Lunar Eclipse 2021: 580 ವರ್ಷಗಳ ಬಳಿಕ ಸಂಭವಿಸಲಿದೆ ಇಂಥಹ ಚಂದ್ರಗ್ರಹಣ, ಇಲ್ಲಿ ವೀಕ್ಷಿಸಬಹುದು Live Streaming

19 ನವೆಂಬರ್ 2021 ರಂದು ಸಂಭವಿಸುವ ಚಂದ್ರಗ್ರಹಣವು ಶತಮಾನದ ಅತಿದೊಡ್ಡ ಚಂದ್ರಗ್ರಹಣ ಎನ್ನಲಾಗಿದೆ. 

Written by - Ranjitha R K | Last Updated : Nov 18, 2021, 01:43 PM IST
  • ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 19 ರಂದು ಸಂಭವಿಸಲಿದೆ.
  • 580 ವರ್ಷಗಳ ನಂತರ ಇಂಥಹ ಚಂದ್ರಗ್ರಹಣ ಸಂಭವಿಸಲಿದೆ.
  • ಇದು ಶತಮಾನದ ಅತಿ ದೊಡ್ಡ ಚಂದ್ರಗ್ರಹಣ ಎಂದು ನಂಬಲಾಗಿದೆ.
Lunar Eclipse 2021: 580 ವರ್ಷಗಳ ಬಳಿಕ ಸಂಭವಿಸಲಿದೆ ಇಂಥಹ ಚಂದ್ರಗ್ರಹಣ, ಇಲ್ಲಿ ವೀಕ್ಷಿಸಬಹುದು Live Streaming title=
ವರ್ಷದ ಕೊನೆಯ ಚಂದ್ರಗ್ರಹಣ ನವೆಂಬರ್ 19 ರಂದು ಸಂಭವಿಸಲಿದೆ. (file photo)

ನವದೆಹಲಿ : Chandra Grahan 2021 Live Streaming: ನಾಳೆ ಅಂದರೆ ನವೆಂಬರ್ 19 ರಂದು, ವರ್ಷದ ಕೊನೆಯ ಚಂದ್ರಗ್ರಹಣ (Lunar Eclipse 2021) ಸಂಭವಿಸಲಿದೆ. ಈ ಚಂದ್ರಗ್ರಹಣವು ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಸಂಭವಿಸಲಿದೆ. ಅಂದರೆ ಕಾರ್ತಿಕ ಹುಣ್ಣಿಮೆಯ (Kartika Poornima) ದಿನ.  ಕಾರ್ತಿಕ ಮಾಸವು ಈ ದಿನದಂದೇ ಕೊನೆಗೊಳ್ಳುತ್ತದೆ. 580 ವರ್ಷಗಳ ನಂತರ ಇಂತಹ ಚಂದ್ರಗ್ರಹಣ ಸಂಭವಿಸಲಿದೆ. ಇದು ಶತಮಾನದ ಅತಿ ದೊಡ್ಡ ಚಂದ್ರಗ್ರಹಣ ಎನ್ನಲಾಗಿದೆ. ಕಳೆದ 580 ವರ್ಷಗಳ ನಂತರ ಸಂಭವಿಸುವ ಸುದೀರ್ಘ ಭಾಗಶಃ ಚಂದ್ರಗ್ರಹಣ ಇದಾಗಿರಲಿದೆ.  

ಶತಮಾನದ ಅತಿ ದೊಡ್ಡ ಚಂದ್ರಗ್ರಹಣ :
19 ನವೆಂಬರ್ 2021 ರಂದು ಸಂಭವಿಸುವ ಚಂದ್ರಗ್ರಹಣವು (Chandragrahan) ಶತಮಾನದ ಅತಿದೊಡ್ಡ ಚಂದ್ರಗ್ರಹಣ ಎನ್ನಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11.34ಕ್ಕೆ ಗ್ರಹಣ ಆರಂಭವಾಗಲಿದ್ದು, ಸಂಜೆ 5:33 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಒಟ್ಟು ಅವಧಿ 5 ಗಂಟೆ 59 ನಿಮಿಷಗಳವರೆಗೆ ಇರಲಿದೆ. ಗ್ರಹಣದ ಅವಧಿ ಸುಮಾರು ಮೂರೂವರೆ ಗಂಟೆಗಳಿರುತ್ತದೆ. ಭಾರತದಲ್ಲಿ ಈ ಚಂದ್ರಗ್ರಹಣವು ಮಧ್ಯಾಹ್ನ 12:48 ರಿಂದ 04:17 ನಿಮಿಷಗಳವರೆಗೆ ಇರುತ್ತದೆ.

ಇದನ್ನೂ ಓದಿ : ಹೊಸ ವರ್ಷದಲ್ಲಿ ಈ ನಾಲ್ಕು ರಾಶಿಯವರಿಗೆ ಶನಿಕಾಟ ಇಲ್ಲ

ಚಂದ್ರಗ್ರಹಣ 2021 ಲೈವ್ ಸ್ಟ್ರೀಮಿಂಗ್ :
ನೀವು ಚಂದ್ರಗ್ರಹಣವನ್ನು ಲೈವ್ (Lunar eclipse live)ಆಗಿ ವೀಕ್ಷಿಸಲು ಬಯಸುವುದಾದರೆ, ಅನೇಕ ಯೂಟ್ಯೂಬ್ ಚಾನೆಲ್‌ಗಳು (Youtube channel) ಅದನ್ನು ನೇರ ಪ್ರಸಾರ ಮಾಡುತ್ತವೆ. lifecience.com ಮತ್ತು timeanddate.com ನಲ್ಲಿ  ಚಂದ್ರಗ್ರಹಣವನ್ನು ಲೈವ್ ಆಗಿ ವೀಕ್ಷಿಸಬಹುದು.

ಇದನ್ನೂ ಓದಿ : Prayers Before Meal : ಊಟದ ತಟ್ಟೆ ನಿಮ್ಮ ಎದುರಿಗೆ ಬರುತ್ತಿದ್ದಂತೆ ತಪ್ಪದೆ ಈ ಕೆಲಸ ಮಾಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News