ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿಯೊಂದು ಗ್ರಹವು ನಿರ್ದಿಷ್ಟ ಸಮಯದ ನಂತರ ರಾಶಿಯನ್ನು ಬದಲಾಯಿಸುತ್ತದೆ. ಈ ಗ್ರಹಗಳ ಸಂಕ್ರಮಣವು ಶುಭ ಮತ್ತು ಅಶುಭ ಯೋಗಗಳನ್ನು ಸಹ ಸೃಷ್ಟಿಸುತ್ತದೆ. ಈ ಯೋಗಗಳ ಪರಿಣಾಮ ಎಲ್ಲಾ 12 ರಾಶಿಯವರ ಮೇಲೆ ಕಾಣಿಸಿಕೊಳ್ಳುತ್ತದೆ. ನವೆಂಬರ್ 11 ರಂದು, ಶುಕ್ರ ಗ್ರಹವು ವೃಶ್ಚಿಕ ರಾಶಿಯನ್ನು ಪ್ರವೇಶಿಸಲಿದೆ. ಇದಾದ ಎರಡು ದಿನಗಳ ನಂತರ ಅಂದರೆ ನವೆಂಬರ್ 13ರಂದು ಬುಧ ಗ್ರಹ ಕೂಡಾ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಿದೆ. ಈ ರೀತಿಯಾಗಿ ವೃಶ್ಚಿಕ ರಾಶಿಯಲ್ಲಿ ಬುಧ ಮತ್ತು ಶುಕ್ರರ ಸಂಯೋಗವು ಲಕ್ಷ್ಮೀ ನಾರಾಯಣ ಯೋಗವನ್ನು ಸೃಷ್ಟಿ ಮಾಡುತ್ತದೆ. ಬುಧ-ಶುಕ್ರ ಸಂಯೋಗವು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ಈ ಲಕ್ಷ್ಮೀ ನಾರಾಯಣ ರಾಜ ಯೋಗವು 3 ರಾಶಿಯ ಜನರಿಗೆ ಮಂಗಳಕರ ಫಲಿತಾಂಶಗಳನ್ನು ನೀಡುತ್ತದೆ. ಈ 3 ರಾಶಿಯವರಿಗೆ ಶುಕ್ರ ಅಪಾರ ಸಂಪತ್ತು ಕರುಣಿಸಲಿದ್ದಾನೆ.
ತುಲಾ ರಾಶಿ : ಬುಧ-ಶುಕ್ರರ ಸಂಯೋಗದಿಂದ ರೂಪುಗೊಂಡ ಲಕ್ಷ್ಮೀ ನಾರಾಯಣ ರಾಜಯೋಗವು ತುಲಾ ರಾಶಿಯವರಿಗೆ ಶುಭ ಫಲ ನೀಡಲಿದೆ. ಈ ರಾಶಿಯವರು ಅಪಾರ ಪ್ರಮಾಣದ ಹಣವನ್ನು ಗಳಿಸುವುದು ಸಾಧ್ಯವಾಗುತ್ತದೆ. ಅವರ ಆದಾಯ ಹೆಚ್ಚಲಿದೆ. ಇದ್ದಕ್ಕಿದ್ದಂತೆ ಹಣದ ಹೊಳೆಯೇ ಹರಿದು ಬರಲಿದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ.
ಇದನ್ನೂ ಓದಿ : ಭಾರತದಲ್ಲಿ ಮೊದಲು ಚಂದ್ರಗ್ರಹಣ ಕಾಣಿಸಿಕೊಳ್ಳುವುದು ಈ ನಗರದಲ್ಲಿ.! ನಿಮ್ಮ ಮೇಲಾಗುವ ಗ್ರಹಣ ಪರಿಣಾಮ ಏನು ?
ಮಕರ ರಾಶಿ : ಲಕ್ಷ್ಮೀ ನಾರಾಯಣ ರಾಜಯೋಗವು ಶುಕ್ರ ಸಂಕ್ರಮಣ ಮತ್ತು ಬುಧ ಸಂಕ್ರಮಣದಿಂದ ರಚನೆಯಾಗುವುದರಿಂದ ಮಕರ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಅವರ ಆದಾಯದಲ್ಲಿ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಬಹುದು. ಉದ್ಯೋಗಿಗಳ ವೇತನ ಹೆಚ್ಚಾಗಬಹುದು. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಷೇರು ಮಾರುಕಟ್ಟೆ, ಲಾಟರಿಯಿಂದಲೂ ಹಣ ಗಳಿಸಬಹುದು.
ಕುಂಭ ರಾಶಿ : ನವೆಂಬರ್ನಲ್ಲಿ ಶುಕ್ರ ಸಂಕ್ರಮಣ ಮತ್ತು ಬುಧ ಸಂಕ್ರಮಣದಿಂದ ರೂಪುಗೊಳ್ಳುವ ಲಕ್ಷ್ಮೀ ನಾರಾಯಣ ಯೋಗವು ಕುಂಭ ರಾಶಿಯವರಿಗೆ ಬಹಳ ಮಂಗಳಕರವಾಗಿರಲಿದೆ. ಅವರು ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ಪಡೆಯುತ್ತಾರೆ. ಆದಾಯ ಹೆಚ್ಚಾಗುತ್ತದೆ. ಹಣಕಾಸಿನ ಲಾಭದಿಂದಾಗಿ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯುವ ಅವಕಾಶಗಳಿವೆ. ಮನೆ ಅಥವಾ ಕಾರು ಖರೀದಿಸಬಹುದು. ಸಂಸಾರದಲ್ಲಿ ನೆಮ್ಮದಿ ಹೆಚ್ಚಾಗಲಿದೆ.
ಇದನ್ನೂ ಓದಿ : Chandra Grahan 2022: ಚಂದ್ರಗ್ರಹಣದಂದು ವಿನಾಶಕಾರಿ ಷಡಾಷ್ಟಕ ಯೋಗ.. ತಪ್ಪದೇ ಈ ಪರಿಹಾರ ಮಾಡಿಕೊಳ್ಳಿ
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.