Ketu Gochar 2022: ಈ 7 ರಾಶಿಗಳ ಜನರ ಜೀವನದಲ್ಲಿ ಕೇತು ಸಂಕಷ್ಟ ಎದುರಾಗಲಿದೆ, ನಿಮ್ಮ ರಾಶಿ ಇದೆಯಾ ಪರೀಕ್ಷಿಸಿ

Ketu Rashi Parivartan 2022 - ಜ್ಯೋತಿಷ್ಯಶಾಸ್ತ್ರದ (Astrology) ಪ್ರಕಾರ, ಪ್ರತಿಯೊಬ್ಬರ ಜೀವನದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿವೆ. ವಾಸ್ತವದಲ್ಲಿ, ಗ್ರಹಗಳ ಸ್ಥಿತಿಯು ಕೆಟ್ಟದಾಗಿದ್ದಾಗ ಶುಭ ಮತ್ತು ಅಶುಭ ಪರಿಣಾಮಗಳು ಕಂಡುಬರುತ್ತವೆ ಮತ್ತು ಅವುಗಳಿಂದಾಗಿ ವ್ಯಕ್ತಿಯ ಜೀವನದಲ್ಲಿ ಅನೇಕ ಏರಿಳಿತಗಳು ಕಂಡುಬರುತ್ತವೆ.   

Written by - Nitin Tabib | Last Updated : Feb 18, 2022, 05:15 PM IST
  • ವ್ಯರ್ಥ ಹಣ ಖರ್ಚಾಗಲಿದೆ.
  • ಚರ್ಮಕ್ಕೆ ಸಂಬಂಧಿಸಿದ ಕಾಯಿಲೆ ಎದುರಾಗಬಹುದು.
  • ದೈನಂದಿನ ಆದಾಯದ ಮೇಲೆ ಪ್ರಭಾವ ಉಂಟಾಗಬಹುದು.
Ketu Gochar 2022: ಈ 7 ರಾಶಿಗಳ ಜನರ ಜೀವನದಲ್ಲಿ ಕೇತು ಸಂಕಷ್ಟ ಎದುರಾಗಲಿದೆ, ನಿಮ್ಮ ರಾಶಿ ಇದೆಯಾ ಪರೀಕ್ಷಿಸಿ title=
Ketu Rashi Parivartan 2022 (File Photo)

ನವದೆಹಲಿ: Ketu Transit Effect On Zodiac - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳಿಗೆ ವಿಶೇಷ ಮಹತ್ವವಿದೆ. ವಾಸ್ತವದಲ್ಲಿ, ಗ್ರಹಗಳ ಸ್ಥಿತಿಯು ಕೆಟ್ಟದಾಗಿದ್ದಾಗ ಶುಭ ಮತ್ತು ಅಶುಭ ಪರಿಣಾಮಗಳು ಕಂಡುಬರುತ್ತವೆ. ಅದರಿಂದಾಗಿ ಜೀವನದಲ್ಲಿ ಅನೇಕ ಏರಿಳಿತಗಳು ಸಂಭವಿಸುತ್ತವೆ. ಜಾತಕದಲ್ಲಿ ಛಾಯಾ ಗ್ರಹ ಕೇತುವಿನ (Ketu Transit) ಕೆಟ್ಟ ಸ್ಥಾನದಿಂದಾಗಿ ಜೀವನದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಕೇತು ಏಪ್ರಿಲ್, 12, 2022 ರಂದು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ಕೇತುವಿನ ಈ ಸ್ಥಾನಪಲ್ಲಟ 7 ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರಬಹುದು. ಇಂತಹ ಪರಿಸ್ಥಿತಿಯಲ್ಲಿ, ಕೇತುವಿನ ರಾಶಿ ಪರಿವರ್ತನೆ (Ketu Rashi Parivartan Effect) ಯಾವ ರಾಶಿಗಳಿಗೆ ಅಶುಭವೆಂದು ಸಾಬೀತುಪಡಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ

ಮೇಷ ರಾಶಿ
ಕೇತುವಿನ ರಾಶಿಯ ಪರಿವರ್ತನೆ ಮೇಷ ರಾಶಿಯ ಜನರ ಜೀವನದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು. ಈ ಸಮಯದಲ್ಲಿ ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ, ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಗಳು ತಲೆದೂರಬಹುದು. ಈ ಕಾರಣದಿಂದಾಗಿ ವ್ಯಾಪಾರದಲ್ಲಿ ಹಣಕಾಸಿನ ಪರಿಸ್ಥಿತಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ.

ವೃಷಭ ರಾಶಿ
ಕೇತು ಸಂಕ್ರಮಣದ ಸಮಯದಲ್ಲಿ ನಿಮಗೆ ಮಾನಸಿಕ ಸಮಸ್ಯೆಗಳು ಎದುರಾಗಬಹುದು. ಅಲ್ಲದೆ, ಕೆಲವು ಚರ್ಮ ಸಂಬಂಧಿ ಸಮಸ್ಯೆಗಳು ಕಾಡಬಹುದು. ವಾಹನ ಚಲಾವಣೆಯ ವೇಳೆ ಜಾಗ್ರತೆವಹಿಸಿ. ಅಂತಹ ಪರಿಸ್ಥಿತಿಯಲ್ಲಿ, ರಸ್ತೆ ದಾಟುವಾಗ ಅಥವಾ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಬೇಕು.

ಸಿಂಹ ರಾಶಿ
ಕೇತು ಸ್ಥಾನಪಲ್ಲಟ ಅವಧಿಯಲ್ಲಿ ಮಾನಸಿಕ ನೆಮ್ಮದಿ ಕೆಡಬಹುದು. ಕೆಲವು ವಿಷಯಗಳಲ್ಲಿ ಕುಟುಂಬ ಸದಸ್ಯರೊಂದಿಗೆ ವಾಗ್ವಾದ ಮತ್ತು ಜಗಳಗಳು ಉಂಟಾಗಬಹುದು. ಈ ಸಮಯದಲ್ಲಿ, ಯಾವುದೇ ರೀತಿಯ ಹಣಕಾಸಿನ ಹೂಡಿಕೆಯನ್ನು ತಪ್ಪಿಸಿ, ಇಲ್ಲದಿದ್ದರೆ ನಷ್ಟವಾಗಬಹುದು.

ತುಲಾ ರಾಶಿ
ಕೇತು ಗೋಚರ ಸಮಯದಲ್ಲಿ ನಿಮಗೆ ನಿಮ್ಮನ್ನು ನೀವು ಕಳೆದುಕೊಂಡ ರೀತಿ ಭಾಸವಾಗಬಹುದು. ಕೌಟುಂಬಿಕ ವಿಷಯಗಳ ಬಗ್ಗೆ ಕಾಳಜಿ ವಹಿಸಿ. ಸಂಕ್ರಮಣ ಅವಧಿಯಲ್ಲಿ ಹೊಸದನ್ನು ಮಾಡುವುದು ಮಂಗಳಕರವೆಂದು ಸಾಬೀತುಪಡಿಸುವುದಿಲ್ಲ. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿಯಲ್ಲಿ ಅಡೆತಡೆಗಳು ಉಂಟಾಗುತ್ತವೆ.

ವೃಶ್ಚಿಕ ರಾಶಿ
ಕಠಿಣ ಪರಿಶ್ರಮದ ಹೊರತಾಗಿಯೂ, ಕೇತು ಸಂಕ್ರಮಣದ ಅವಧಿಯಲ್ಲಿ ನಿಮಗೆ ಯಶಸ್ಸು ಪಡೆಯುವಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಈ ಸಮಯವು ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿಲ್ಲ. ವಿದ್ಯಾರ್ಥಿಗಳಿಗೆ ವಿಷಯವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಕುಟುಂಬದಲ್ಲಿ ಕಲಹ ಉಂಟಾಗಬಹುದು.

ಇದನ್ನೂ ಓದಿ-ಈ ವಿಷಯದಲ್ಲಿ ನೀವು ಮಾಡುವ ಒಂದು ಸಣ್ಣ ತಪ್ಪು ಜೀವನಪೂರ್ತಿ ನೋವು ನೀಡಬಹುದು

ಧನು ರಾಶಿ
ಧನು ರಾಶಿಯವರು ಕೇತು ಸಂಕ್ರಮಣದ ಸಮಯದಲ್ಲಿ ಅನವಶ್ಯಕವಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಇದರಿಂದ ದುಂದು ವೆಚ್ಚ ಹೆಚ್ಚಾಗುತ್ತದೆ. ದೈನಂದಿನ ಆದಾಯದ ಮೇಲೆ ಪರಿಣಾಮ ಬೀರಬಹುದು. ಹಣವು ವ್ಯವಹಾರದಲ್ಲಿ ಸಿಲುಕಿಕೊಳ್ಳಬಹುದು.

ಇದನ್ನೂ ಓದಿ-Vastu Tips: ನಿಮ್ಮ ಮನೆ-ಕಚೇರಿ ಟೇಬಲ್‌ನಲ್ಲಿ ಈ ವಸ್ತುಗಳನ್ನು ಎಂದಿಗೂ ಇಡಬೇಡಿ

ಮೀನ ರಾಶಿ
ಉದ್ಯೋಗ ವೃತ್ತಿಯಲ್ಲಿ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ನಿಮ್ಮನ್ನು ನೀವು ಸಾಬೀತುಪಡಿಸಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಕೇತು ಸಂಕ್ರಮಣದ ಅವಧಿಯಲ್ಲಿ ಚರ್ಮ ರೋಗಗಳು ನಿಮ್ಮನ್ನು ಕಾಡಬಹುದು.

ಇದನ್ನೂ ಓದಿ-ಸದಾ ಬಂಗಾರ ಧರಿಸುವುದು ಈ ನಾಲ್ಕು ರಾಶಿಯವರಿಗೆ ಅದೃಷ್ಟವಂತೆ ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News