವನದಲ್ಲಿ ಸುಖ-ಶಾಂತಿ ನೆಲಸುತ್ತದೆಂಬ ನಂಬಿಕೆ ಇದೆ.

ಇದನ್ನೂ ಓದಿ: ಬುಧ ದೋಷದಿಂದ ಉಂಟಾಗುತ್ತೆ ಇಷ್ಟೆಲ್ಲಾ ನಷ್ಟ.. ಇದರಿಂದ ಮುಕ್ತರಾಗಲು ಹೀಗೆ ಮಾಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News