Guru Margi 2022: ನ.24ರಿಂದ ಈ 5 ರಾಶಿಯ ಜನರಿಗೆ ಅದೃಷ್ಟದ ಜೊತೆಗೆ ಅಪಾರ ಸಂಪತ್ತು ಸಿಗಲಿದೆ!

ದೇವಗುರು ಗುರುವು ಪ್ರಸ್ತುತ ತನ್ನದೇ ಆದ ಮೀನ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದಾನೆ. ನ.24ರಿಂದ ಗುರುಗ್ರಹದ ನೇರ ಚಲನೆಯು ಕೆಲವು ರಾಶಿಗಳಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.

Written by - Puttaraj K Alur | Last Updated : Nov 20, 2022, 08:40 AM IST
  • ಮೇಷ ರಾಶಿಯವರ ಜೀವನದಲ್ಲಿ ದೊಡ್ಡಮಟ್ಟದ ಪ್ರಗತಿಯಾಗಲಿದೆ
  • ವೃಶ್ಚಿಕ ರಾಶಿಯವರಿಗೆ ಉದ್ಯೋಗ-ವ್ಯವಹಾರದಲ್ಲಿ ಲಾಭವಾಗಲಿದೆ
  • ಕನ್ಯಾ ರಾಶಿಯವರಿಗೆ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ
Guru Margi 2022: ನ.24ರಿಂದ ಈ 5 ರಾಶಿಯ ಜನರಿಗೆ ಅದೃಷ್ಟದ ಜೊತೆಗೆ ಅಪಾರ ಸಂಪತ್ತು ಸಿಗಲಿದೆ! title=
ಗುರು ಮಾರ್ಗಿ 2022

ನವದೆಹಲಿ: ಜ್ಯೋತಿಷ್ಯದ ಪ್ರಕಾರ ಗುರು ಗ್ರಹವು ಆಶೀರ್ವದಿಸಿದರೆ ವ್ಯಕ್ತಿಯ ಅದೃಷ್ಟವು ತೆರೆದುಕೊಳ್ಳುತ್ತದೆ. ಇದೇ ನವೆಂಬರ್ 24ರಿಂದ ಗುರುವಿನ ರಾಶಿ ಬದಲಾವಣೆಯಿಂದ ಕೆಲವು ರಾಶಿಗಳ ಅದೃಷ್ಟವೇ ಬದಲಾಗಲಿದೆ. ಈ ಜನರು ಪ್ರತಿಯೊಂದು ಕೆಲಸದಲ್ಲಿ ಅದೃಷ್ಟದ ಬೆಂಬಲದ ಜೊತೆಗೆ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ. ಅವಿವಾಹಿತರು ವಿವಾಹವಾಗಲು ಬಲವಾದ ಅವಕಾಶಗಳಿವೆ. ದೇವಗುರು ಬೃಹಸ್ಪತಿಯ ನೇರ ಸಂಚಾರವು ಯಾವ ರಾಶಿಯವರಿಗೆ ಮಂಗಳಕರ ಎಂದು ತಿಳಿಯಿರಿ.

ಮೇಷ ರಾಶಿ: ಮೇಷ ರಾಶಿಯವರಿಗೆ ಮೀನ ರಾಶಿಯಲ್ಲಿ ಗುರು ಇರುವುದರಿಂದ ಹೆಚ್ಚಿನ ಲಾಭವಾಗಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಬಡ್ತಿ ದೊರೆಯಲಿದೆ. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ವೈವಾಹಿಕ ಜೀವನ ಉತ್ತಮವಾಗಿರಲಿದೆ.

ಇದನ್ನೂ ಓದಿ: Saffron Remedy: ಜೀವನದಲ್ಲಿ ಯಶಸ್ಸು ಸಂಪಾದಿಸಲು ಕೇಸರಿಯ ಈ ಉಪಾಯಗಳನ್ನು ಅನುಸರಿಸಿ

ವೃಷಭ ರಾಶಿ: ಗುರುವಿನ ನೇರ ಸಂಚಾರವು ವೃಷಭ ರಾಶಿಯವರಿಗೆ ಅಪಾರ ಸಂಪತ್ತನ್ನು ತರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ನಿರೀಕ್ಷಿಸುತ್ತಿದ್ದ ಅವಕಾಶವನ್ನು ಪಡೆಯುತ್ತೀರಿ. ಶೀಘ್ರವೇ ಮದುವೆ ಆಗಬಹುದು. ಹೂಡಿಕೆ ಮಾಡಲು ಇದು ಉತ್ತಮ ಸಮಯ.

ವೃಶ್ಚಿಕ ರಾಶಿ: ದೇವಗುರು ಗುರುವಿನ ಪಥವು ವೃಶ್ಚಿಕ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಉದ್ಯೋಗ-ವ್ಯವಹಾರದಲ್ಲಿ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹವಾಗುವ ಅವಕಾಶ ದೊರೆಯಲಿದೆ.

ಕನ್ಯಾ ರಾಶಿ: ಮೀನ ರಾಶಿಯಲ್ಲಿ ಗುರುವಿನ ಸಂಚಾರವು ಕನ್ಯಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಲಿದೆ. ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯಬಹುದು. 

ಇದನ್ನೂ ಓದಿ: Vastu Tips : ಮನೆಯ ಈ ದಿಕ್ಕಿನಲ್ಲಿ ತಪ್ಪಿಯೂ ಆಂಜನೇಯನ ಫೋಟೋ ಹಾಕಬೇಡಿ!

ಮೀನ ರಾಶಿ: ಗುರುವು ಮೀನ ರಾಶಿಯಲ್ಲಿ ಸಂಚರಿಸುತ್ತಿದ್ದು, ಮೀನ ರಾಶಿಯ ಅಧಿಪತಿಯೂ ಹೌದು. ಹೀಗಾಗಿ ಗುರುಗ್ರಹದ ನೇರ ಚಲನೆಯ ದೊಡ್ಡ ಪರಿಣಾಮವು ಈ ರಾಶಿಯವರ ಮೇಲಾಗಲಿದೆ. ಗುರುಗ್ರಹದ ಚಲನೆಯಲ್ಲಿನ ಬದಲಾವಣೆಯು ಮೀನ ರಾಶಿಯ ಜನರ ಅದೃಷ್ಟವನ್ನು ತೆರೆಯುತ್ತದೆ ಎಂದು ಹೇಳಬಹುದು. ಪ್ರತಿಯೊಂದು ಕೆಲಸದಲ್ಲಿಯೂ ನೀವು ಯಶಸ್ಸು ಕಾಣುವಿರಿ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಮದುವೆ ಶುಭ ಕಾರ್ಯಗಳು ಇರುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News