Chandal Yog: ಎಚ್ಚರ...! 2023ರಲ್ಲಿ ನಿರ್ಮಾಣಗೊಳ್ಳುತ್ತಿದೆ ಮಹಾ ಭಯಂಕರ ಗುರು ಚಾಂಡಾಲ ಯೋಗ

Chandal Yog: ಜೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ಅಶುಭ ಯೋಗ ಎಂದೇ ಭಾವಿಸಲಾಗುವ ಗುರು ಚಾಂಡಾಲ ಯೋಗ ಮುಂದಿನ ವರ್ಷ ಅಂದರೆ 2023ರಲ್ಲಿ ರಚನೆಯಾಗುತ್ತಿದೆ. ಈ ಯೋಗ ನಮ್ಮ ಜೀವನ ಸೇರಿದಂತೆ ದೇಶ ಹಾಗೂ ಇಡೀ ವಿಶ್ವದ ಮೇಲೆಯೇ ಭಾರಿ ಪ್ರಭಾವ ಬೀರುವ ಸಾಧ್ಯತೆ ಇದೆ.  

Written by - Nitin Tabib | Last Updated : Dec 9, 2022, 06:47 PM IST
  • ಇದರ ಪರಿಣಾಮ ಜಾಗತಿಕ ಮಟ್ಟದಲ್ಲಿಯೂ ನೋಡಬಹುದು.
  • ದೇಶ, ಜಗತ್ತಿನ ಕುರಿತು ಹೇಳುವುದಾದರೆ ಹಲವೆಡೆ ಸರ್ಜಕಾರಗಳು ಜನರ ವಿರೋಧ ಎದುರಿಸಬೇಕಾಗಬಹುದು.
  • ಇದಲ್ಲದೆ, ಅನೇಕ ದೇಶಗಳಲ್ಲಿ ಅಂತರ್ಯುದ್ಧವೂ ಸಂಭವಿಸಬಹುದು.
Chandal Yog: ಎಚ್ಚರ...! 2023ರಲ್ಲಿ ನಿರ್ಮಾಣಗೊಳ್ಳುತ್ತಿದೆ ಮಹಾ ಭಯಂಕರ ಗುರು ಚಾಂಡಾಲ ಯೋಗ title=
Guru Chandal Yog

Guru Chandal 2023 Effect: ಜ್ಯೋತಿಷ್ಯ ಶಾಸ್ತ್ರದಲ್ಲಿ  ಅನೇಕ ಅಶುಭ ಯೋಗಗಳ ಕುರಿತು ಉಲ್ಲೇಖಿಸಲಾಗಿದೆ. ಈ ಯೋಗಗಳಲ್ಲಿ ಗುರು ಚಂಡಾಲ್ ಯೋಗ ಕೂಡ ಒಂದು. ಈ ಅಶುಭ ಯೋಗ 2023 ರಲ್ಲಿ ನಿರ್ಮಾಣಗೊಳ್ಳುತ್ತಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮುಂಬರುವ ಹೊಸ ವರ್ಷದಂದು, 12 ತಿಂಗಳುಗಳಲ್ಲಿ 6 ತಿಂಗಳು, ದೇವ ಗುರು ಬೃಹಸ್ಪತಿ ಮತ್ತು ರಾಹು ಮೇಷ ರಾಶಿಯಲ್ಲಿ ವಿರಾಜಮಾನನಾಗಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹೊಸವರ್ಷದಲ್ಲಿ ಗುರು ಚಂಡಾಲ ಯೋಗ ನಿರ್ಮಾಣಗೊಳ್ಳಲಿದೆ.

ಇದನ್ನು ಜಾತಕದ ಅತ್ಯಂತ ವಿಸಂಗತಿ ಎಂದು ಭಾವಿಸಲಾಗುತ್ತದೆ. ಇದರಿಂದ ಜೀವನದಲ್ಲಿ ಮುಂದೆ ಸಾಗಲು ತೊಂದರೆ ಉಂಟಾಗುತ್ತದೆ. ಜಾತಕದಲ್ಲಿ ಯಾವುದೇ ರಾಶಿ ಅಥವಾ ಮನೆಯಲ್ಲಿ ಗುರು ಮತ್ತು ರಾಹು ಒಟ್ಟಿಗೆ ಇದ್ದಾಗ, ಜಾತಕದಲ್ಲಿ ಚಂಡಾಲ ಯೋಗವು ರೂಪುಗೊಳ್ಳುತ್ತದೆ. ಇದನ್ನು ಚಂಡಾಲ್ ದೋಷ (ಗುರು ಚಂಡಾಲ್ ದೋಷ) ಎಂದೂ ಕರೆಯುತ್ತಾರೆ. ಈ ಯೋಗವು ಯಾವಾಗ ರೂಪುಗೊಳ್ಳುತ್ತದೆ ಮತ್ತು ಇದನ್ನು ತಪ್ಪಿಸಲು ಜ್ಯೋತಿಷ್ಯ ಪರಿಹಾರವೇನು ತಿಳಿದುಕೊಳ್ಳೋಣ ಬನ್ನಿ.

ಗುರು ಚಾಂಡಾಲ ಯೋಗ ಯಾವಾಗ ರೂಪಗೊಳ್ಳುತ್ತದೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರುವು ತನ್ನ ರಾಶಿಯನ್ನು ಪರಿವರ್ತಿಸಿ ಮೇಷ ರಾಶಿಯನ್ನು ಪ್ರವೇಶಿಸಿದ ಕೂಡಲೇ ಈ ಯೋಗವು ರೂಪುಗೊಳ್ಳುತ್ತದೆ. ರಾಹು ಈಗಾಗಲೇ ಮೇಷ ರಾಶಿಯಲ್ಲಿ ಬಂದು ಕುಳಿತಿರುವುದರಿಂದ, ಇಂತಹ ಪರಿಸ್ಥಿತಿಯಲ್ಲಿ, ಮೇಷ ರಾಶಿಯಲ್ಲಿ ಗುರುವಿನ ಪ್ರವೇಶದಿಂದಾಗಿ, ಈ ಎರಡು ಗ್ರಹಗಳು ಅಂದರೆ ರಾಹು ಮತ್ತು ಗುರುಗಳ ಸಂಯೋಜನೆ ನೆರವೇರಲಿದೆ. ಇದರಿಂದಾಗಿ ಈ ಯೋಗವು ಸೃಷ್ಟಿಯಾಗಲಿದೆ. ಈ ಯೋಗವು ಮುಂಬರುವ ವರ್ಷದಲ್ಲಿ ಅಂದರೆ 2023 ರಲ್ಲಿ ಏಪ್ರಿಲ್ 23 ರಂದು ರೂಪಗೊಳ್ಳುತ್ತಿದೆ.

ಹೀಗಿರುವಾಗ ತನ್ನ ಜನ್ಮ ಸಂಖ್ಯೆಯಲ್ಲಿ ಯಾವುದೇ ಅರ್ಥದಲ್ಲಿ ಚಂಡಾಲ್ ದೋಷ ಹೊಂದಿರುವ ವ್ಯಕ್ತಿ, ಮುಂದಿನ 6 ತಿಂಗಳುಗಳವರೆಗೆ ತುಂಬಾ ಎಚ್ಚರಿಕೆಯಿಂದ ಕಾಲ ಕಳೆಯಬೇಕಾಗುತ್ತದೆ. ಇದರ ಪರಿಣಾಮ ದೇಶದಲ್ಲಷ್ಟೇ ಅಲ್ಲದೆ ಜಗತ್ತಿನಲ್ಲೂ ನೀವು ನೋಡಬಹುದು. 23 ಏಪ್ರಿಲ್ 2023 ರಿಂದ 30 ಅಕ್ಟೋಬರ್ 2023 ರವರೆಗೆ, ಷೇರುಪೇಟೆಯ ಭವಿಷ್ಯದಲ್ಲಿ ಸಾಕಷ್ಟು ಏರುಪೇರುಗಳಾಗುವ ಸಾಧ್ಯತೆ ಇದೆ. ಹೀಗಿರುವಾಗ ನೀವು ಷೇರು ಮಾರುಕಟ್ಟೆಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುತ್ತಿದ್ದರೆ, ಈ ಸಮಯದಲ್ಲಿ ನೀವು ತುಂಬಾ ಜಾಗರೂಕರಾಗಿರಬೇಕು.

ಕಾಲಪುರುಷ ಕುಂಡಲಿ ಪ್ರಕಾರ ಚಂಡಾಲ್ ಯೋಗ
ಕಾಲಪುರುಷ ಕುಂಡಲಿ ಪ್ರಕಾರ ಈ ಬಾರಿ ಆರೋಹಣ ಗೃಹದಲ್ಲಿ ಚಂಡಾಲ ಯೋಗ ನಿರ್ಮಾಣವಾಗುತ್ತಿದ್ದು, ಇದರ ಪರಿಣಾಮ ಜಾಗತಿಕ ಮಟ್ಟದಲ್ಲಿಯೂ ನೋಡಬಹುದು. ಇದಲ್ಲದೇ ದೇಶ, ಜಗತ್ತಿನ ಕುರಿತು ಹೇಳುವುದಾದರೆ ಹಲವೆಡೆ ಸರಕಾರಗಳು ಜನರ ವಿರೋಧ ಎದುರಿಸಬೇಕಾಗಬಹುದು. ಇದಲ್ಲದೆ, ಅನೇಕ ದೇಶಗಳಲ್ಲಿ ಅಂತರ್ಯುದ್ಧವೂ ಸಂಭವಿಸಬಹುದು. ಭಾರತದಲ್ಲಿ ಸರ್ಕಾರಗಳು ವಿರೋಧವನ್ನೂ ಎದುರಿಸಬೇಕಾಗಬಹುದು. ಇದರೊಂದಿಗೆ, 2023 ಯುರೋಪ್ ದೇಶಗಳಿಗೆ ಮಂಗಳಕರವಾಗಿರುವುದಿಲ್ಲ ಎನ್ನಲಾಗಿದೆ. ಜಾಗತಿಕ ಮಟ್ಟದಲ್ಲಿ ಹಣದುಬ್ಬರ ಹೆಚ್ಚಾಗಬಹುದು. ಇದಲ್ಲದೇ ಹಲವೆಡೆ ಭಯೋತ್ಪಾದಕ ಘಟನೆಗಳೂ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ-December 2022ರ ಕೊನೆಯ ವಾರ ಈ ರಾಶಿಗಳ ಅದೃಷ್ಟವನ್ನೇ ಬದಲಾಯಿಸಲಿದೆ, ಎಲ್ಲ ಕಡೆಗಳಿಂದ ಭಾರಿ ಧನಾಗಮನ

ಕೆಟ್ಟ ಪ್ರಭಾವದಿಂದ ಪಾರಾಗಲು ಏನು ಮಾಡಬೇಕು?
ಈ ಯೋಗವನ್ನು ಶಮನಗೊಳಿಸಲು ಚಂಡಾಲ ದೋಷ ನಿವಾರಣೆಯ ಪೂಜೆಯನ್ನು ನೆರವೇರಿಸಬೇಕು. ಈ ಪೂಜೆಯನ್ನು ಮಾಡುವುದರಿಂದ ಗುರು ಚಂಡಾಲ ಯೋಗದ ಪರಿಣಾಮಗಳನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಬಹುದು. ಗುರು ಚಂಡಾಲ ಯೋಗ ಶಾಂತಿ ಪೂಜೆಯನ್ನು ಅರ್ಹ ಬ್ರಾಹ್ಮಣರಿಂದ ಮಾಡಿಸಿ. ಇದಲ್ಲದೆ, ನಿಮ್ಮ ಜಾತಕದಲ್ಲಿ ಗುರುವಿನ ಸ್ಥಾನವು ಶುಭವಾಗಿದ್ದರೆ, ಬ್ರಾಹ್ಮಣರಿಗೆ ದಾನ ಮಾಡಿ. ಇಂತಹ ಪರಿಸ್ಥಿತಿಯಲ್ಲಿ ಗುರುವಾರ ಬಾಳೆಗಿಡವನ್ನು ನೆಟ್ಟು ಪೂಜಿಸಬೇಕು. ಇದಲ್ಲದೆ, ನಿಮ್ಮ ಜಾತಕದಲ್ಲಿ ಚಂಡಾಲ ಯೋಗವು ರೂಪುಗೊಳ್ಳುತ್ತಿದ್ದರೆ, ನೀವು ಗುರುವಾರದಂದು ಭಗವಾನ್ ವಿಷ್ಣುವನ್ನು ಪೂಜಿಸಬೇಕು ಮತ್ತು ಪೂಜೆಯ ಸಮಯದಲ್ಲಿ ಹಳದಿ ಚಂದನವನ್ನು ಅವನಿಗೆ ಅರ್ಪಿಸಬೇಕು.

ಇದನ್ನೂ ಓದಿ-Planet Transit: ನಾವು ಸೇವಿಸುವ ಆಹಾರದಿಂದಲೂ ಕೂಡ ನಮ್ಮ ಭಾಗ್ಯ ಬದಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯಾ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News