ನವದೆಹಲಿ : brain boosting food : ಈ ಪೈಪೋಟಿಯ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ನೆನಪಿನ ಶಕ್ತಿ ಚೆನ್ನಾಗಿರಬೇಕು ಮತ್ತು ಮನಸ್ಸು ಚುರುಕಾಗಿರಬೇಕು ಎಂದು ಬಯಸುತ್ತಾರೆ. ಜ್ಞಾಪಕ ಶಕ್ತಿ (Food for memory) ಚೆನ್ನಾಗಿದ್ದರೆ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರುತ್ತವೆ. ಉತ್ತಮ ಜ್ಞಾಪಕ ಶಕ್ತಿಗಾಗಿ ಕೆಲವೊಂದು ವಸ್ತುಗಳನ್ನು ನಿತ್ಯ ಸೇವಿಸುತ್ತಿರಬೇಕು.
ಆಹಾರ ತಜ್ಞ ಡಾ.ರಂಜನಾ ಸಿಂಗ್ ಅವರ ಪ್ರಕಾರ, ವಿಶೇಷವಾಗಿ ಹಸಿರು ಎಲೆಗಳ ತರಕಾರಿಗಳು (green vegetables) ಮೆದುಳನ್ನು ಆರೋಗ್ಯವಾಗಿರಿಸುತ್ತವೆ. ಬೀಜಗಳು, ದ್ವಿದಳ ಧಾನ್ಯಗಳಾದ ಬೀನ್ಸ್ ಮತ್ತು ಬೇಳೆ ಕಾಳುಗಳು ಸಹ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೆದುಳಿಗೆ ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ. ಯಾಕೆಂದರೆ ಅದು ದೇಹದ ಕ್ಯಾಲೊರಿಗಳನ್ನು ಬಳಸುತ್ತದೆ. ಮಾನಸಿಕ ಆರೋಗ್ಯವನ್ನು ಹೆಚ್ಚಿಸಲು, ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರ ಜೊತೆಗೆ ಸಾಲ್ಮನ್‌ನಂತಹ ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.
ಇದನ್ನೂ ಓದಿ : Fasting: ಕೇವಲ 8 ಗಂಟೆಗಳಲ್ಲಿ ಎಲ್ಲವನ್ನೂ ತಿನ್ನುವ ಮೂಲಕ ನೀವು ತೂಕವನ್ನು ಕಳೆದುಕೊಳ್ಳಬಹುದೇ? ತಜ್ಞರ ಅಭಿಪ್ರಾಯ ತಿಳಿಯಿರಿ
ನೆನಪಿನ ಶಕ್ತಿ ಹೆಚ್ಚಿಸುವ ಸೂಪರ್ ಫುಡ್ :
1. ಉತ್ತಮ ಸ್ಮರಣೆಗಾಗಿ ವಾಲ್‌ನಟ್ಸ್ ಸೇವಿಸಿ
ವಾಲ್‌ನಟ್ಸ್ (benefits of walnut) ಉತ್ತಮ ಪೋಷಕಾಂಶ-ಭರಿತ ಆಹಾರವಾಗಿದೆ. ಇದು ಮೆದುಳಿಗೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ವಾಲ್‌ನಟ್ಸ್ ಆಲ್ಫಾ-ಲಿನೋಲೆನಿಕ್ ಆಮ್ಲ, ಪಾಲಿಫಿನಾಲಿಕ್ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ. ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ಪಾಲಿಫಿನಾಲ್‌ಗಳು ಮೆದುಳಿನ ಆರೋಗ್ಯಕ್ಕೆ ಅವಶ್ಯಕ ಆಹಾರ ಎನ್ನಲಾಗಿದೆ.
2. ಉತ್ತಮ ಜ್ಞಾಪಕಶಕ್ತಿಗಾಗಿ ಬಾದಾಮಿಯನ್ನು ಸೇವಿಸಿ:
ಬಾದಾಮಿ (Almond) ಮೆದುಳಿನಲ್ಲಿ ಅಸೆಟೈಲ್ಕೋಲೈನ್ ಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ವಿಟಮಿನ್ ಬಿ 6, ಇ, ಸತು, ಅದರಲ್ಲಿ ಕಂಡುಬರುವ ಪ್ರೋಟೀನ್‌ಗಳಿಂದಾಗಿ, ಉತ್ತಮ ಜ್ಞಾಪಕಶಕ್ತಿಯನ್ನು ಪಡೆಯಬಹುದು.
3. ಉತ್ತಮ ಸ್ಮರಣೆಗಾಗಿ ಅಗಸೆಬೀಜದ ಕುಂಬಳಕಾಯಿ ಬೀಜಗಳನ್ನು ಸೇವಿಸಿ:
ಕುಂಬಳಕಾಯಿ ಮತ್ತು ಅಗಸೆ ಬೀಜಗಳು ಮೆದುಳಿನ ಆರೋಗ್ಯಕ್ಕೆ ಅತ್ಯುತ್ತಮವಾಗಿವೆ. ಈ ಬೀಜಗಳಲ್ಲಿರುವ ಸತು, ಮೆಗ್ನೀಸಿಯಮ್, ವಿಟಮಿನ್ ಬಿ ಇದ್ದು ಆಲೋಚನಾ ಸಾಮರ್ಥ್ಯವನ್ನು ವೃದ್ಧಿಪಡಿಸುತ್ತದೆ, ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Winter Tips: ಚಳಿಗಾಲದಲ್ಲಿ ದುಬಾರಿಯಾಗಿ ಪರಿಣಮಿಸಬಹುದು ಬಿಸಿನೀರಿನ ಸ್ನಾನ, ಈ 10 ಸಂಗತಿಗಳನ್ನು ನೆನಪಿಡಿ
4.ಗೋಡಂಬಿ ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ :
ಗೋಡಂಬಿ (benefits of cashew) ಜ್ಞಾಪಕಶಕ್ತಿಯನ್ನು ಹೆಚ್ಚಿಸುತ್ತದೆ. ಪಾಲಿ-ಸ್ಯಾಚುರೇಟೆಡ್ ಮತ್ತು ಮೊನೊ-ಸ್ಯಾಚುರೇಟೆಡ್ ಕೊಬ್ಬುಗಳು ಮಿದುಳಿನ ಕೋಶಗಳ ಉತ್ಪಾದನೆಗೆ ಬಹಳ ಮುಖ್ಯವಾಗುತ್ತವೆ ಮತ್ತು ಹೀಗಾಗಿ ಅದರ ಶಕ್ತಿಯನ್ನು ಹೆಚ್ಚಿಸುತ್ತವೆ.
5 ಬ್ರೊಕೊಲಿ :
ಬ್ರೊಕೊಲಿ ಮೆದುಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಒಮೆಗಾ-3 ಕೊಬ್ಬಿನಾಮ್ಲಗಳು, ಫ್ಲೇವನಾಯ್ಡ್ಗಳು, ವಿಟಮಿನ್-ಇ, ಕಬ್ಬಿಣ ಮತ್ತು ತಾಮ್ರದಂತಹ ಪೋಷಕಾಂಶಗಳು ಬ್ರೊಕೊಲಿಯಲ್ಲಿ ಕಂಡುಬರುತ್ತವೆ. ಈ ಪೋಷಕಾಂಶಗಳು ಮೆದುಳನ್ನು ಚುರುಕುಗೊಳಿಸಲು ಮತ್ತು ಅದರ ದಕ್ಷತೆಯನ್ನು ಹೆಚ್ಚಿಸಲು ಬಹಳ ಸಹಾಯಕವಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ