ಗೃಹಿಣಿಯರೇ ಕಾಂತಿಯುತ ತ್ವಚೆ ನಿಮ್ಮದಾಗಲು ಈ ಟಿಪ್ಸ್‌ ಫಾಲೋ ಮಾಡಿ...ಬದಲಾವಣೆ ನೋಡಿ

Home Remedies for Glowing Skin: ಸಾಮಾನ್ಯವಾಗಿ ಮಹಿಳೆಯರಿಗೆ ಮನೆಯಲ್ಲಿ ನೂರಾರು ಕೆಲಸಗಳು. ಅದರಲ್ಲೂ ಜಾಬ್‌ ಮಾಡುವವರಾದರೇ ಇನ್ನೂ ಸೆಣಸಾಟ. ಇದೆಲ್ಲದರ ಮಧ್ಯ ಗೃಹಿಣಿಯರಿಗೆ ತಮ್ಮ ತ್ವಚೆ ಬಗ್ಗೆ ಕಾಳಜಿ ವಹಿಸಿಸಲು ಸಮಯವೇ ಸಿಗುವುದಿಲ್ಲ.   

Written by - Savita M B | Last Updated : Sep 24, 2023, 08:41 AM IST
  • ಗೃಹಿಣಿಯರಿಗೆ ನೂರೆಂಟು ಕೆಲಸಗಳಿರುತ್ತವೆ
  • ಕೆಲಸದ ಮಧ್ಯವೂ ನಿಮ್ಮ ತ್ವಚೆಯ ಆರೈಕೆ ತುಂಬಾ ಮುಖ್ಯ
  • ಗೃಹಿಣಿಯರಿಗೆ ತ್ವಚೆ ಆರೈಕೆಯ ಸಲಹೆಗಳು
ಗೃಹಿಣಿಯರೇ ಕಾಂತಿಯುತ ತ್ವಚೆ ನಿಮ್ಮದಾಗಲು ಈ ಟಿಪ್ಸ್‌ ಫಾಲೋ ಮಾಡಿ...ಬದಲಾವಣೆ ನೋಡಿ  title=

Beauty Tips: ಕೆಲಸಗಳು ಸಾಕಸಾಕಷ್ಟಿರುತ್ತವೆ ಆದರೆ ಅವುಗಳ ಮಧ್ಯವೂ ನೀವು ನಿಮ್ಮ ತ್ವಚೆಯ ಆರೈಕೆಯನ್ನು ಮಾಡುವುದು ತುಂಬಾ ಮುಖ್ಯ. ಹೀಗಾಗಿ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ತಣ್ಣಿರಿನಿಂದ ಮುಖ ತೊಳೆದುಕೊಂಡು ಮುಖದಲ್ಲಿನ ಕೊಳಕು ಅಂಶವನ್ನು ತೊಲಗಿಸಿ. ಜೊತೆಗೆ ಸುಲಭವಾಗಿ ನಿಮ್ಮ ಮನೆಯಲ್ಲೇ ದೊರಕುವ ಈ ವಸ್ತುಗಳನ್ನು ಬಳಸಿ ಹೊಳೆಯುವ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ. 

ಹಾಲಿನ ಮಸಾಜ್‌
ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಮುಖವನ್ನು ತೊಳೆದು ತಣ್ಣಗಿನ ಹಾಕಿನಿಂದ ಮುಖಕ್ಕೆ ಮಸಾಜ್‌ ಮಾಡಿ. ಸ್ವಲ್ಪ ಹೊತ್ತು ಹಾಗೇ ಬಿಟ್ಟು ನಂತರ ತಣ್ಣಿರಿನಿಂದ ತೊಳೆಯಿರಿ. ಇದರಿಂದ ನಿಮ್ಮ ತ್ವಚೆ ಮೃದು ಮತ್ತು ಹೊಳೆಯುತ್ತದೆ. ಇದಲ್ಲದೇ ಈ ರೀತಿ ಮಾಡುವುದರಿಂದ ನಿಮ್ಮ ಮುಖದಲ್ಲಿನ ಕಪ್ಪು ಕಲೆಗಳನ್ನು ಸಹ ಹೋಗಲಾಡಿಸಬಹುದು. 

ಇದನ್ನೂ ಓದಿ-ಜೀವನದಲ್ಲಿ ಎಂತಹ ಪರಿಸ್ಥಿತಿಯೇ ಎದುರಾಗಲಿ ಈ ಸಂಗತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ!

ಜೇನುತುಪ್ಪದಿಂದ ಮಸಾಜ್‌ 
ನಿಮ್ಮ ದಿನಚರಿಯಲ್ಲಿ ಇದನ್ನೂ ಸೇರಿಸಿಕೊಳ್ಳಿ. ಪ್ರತಿದಿನ ಬೆಳಗ್ಗೆ ಜೇನು ತುಪ್ಪವನ್ನು ಮುಖಕ್ಕೆ ಹಚ್ಚಿ ಅರ್ಧಗಂಟೆಗಳ ಕಾಲ ಮಸಾಜ್‌ ಮಾಡಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ತದನಂತರ ಲಿಂಬೆಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿ ಅದನ್ನು ಒಣಗಲು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಮುಖದಲ್ಲಿನ ಅನಾವಶಯಕ ಕೂದಲುಗಳಿಂದ ಮುಕ್ತಿಸಿಗುತ್ತದೆ. ಅಲ್ಲದೇ ತ್ವಚೆಯೂ ಹೊಳೆಯುತ್ತದೆ. 

ಸ್ಟ್ರಾಬೆರಿ ಹಣ್ಣು
ಸ್ಟ್ರಾಬೆರಿ ಹಣ್ಣಿನಲ್ಲಿ ತ್ವಚೆಗೆ ಅಗತ್ಯವಾದ ವಿಟಮಿನ್‌ ಸಿ ಹೇರಳವಾಗಿದೆ. ಇದು ಚರ್ಮದಲ್ಲಿನ ಸುಕ್ಕು ಮತ್ತು ಕಣ್ಣಿನ ಸುತ್ತಲಿನ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ಸ್ಟ್ರಾಬೆರಿ ಹಣ್ಣು ಸ್ವಲ್ಪ ಹುಳಿಯಾಗಿರುವುದರಿಂದ ಅದನ್ನು ಹಾಗೇ ತಿನ್ನಲು ಕೆಲವರು ಹಿಂಜರಿಯುತ್ತಾರೆ. ಅಂತವರು ಸಲಾಡ್‌, ಜ್ಯೂಸ್‌ ರೂಪದಲ್ಲಿಯೂ ಸೇವಿಸಬಹುದು. 

ನೋಡಿದ್ರಲ್ಲ ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ ನಮ್ಮ ತ್ವಚೆಯ ಸಂದವನ್ನು ಹೆಚ್ಚಿಸಬಹದು ಎನ್ನುವುದನ್ನು. ಆದರೆ ನೀವು ಮುಖಕ್ಕೆ ಯಾವುದೇ ವಸ್ತುವನ್ನು ಬಳಸುವಾಗ ಎಷ್ಷರದಿಂದಿರೀ ಜೊತೆಗೆ ಅದು ನಿಮ್ಮ ಚರ್ಮಕ್ಕೆ ಹೊಂದಿಕೊಳ್ಳುವಂತಿದ್ದರೆ ಮಾತ್ರ ಅನುಸರಿಸಿ. 

ಇದನ್ನೂ ಓದಿ-ಈ ಒಂದು ಎಲೆ ಸಾಕು.. ಕೂದಲು ದಟ್ಟ ಕಪ್ಪು ಬಲವಾಗಿ ಬೆಳೆಯುತ್ತದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News