Hair Care: ಕಾಂತಿಯುತ ಕೂದಲಿಗೆ ವಿಟಮಿನ್ ಸಿ ಇರುವ ಈ ಪದಾರ್ಥಗಳನ್ನು ಬಳಸಿ

Hair Care: ಉತ್ತಮವಾದ ಆರೋಗ್ಯಕ್ಕೆ ವಿಟಮಿನ್ ಸಿ ತುಂಬಾ ಮುಖ್ಯವಾದ ಪೋಷಕಾಂಶವಾಗಿದೆ. ವಿಟಮಿನ್ ಸಿ ವಿಶೇಷವಾಗಿ ನಮ್ಮ ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ. ಸ್ಟ್ರಾಂಗ್ ಆದ, ಕಾಂತಿಯುತವಾದ ಕೂದಲಿಗಾಗಿ ವಿಟಮಿನ್ ಸಿ ಇರುವ ಆಹಾರಗಳು ತುಂಬಾ ಪ್ರಯೋಜನಕಾರಿ ಆಗಿವೆ. ಅಂತಹ ಆಹಾರಗಳ ಬಗ್ಗೆ ತಿಳಿಯೋಣ...

Written by - Yashaswini V | Last Updated : Oct 17, 2022, 02:55 PM IST
  • ಉತ್ತಮ ಆರೋಗ್ಯಕ್ಕೆ ಆಮ್ಲಾ ಅಂದರೆ ನೆಲ್ಲಿಕಾಯಿ ತುಂಬಾ ಪ್ರಯೋಜನಕಾರಿ
  • ಇದನ್ನು ಆಯುರ್ವೇದದ ನಿಧಿ ಎಂದು ಪರಿಗಣಿಸಲಾಗುತ್ತದೆ.
  • ಇದರಲ್ಲಿರುವ ಔಷಧೀಯ ಗುಣಗಳು ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
Hair Care: ಕಾಂತಿಯುತ ಕೂದಲಿಗೆ ವಿಟಮಿನ್ ಸಿ ಇರುವ ಈ ಪದಾರ್ಥಗಳನ್ನು ಬಳಸಿ title=
Hair Care Tips

Hair Care:  ಉದ್ದವಾದ, ಕಪ್ಪಾದ, ಬಲವಾದ ಮತ್ತು ಹೊಳೆಯುವ ಕೂದಲನ್ನು ಹೊಂದಲು ಬಯಸದವರು ನಮ್ಮಲ್ಲಿ ಯಾರೂ ಇರುವುದಿಲ್ಲ, ಆದರೆ ಪ್ರಸ್ತುತ ಬಿಡುವಿಲ್ಲದ ಜೀವನಶೈಲಿಯಿಂದಾಗಿ, ಕೂದಲಿನ ಆರೈಕೆಗಾಗಿ ಸಮಯ ನೀಡಲು ಯಾರಿಗೂ ಕೂಡ ಸಮಯವೇ ಇರುವುದಿಲ್ಲ.  ಅನಾರೋಗ್ಯಕರ ಆಹಾರ ಪದ್ಧತಿಯೂ ಇದರ ಹಿಂದೆ ಬಹುಮಟ್ಟಿಗೆ ಕಾರಣವಾಗಿದೆ. ಉತ್ತಮ ಕೂದಲಿನ ಆರೋಗ್ಯಕ್ಕೆ ವಿಟಮಿನ್ ಸಿ ಬಹಳ ಮುಖ್ಯವಾದ ಪೋಷಕಾಂಶವಾಗಿದೆ, ಆದ್ದರಿಂದ, ನೀವು ವಿಟಮಿನ್ ಸಿ ಯುಕ್ತ ಆಹಾರ ಪದಾರ್ಥಗಳ ಸಹಾಯದಿಂದ ಹೇರ್ ಮಾಸ್ಕ್ಗಳನ್ನು ತಯಾರಿಸಿ ಬಳಸುವುದರಿಂದ  ಹೊಳೆಯುವ ಮತ್ತು ಆರೋಗ್ಯಕರ ಕೂದಲನ್ನು ಪಡೆಯಬಹುದಾಗಿದೆ.

1. ಕಿತ್ತಳೆ ಸಿಪ್ಪೆ:
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬ ಸತ್ಯ ನಮಗೆಲ್ಲರಿಗೂ ತಿಳಿದಿದೆ. ಇದರಿಂದ ತಯಾರಿಸಿದ ಹೇರ್ ಮಾಸ್ಕ್ ಅನ್ನು ತಲೆಗೆ ಹಚ್ಚಿಕೊಂಡರೆ ಸ್ಟ್ರಾಂಗ್ ಆದ, ಕಾಂತಿಯುತ ಕೂದಲು ನಮ್ಮದಾಗುತ್ತದೆ.  ಇದಕ್ಕಾಗಿ ಮೊದಲು ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ತೆಗೆದು ನೀರಿನಲ್ಲಿ ಕುದಿಸಿ. ಇದರ ನಂತರ, ಈ ನೀರನ್ನು ಉಗುರುಬೆಚ್ಚಗಾಗಿಸಿ ನಂತರ ಕೂದಲನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಹೊಳೆಯಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ- ಮೊಡವೆಗಳ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ

2. ಆಮ್ಲಾ ಜ್ಯೂಸ್ :
ಉತ್ತಮ ಆರೋಗ್ಯಕ್ಕೆ ಆಮ್ಲಾ ಅಂದರೆ ನೆಲ್ಲಿಕಾಯಿ ತುಂಬಾ ಪ್ರಯೋಜನಕಾರಿ ವಸ್ತುವಾಗಿದೆ, ಇದನ್ನು ಆಯುರ್ವೇದದ ನಿಧಿ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿರುವ ಔಷಧೀಯ ಗುಣಗಳು ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವಿಟಮಿನ್ ಸಿ ಸಮೃದ್ಧವಾಗಿರುವ ಆಮ್ಲಾ ಜ್ಯೂಸ್ ಅನ್ನು ಕೂದಲಿಗೆ ಹಚ್ಚಿದರೆ, ಅದನ್ನು ಬೇರುಗಳಿಂದ ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ತಲೆಹೊಟ್ಟಿನ ಸಮಸ್ಯೆಯೂ ದೂರವಾಗುತ್ತಾರೆ.

ಇದನ್ನೂ ಓದಿ- Vitamin Deficiency: ತೀವ್ರ ಹಲ್ಲು ನೋವು, ಬಾಯಿಯ ದುರ್ವಾಸನೆಗೆ ಈ ಮೂರು ಜೀವಸತ್ವಗಳ ಕೊರತೆಯೇ ಕಾರಣ!

3. ನಿಂಬೆ ರಸ:
ನಾವು ಸಲಾಡ್, ಉಪ್ಪಿನಕಾಯಿ, ನಿಂಬೆ ಪಾನಕ ಮಾಡಲು ನಿಂಬೆಯನ್ನು ಬಳಸುತ್ತೇವೆ, ಆದರೆ ಇದು ನಮ್ಮ ಕೂದಲಿಗೆ ಎಷ್ಟು ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಇದರ ರಸವನ್ನು ಕೂದಲಿಗೆ ಹಚ್ಚಿದರೆ ಕೂದಲು ರೇಷ್ಮೆಯಂತಹ ಮತ್ತು ಮೃದುವಾಗಲು ಸಹಾಯ ಮಾಡುತ್ತದೆ. ಇದನ್ನು ಬಳಸಲು, ನಿಂಬೆ ರಸ ಮತ್ತು ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ ಮತ್ತು ಕೂದಲಿಗೆ ಅನ್ವಯಿಸಿ. ಅರ್ಧ ಗಂಟೆ ಬಿಟ್ಟು ಮೈಲ್ಡ್ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News