Skin Care Tips: ಪ್ರತಿಯೊಬ್ಬರೂ ಕೂಡ ಸದಾ ಯಂಗ್ ಆಗಿ ಕಾಣಿಸಬೇಕು ಎಂದು ಬಯಸುತ್ತಾರೆ. ಆದರೆ, ಈ ಒತ್ತಡಭರಿತ ಜೀವನಶೈಲಿಯಿಂದಾಗಿ 40ವರ್ಷಕ್ಕಿಂತ ಮೊದಲೇ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಆದರೆ, ನಿಮ್ಮ ದೈನಂದಿನ ಜೀವನದಲ್ಲಿ ಎರಡೇ ಎರಡು ತರಕಾರಿಗಳನ್ನು ತಿನ್ನುವುದರಿಂದ ಮುಖದಲ್ಲಿರುವ ಸುಕ್ಕುಗಳನ್ನು ನಿವಾರಿಸಿ ಯಂಗ್ ಆದ ತ್ವಚೆಯನ್ನು ನಿಮ್ಮದಾಗಿಸಬಹುದು. ಅಂತಹ ಎರಡು ತರಕಾರಿಗಳೆಂದರೆ ಎಲೆಕೋಸು ಮತ್ತು ಹೂಕೋಸು.
ಸಾಮಾನ್ಯವಾಗಿ ನಮ್ಮಲ್ಲಿ ಬಹುತೇಕ ಮಂದಿ ಎಲೆಕೋಸು ಮತ್ತು ಹೂಕೋಸನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ, ಈ ಎರಡೂ ತರಕಾರಿಗಳು ಕೂಡ ಉತ್ತಮ ಸೌಂದರ್ಯವರ್ಧಕಗಳಾಗಿವೆ. ನಿಯಮಿತವಾಗಿ ಈ ಎರಡು ತರಕಾರಿಗಳನ್ನು ತಿನ್ನುವುದರಿಂದ ನಿಮ್ಮ ಮುಖದ ಮೇಲಿನ ಸುಕ್ಕುಗಳು (Wrinkles) ಕಡಿಮೆಯಾಗಿ ಚಿರ ಯೌವನವನ್ನು ಹೊಂದಬಹುದು.
ತ್ವಚೆಗೆ ಎಲೆಕೋಸು ಮತ್ತು ಹೂಕೋಸು ತಿನ್ನುವುದರ ಪ್ರಯೋಜನಗಳು:
ಎಲೆಕೋಸು ಮತ್ತು ಹೂಕೋಸು ಎರಡರಲ್ಲೂ ವಿಟಮಿನ್ ಎ, ವಿಟಮಿನ್ ಸಿ ಮತ್ತು ಸತುವು ಹೇರಳವಾಗಿ ಕಂಡು ಬರುತ್ತದೆ. ಈ ಪೋಷಕಾಂಶಗಳು .. ಹಾರ್ಮೋನುಗಳನ್ನು ಸಮತೋಲನದಲ್ಲಿಡುವಲ್ಲಿ ಸಹಕಾರಿಯಾಗಿರುವುದರ ಜೊತೆಗೆ ಚರ್ಮದ ಆರೋಗ್ಯವನ್ನು (Healthy Skin) ಸುಧಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ- ಮಾನ್ಸೂನ್ನಲ್ಲಿ ಎಣ್ಣೆಯುಕ್ತ ಚರ್ಮದಿಂದ ಪರಿಹಾರಕ್ಕಾಗಿ ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ!
ಇದಲ್ಲದೆ ಎಲೆಕೋಸು ಮತ್ತು ಹೂಕೋಸುಗಳಲ್ಲಿ ಗ್ಲುಟಾಥಿಯೋನ್ ಸಮೃದ್ಧವಾಗಿದೆ. ಇವುಗಳನ್ನು ತಿನ್ನುವುದರಿಂದ ನೈಸರ್ಗಿಕವಾಗಿ ನಮ್ಮ ಎಲ್-ಗ್ಲುಟಾಥಿಯೋನ್ ಶೇಕಡಾ 30 ರಷ್ಟು ಹೆಚ್ಚಾಗುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಮೊಡವೆ, ಪಿಗ್ಮೆಂಟೇಶನ್, ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಲೆಕೋಸು ಮತ್ತು ಹೂಕೋಸುಗಳಲ್ಲಿ ಲುಟೀನ್ ಸಮೃದ್ಧವಾಗಿದೆ. ಇದು ಒಣ ತ್ವಚೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಮುಖದ ಮೇಲಿನ ಸುಕ್ಕುಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಆಗಿದೆ.
ಇದನ್ನೂ ಓದಿ- ಶಾಂಪೂಗೆ ಈ ಮೂರನ್ನು ಬೆರೆಸಿ ಹಚ್ಚಿದರೆ ಸೊಂಪಾದ ದಪ್ಪ ಕಪ್ಪು ಕೂದಲು ಬೆಳೆಯುವುದು ಗ್ಯಾರಂಟಿ!
ಎಲೆಕೋಸು ಮತ್ತು ಹೂಕೋಸುಗಳಲ್ಲಿ ಸಲ್ಫೊರಾಫೇನ್ ಕೂಡ ಹೆರಳವಾಗಿದ್ದು ಇದು ಸೂರ್ಯನ ನೆರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸಹಾಯಕವಾಗಿದೆ. ಹಾಗಾಗಿ ನಮ್ಮ ದೈನಂದಿನ ಆಹಾರದಲ್ಲಿ ಎಲೆಕೋಸು ಮತ್ತು ಹೂಕೋಸುಗಳನ್ನು ಬಳಸುವುದರಿಂದ ಇದು ಆರೋಗ್ಯಕರ ಚರ್ಮವನ್ನು ಹೊಂದಲು, ಸುಕ್ಕುಗಳನ್ನು ನಿವಾರಿಸಿ ತ್ವಚೆ ಸದಾ ಯಂಗ್ ಆಗಿರುವಂತೆ ನೋಡಿಕೊಳ್ಳಲು ಸಹಾಯಕವಾಗಿದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.