ಮುಂದಿನ 20 ದಿನಗಳವರೆಗೆ ಈ ಮೂರು ರಾಶಿಯವರ ಮೇಲೆ ಕೃಪೆ ತೋರಲಿದ್ದಾನೆ ಮಂಗಳ

Mangal Transit In Aries 2022: ಮಂಗಳ ಗ್ರಹವು ಜೂನ್ 27 ರಂದು ಮೇಷ ರಾಶಿಯನ್ನು ಪ್ರವೇಶಿಸಿದೆ. ಆಗಸ್ಟ್ 10 ರವರೆಗೆ ಇದೇ ರಾಶಿಯಲ್ಲಿ ಇರಲಿದೆ. ಈ ಸಮಯ ಮೂರು ರಾಶಿಯ ಜನರಿಗೆ ಮಂಗಳಕರವಾಗಿರಲಿದೆ.  

Written by - Ranjitha R K | Last Updated : Jul 21, 2022, 09:25 AM IST
  • ಮೂರು ರಾಶಿಯವರಿಗೆ ಶುಭ
  • ಅದೃಷ್ಟ ನೀಡಲಿದ್ದಾನೆ ಮಂಗಳ
  • ಪ್ರತಿ ಕೆಲಸದಲ್ಲಿಯೂ ಸಿಗಲಿದೆ ಯಶಸ್ಸು
 ಮುಂದಿನ 20 ದಿನಗಳವರೆಗೆ  ಈ ಮೂರು  ರಾಶಿಯವರ ಮೇಲೆ ಕೃಪೆ ತೋರಲಿದ್ದಾನೆ ಮಂಗಳ   title=
Mangal Transit In Aries 2022 (file photo)

ಬೆಂಗಳೂರು : Mangal Transit In Aries 2022 : ಜ್ಯೋತಿಷ್ಯದಲ್ಲಿ, ಪ್ರತಿ ಗ್ರಹದ ರಾಶಿ ಬದಲಾವಣೆಯ ಸಮಯವನ್ನು ಹೇಳಲಾಗಿದೆ. ಅದರಂತೆಯೇ ಮಂಗಳ ಗ್ರಹವು ಒಂದು ನಿರ್ದಿಷ್ಟ ಸಮಯದ ನಂತರ ರಾಶಿಯನ್ನು ಬದಲಾಯಿಸುತ್ತಲೇ ಇರುತ್ತದೆ. ಭೂಮಿ, ಮದುವೆ, ಧೈರ್ಯದ ಅಂಶವಾದ ಮಂಗಳ ಪ್ರಸ್ತುತ ಮೇಷ ರಾಶಿಯಲ್ಲಿದೆ. ಮಂಗಳ ಗ್ರಹವು ಜೂನ್ 27 ರಂದು ಮೇಷ ರಾಶಿಯನ್ನು ಪ್ರವೇಶಿಸಿದೆ. ಆಗಸ್ಟ್ 10 ರವರೆಗೆ ಇದೇ ರಾಶಿಯಲ್ಲಿ ಇರಲಿದೆ. ಈ ಸಮಯ ಮೂರು ರಾಶಿಯ ಜನರಿಗೆ ಮಂಗಳಕರವಾಗಿರಲಿದೆ.  

ಈ ಮೂರು ರಾಶಿಯವರ ಮೇಲೆ ಕೃಪೆ ತೋರಲಿದ್ದಾನೆ ಮಂಗಳ :
ಮಿಥುನ : ಮಿಥುನ ರಾಶಿಯವರಿಗೆ  ಈ ಸಮಯ ಉತ್ತಮವಾಗಿರಲಿದೆ.  ಮುಂದಿನ ದಿನಗಳಲ್ಲಿ ಮಿಥುನ ರಾಶಿಯವರ ಆದಾಯ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಧನ ಲಾಭವಾಗಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಪ್ರತಿ ಕೆಲಸಗಳಲ್ಲಿಯೂ ಸಂಗಾತಿಯ ಬೆಂಬಲ ಸಿಗಲಿದೆ. 

ಇದನ್ನೂ ಓದಿ : Vastu Plant: ಮನೆಯ ಈ ದಿಕ್ಕಿನಲ್ಲಿ ನೆಡಿ ಈ ಅದ್ಭುತ ಸಸ್ಯ, ಹಣಕಾಸಿನ ಮುಗ್ಗಟ್ಟೆ ಇರಲ್ಲ, ಜೀವನ ಸುಖಮಯವಾಗುತ್ತದೆ

ಕರ್ಕಾಟಕ: ಮೇಷ ರಾಶಿಯಲ್ಲಿರುವ ಮಂಗಳ ಗ್ರಹವು ಕರ್ಕಾಟಕ ರಾಶಿಯವರಿಗೆ ತುಂಬಾ ಫಲಕಾರಿಯಾಗಿದೆ. ಇವರು ವೃತ್ತಿಯಲ್ಲಿ ಪ್ರಗತಿ ಸಾಧಿಸುತ್ತಾರೆ. ಹೊಸ ಉದ್ಯೋಗದ ಆಫರ್ ಬರಬಹುದು. ಉದ್ಯೋಗ ಬದಲಾವಣೆ, ಬಯಸಿದ ಸ್ಥಳಕ್ಕೆ ವರ್ಗಾವಣೆಯಾಗುವ ಸಂಪೂರ್ಣ ಅವಕಾಶಗಳಿವೆ. ಪ್ರಮೋಷನ್-ಇನ್ಕ್ರಿಮೆಂಟ್ ಕೂಡ ಆಗಬಹುದು. 

ಸಿಂಹ : ಸಿಂಹ ರಾಶಿಯವರಿಗೂ ಮಂಗಳನು ಲಾಭವನ್ನು ನೀಡುತ್ತಾನೆ. ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ವಿದೇಶದಿಂದ ಲಾಭವಾಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಇಲ್ಲಿಯವರೆಗೆ ನಿಂತು ಹೋಗಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಒಟ್ಟಿನಲ್ಲಿ ಈ ಸಮಯ ಉತ್ತಮವಾಗಿರುತ್ತದೆ. 

ಇದನ್ನೂ ಓದಿ : ಯಾವ ಕಣ್ಣಿನ ರೆಪ್ಪೆ ಬಡಿದುಕೊಂಡರೆ ಒಳ್ಳೆಯದು? ಇದರ ಹಿಂದಿದೆ ಗೂಢಾರ್ಥ!

 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News