Lucky Animal: ದೀಪಾವಳಿಯಂದು ಈ ಪ್ರಾಣಿಗಳನ್ನು ಮನೆಗೆ ತಂದರೆ ಅದೃಷ್ಟ ದೇವತೆ ಖಂಡಿತ ಒಲಿದು ಬರುತ್ತಾಳೆ!

ಮನೆಯಲ್ಲಿ ಮೊಲವನ್ನು ಸಾಕುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಸಂಗತಿಗಳು ದೂರವಾಗಿ ಸಕಾರಾತ್ಮಕ ವಿಷಯಗಳು ಮನೆಮಾಡುತ್ತದೆ. ದುಷ್ಟಶಕ್ತಿಯ ಕಣ್ಣುಗಳು ಸಹ ಬೀಳುವುದಿಲ್ಲ. ಮೊಲವನ್ನು ಅದೃಷ್ಟದ ಪ್ರಾಣಿ ಎಂದು ಕರೆಯಲಾಗುತ್ತದೆ.

Written by - Bhavishya Shetty | Last Updated : Oct 21, 2022, 09:53 PM IST
    • ಪ್ರಾಣಿಗಳನ್ನು ಮನೆಗೆ ತಂದು ಸಾಕುವುದರಿಂದ ಅದೃಷ್ಟ ಒಲಿದು ಬರುತ್ತದೆ

    • ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಅನೇಕ ರೀತಿಯಲ್ಲಿ ಪ್ರಗತಿ ಕಾಣುತ್ತದೆ

    • ಮೊಲವನ್ನು ಸಾಕುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ

Lucky Animal: ದೀಪಾವಳಿಯಂದು ಈ ಪ್ರಾಣಿಗಳನ್ನು ಮನೆಗೆ ತಂದರೆ ಅದೃಷ್ಟ ದೇವತೆ ಖಂಡಿತ ಒಲಿದು ಬರುತ್ತಾಳೆ! title=
Diwali

Lucky Animal: ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಈಗಾಗಲೇ ಮನೆ ಮಾಡಿದೆ. ಇನ್ನು ಈ ಹಬ್ಬವನ್ನು ಪ್ರತಿಯೊಬ್ಬ ಹಿಂದೂಗಳು ವಿಜೃಂಭಣೆಯನ್ನು ಆಚರಣೆ ಮಾಡುತ್ತಾರೆ. ಇದರ ಜೊತೆಗೆ ಈ ಸಂದರ್ಭದಲ್ಲಿ ಕೆಲವೊಂದು ಪ್ರಾಣಿಗಳನ್ನು ಮನೆಗೆ ತಂದು ಸಾಕುವುದರಿಂದ ಅದೃಷ್ಟ ಒಲಿದು ಬರುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು ಈ ಬಗ್ಗೆ ಕೆಲವೊಂದು ಉಲ್ಲೇಖಗಳು ತಿಳಿಸುತ್ತವೆ.   

ಇದನ್ನೂ ಓದಿ: Shani Effect: ಶನಿಯ ಪಥ ಬದಲಾವಣೆ: ಈ ರಾಶಿಯವರು ಊಹಿಸಿರದಂತೆ ಸಮಸ್ಯೆ ಎದುರಿಸುತ್ತಾರೆ!!

ಕೆಲವು ಪ್ರಾಣಿಗಳನ್ನು ನಿಮ್ಮ ಮನೆಯಲ್ಲಿ ಸಾಕಿದರೆ ಅನೇಕ ರೀತಿಯಲ್ಲಿ ಪ್ರಗತಿ ಕಾಣುತ್ತದೆ. ಮನೆಯಲ್ಲಿ ಸಂಪತ್ತು, ಸಂತೋಷ ಮತ್ತು ಶಾಂತಿಯಂತಹ ಪ್ರಯೋಜನಗಳು ಕಾಣಿಸಿಕೊಳ್ಳುತ್ತದೆ.

ಮನೆಯಲ್ಲಿ ಮೊಲವನ್ನು ಸಾಕುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಸಂಗತಿಗಳು ದೂರವಾಗಿ ಸಕಾರಾತ್ಮಕ ವಿಷಯಗಳು ಮನೆಮಾಡುತ್ತದೆ. ದುಷ್ಟಶಕ್ತಿಯ ಕಣ್ಣುಗಳು ಸಹ ಬೀಳುವುದಿಲ್ಲ. ಮೊಲವನ್ನು ಅದೃಷ್ಟದ ಪ್ರಾಣಿ ಎಂದು ಕರೆಯಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಸಹ ನಾಯಿಯನ್ನು ಸಾಕುತ್ತಾರೆ. ಇದೊಂತರ ಫ್ಯಾಷನ್ ಆಗಿದ್ದರೂ ಧರ್ಮಗ್ರಂಥಗಳಲ್ಲಿ ಇದನ್ನು ಅದೃಷ್ಠ ಪರಿಗಣಿಸಲಾಗಿದೆ. ಇನ್ನು ದೀಪಾವಳಿಯ ಸಂದರ್ಭಲ್ಲಿ ನಾಯಿಗಳಿಗೆ ಆಹಾರ ದಾನ ಮಾಡಿ. ಒಂದು ವೇಳೆ ಮನೆಯಲ್ಲಿ ಇಲ್ಲದಿದ್ದರೆ, ಬೀದಿಯಲ್ಲಿರುವ ನಾಯಿಗಳಿಗೂ ಆಹಾರವನ್ನು ನೀಡಬಹುದು. ಹೀಗೆ ಮಾಡಿದರೆ ಅದೃಷ್ಟ, ಸಂಪತ್ತು, ನೆಮ್ಮದಿ ಲಭಿಸುತ್ತದೆ.

ಆಮೆಯನ್ನು ಹಲವಾರು ಮಂದಿ ಆರ್ಥಿಕ ಬಲ ಎಂದು ನಂಬುತ್ತಾರೆ. ಹೀಗಾಗಿ ದೀಪಾವಳಿಯ ಶುಭ ಸಂಭ್ರಮದಂದು ಆಮೆಯನ್ನು ಮನೆಗೆ ತಂದು ಸಾಕಿದರೆ, ಒಳಿತಾಗುತ್ತದೆ ಎಂದು ಹೇಳುತ್ತಾರೆ. ಧರ್ಮಗ್ರಂಥಗಳಲ್ಲಿ ಆಮೆಯನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗಿದೆ.

ಪ್ರಾಣಿಗಳ ಹೊರತಾಗಿ ಇನ್ನೊಂದು ಪಕ್ಷಿ ಪಾರಿವಾಳ. ಮನೆಯ ಮೇಲ್ಭಾಗದಲ್ಲಿ ಪಾರಿವಾಳಗಳನ್ನು ಸಾಕುವುದರಿಂದ ಧನಲಕ್ಷ್ಮಿಯ ಆಶೀರ್ವಾದ ಪ್ರಾಪ್ತವಾಗುತ್ತದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲದೆ, ಪಾರಿವಾಳಗಳಿಗೆ ಅಕ್ಕಿ ಕಾಳುಗಳನ್ನು ಹಾಕಿದರೆ, ಧನ ಸಂಪತ್ತು ಪ್ರಾಪ್ತವಾಗುತ್ತದೆ.   

ದೀಪಾವಳಿಯಲ್ಲಿ ಗೋಪೂಜೆಗೆ ಮಹತ್ವದ ಸ್ಥಾನವಿದೆ. ಈ ಸಂದರ್ಭಲ್ಲಿ ಗೋಪೂಜೆಗೆಂದು ಒಂದು ದಿನವನ್ನು ಮೀಸಲಿಟ್ಟು, ಆ ದಿನದಂದು ಗೋ ಮಾತೆಗೆ ಅಲಂಕಾರ, ಪೂಜೆ ಮಾಡಿ ಆಹಾರ ನೀಡುವುದು ಪದ್ಧತಿ. ಹೀಗೆ ಮಾಡಿದರೆ ಧನಲಕ್ಷ್ಮಿ ಸಂತೃಪ್ತಳಾಗಿ ಆಶೀರ್ವಾದ ಕರುಣಿಸುತ್ತಾಳೆ ಎಂಬುದು ನಂಬಿಕೆ.  

ಇದನ್ನೂ ಓದಿ: Dhanatrayodashi 2022: ಅಕ್ಟೋಬರ್ 22-23 ರಂದು ಈ ಚಿಕ್ಕ ಕೆಲಸ ಮಾಡಿ, ಧನ ಕುಬೇರ ಹಾಗೂ ಶನಿ ದೇವರ ಕೃಪೆಯಿಂದ ಭಾರಿ ಧನಲಾಭ

ಇನ್ನು ಅಕ್ವೇರಿಯಮ್​ಗಳಲ್ಲಿ ಅನೇಕರು ಮೀನುಗಳನ್ನು ಸಾಕುತ್ತಾರೆ. ಹೀಗೆ ಮನೆಯಲ್ಲಿ ಅಕ್ವೇರಿಯಂ ಇಟ್ಟರೆ ಸಕರಾತ್ಮಕ ಪ್ರಯೋಜನಗಳನ್ನು ನೀಡುತ್ತದೆ. ​ಅದರಲ್ಲೂ ಮೀನುಗಳಲ್ಲಿ ಗೋಲ್ಡನ್ ಫಿಶ್‌ ಮತ್ತು ಕಪ್ಪು ಮೀನುಗಳು ಒಳ್ಳೆಯದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News