Tuesday Tips: ಮಂಗಳವಾರದಂದು ಈ ಕೆಲಸಗಳನ್ನು ಮಾಡುವುದು ಅಶುಭ

Tuesday Tips: ಮಂಗಳವಾರ ಮತ್ತು ಶನಿವಾರದಂದು ಬಜರಂಗಬಲಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಕಷ್ಟಗಳೆಲ್ಲವೂ ದೂರವಾಗಿ ಹನುಮಂತನ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಮಂಗಳವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ತುಂಬಾ ಅಶುಭಕರ ಎಂದು ಪರಿಗಣಿಸಲಾಗಿದ್ದು ಇದರಿಂದ ಹನುಮಂತನು ಕೋಪಗೊಳ್ಳುತ್ತಾನೆ ಎನ್ನಲಾಗುವುದು. ಹಾಗಿದ್ದರೆ, ಮಂಗಳವಾರದಂದು ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿಯಿರಿ.

Written by - Yashaswini V | Last Updated : Nov 8, 2022, 08:38 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಕೆಲವು ದಿನಗಳಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ಅಶುಭಕರ ಎಂದು ಹೇಳಲಾಗಿದೆ.
  • ಅಂತೆಯೇ ಮಂಗಳವಾರವೂ ಸಹ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ.
  • ಮಂಗಳವಾರದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಹನುಮಂತನ ಕೋಪಕ್ಕೆ ಗುರಿಯಾಗಬಹುದು ಎಂತಲೂ ಹೇಳಲಾಗುತ್ತದೆ.
Tuesday Tips: ಮಂಗಳವಾರದಂದು ಈ ಕೆಲಸಗಳನ್ನು ಮಾಡುವುದು ಅಶುಭ title=
Tuesday Tips

Tuesday Tips: ಜ್ಯೋತಿಷ್ಯದಲ್ಲಿ, ಯಾವುದೇ ದೇವ-ದೇವತೆಯನ್ನು ಮೆಚ್ಚಿಸಲು ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ. ವ್ರತ, ಪೂಜೆಯ ಜೊತೆಗೆ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದಲೂ ದೇವರು ಬೇಗನೇ ಪ್ರಸನ್ನರಾಗಬಹುದು. ಇದರಿಂದ ಸಂತಸಗೊಂಡು ದೇವ-ದೇವತೆಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ಅದೇ ರೀತಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವಾರದ ಕೆಲವು ದಿನಗಳಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ಅಶುಭಕರ ಎಂದು ಹೇಳಲಾಗಿದೆ. ಅಂತೆಯೇ ಮಂಗಳವಾರವೂ ಸಹ ಕೆಲವು ಕೆಲಸಗಳನ್ನು ಮಾಡುವುದು ನಿಷಿದ್ಧ. ಮಂಗಳವಾರ ಮತ್ತು ಶನಿವಾರದಂದು ಬಜರಂಗಬಲಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸುವುದರಿಂದ ಕಷ್ಟಗಳೆಲ್ಲವೂ ದೂರವಾಗಿ ಹನುಮಂತನ ಆಶೀರ್ವಾದ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಮಂಗಳವಾರದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಹನುಮಂತನ ಕೋಪಕ್ಕೆ ಗುರಿಯಾಗಬಹುದು ಎಂತಲೂ ಹೇಳಲಾಗುತ್ತದೆ. ಹಾಗಿದ್ದರೆ, ಹನುಮಂತನ ಕೃಪೆಗೆ ಪಾತ್ರರಾಗಲು ಮಂಗಳವಾರದಂದು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ತಿಳಿಯಿರಿ. 

ಮಂಗಳವಾರದಂದು ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಲೇಬೇಡಿ:
ಶ್ರದ್ದೆಯಿಂದ, ಭಕ್ತಿ-ಭಾವದಿಂದ ನಿಯಮಾನುಸಾರ ಹನುಮಂತನನ್ನು ಪೂಜಿಸಿದರೂ ಪೂಜೆಯ ಫಲ ಸಿಗುತ್ತಿಲ್ಲ ಎಂದು ಕೆಲವರು ಹೇಳಿರುವುದನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣ ಪೂಜೆಯ ಕೊರತೆಯಲ್ಲ, ನೀವು ತಿಳಿಯದೆ ಮಾಡಿದ ತಪ್ಪುಗಳು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ತಪ್ಪಾಗಿ ಮಾಡುವ ಕೆಲವು ಕೆಲಸಗಳು ಸಹ ಅಶುಭ ಫಲಗಳನ್ನು ನೀಡಬಹುದು. ಹಾಗಾಗಿ ಆ ಕೆಲಸಗಳನ್ನು ಮಾಡದಂತೆ ಸಲಹೆ ನೀಡಲಾಗಿದೆ. 

* ಮಂಗಳವಾರದಂದು ಶೃಂಗಾರ ಸಾಮಾಗ್ರಿಗಳನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ವ್ಯಕ್ತಿಯ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಅದೇ ಸಮಯದಲ್ಲಿ, ಸೋಮವಾರ ಮತ್ತು ಶುಕ್ರವಾರದಂದು  ಶೃಂಗಾರ ಸಾಮಾಗ್ರಿಗಳನ್ನು ಖರೀದಿಸಲು ಮಂಗಳಕರವೆಂದು ಪರಿಗಣಿಸಲಾಗಿದೆ. ಆದ್ದರಿಂದ, ನೀವು ಶೃಂಗಾರ ಸಾಮಾಗ್ರಿಗಳನ್ನು ಖರೀದಿಸಲು ಹೊರಟಾಗ, ಆ ದಿನವನ್ನು ಖಂಡಿತವಾಗಿ ನೆನಪಿನಲ್ಲಿಡಿ. 

ಇದನ್ನೂ ಓದಿ- Lunar Eclipse 2022: ಮೇಷ ರಾಶಿಯಲ್ಲಿ ಚಂದ್ರಗಹಣ- ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ತಿಳಿಯಿರಿ

* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳವಾರ ಹವನ ಸಾಮಗ್ರಿ ಖರೀದಿಸಬೇಡಿ. ಇದನ್ನು ಮಾಡುವುದರಿಂದ, ವ್ಯಕ್ತಿಯು ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.

* ಮಂಗಳವಾರದಂದು ಹಾಲಿನಿಂದ ಮಾಡಿದ ಯಾವುದೇ ರೀತಿಯ ಸಿಹಿತಿಂಡಿಗಳನ್ನು ಖರೀದಿಸುವುದನ್ನು ತಡೆಯಬೇಕು ಎಂದು ನಂಬಲಾಗಿದೆ. ಬರ್ಫಿ, ಕಲಾಕಂಡ್, ರಾಬ್ರಿ ಇತ್ಯಾದಿಗಳನ್ನು ಖರೀದಿಸಬೇಡಿ. ಅದೇ ಸಮಯದಲ್ಲಿ, ಈ ದಿನ ಹಾಲಿನಿಂದ ಮಾಡಿದ ವಸ್ತುಗಳನ್ನು ಸಹ ದಾನ ಮಾಡಬೇಡಿ ಎಂದು ಹೇಳಲಾಗಿದೆ. ಈ ದಿನ ಹನುಮಾನ್ ಜಿಗೆ ಬೇಳೆ ಹಿಟ್ಟು ಮತ್ತು ಬೂಂದಿ ಇತ್ಯಾದಿಗಳ ಪ್ರಸಾದವನ್ನು ಅರ್ಪಿಸಿ. 

* ಮಂಗಳವಾರ ಮನೆಯಲ್ಲಿ ಕಬ್ಬಿಣದ ವಸ್ತುಗಳನ್ನು ಖರೀದಿಸಬೇಡಿ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಈ ದಿನ, ಚಾಕುಗಳು, ಉಗುರು ಕತ್ತರಿಸುವ ನೈಲ್ ಕಟರ್, ಕತ್ತರಿ ಮತ್ತು ವಾಹನಗಳು ಇತ್ಯಾದಿಗಳನ್ನು ಖರೀದಿಸುವುದನ್ನು ತಪ್ಪಿಸಿ. ಅಂತಹ ವಸ್ತುಗಳನ್ನು ಖರೀದಿಸುವುದು ವ್ಯಕ್ತಿಯನ್ನು ತೊಂದರೆಗೆ ಸಿಲುಕಿಸುತ್ತದೆ.   

ಇದನ್ನೂ ಓದಿ- ಭಾರತದ ಯಾವ ಪ್ರದೇಶಗಳಲ್ಲಿ ಗೋಚರಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ: ಇಲ್ಲಿದೆ ವಿಶೇಷ ಮಾಹಿತಿ

* ಈ ದಿನ ಹೊಸ ಬಟ್ಟೆಗಳನ್ನು ಧರಿಸುವುದನ್ನು ಸಹ ತಪ್ಪಿಸಬೇಕು. ನೀವು ಕೆಲವು ದಿನಗಳ ಮುಂಚಿತವಾಗಿ ಬಟ್ಟೆಗಳನ್ನು ಖರೀದಿಸಿದ್ದರೂ ಸಹ, ಅವುಗಳನ್ನು ಮಂಗಳವಾರದಂದು ಧರಿಸಬಾರದು. ನೀವು ಹೊಸ ಬಟ್ಟೆಗಳನ್ನು ಧರಿಸಲು ಬಯಸಿದರೆ, ಇದಕ್ಕೆ ಉತ್ತಮ ದಿನ ಗುರುವಾರ ಎಂದು ಹೇಳಲಾಗುತ್ತದೆ. 

* ಮಂಗಳವಾರದಂದು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಬೇಕು. ಅವುಗಳನ್ನು ಶನಿಯ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಈ ದಿನ ಕಪ್ಪು ಬಣ್ಣದ ಬಟ್ಟೆಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ದಿನ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಮಂಗಳದೋಷ ಕಡಿಮೆಯಾಗುತ್ತದೆ. ಇದಲ್ಲದೇ ಹಳದಿ ಬಣ್ಣದ ಬಟ್ಟೆಗಳನ್ನೂ ಧರಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News