Job Remedy: ಈ ದಿನ ಹೊಸ ಕೆಲಸಕ್ಕೆ ಸೇರಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ

Job Remedy: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಹೊಸ ಉದ್ಯೋಗಕ್ಕೆ ಸೇರಲು ಹೋದರೆ ಅಥವಾ ನೀವು ಬಡ್ತಿ ಪಡೆದಿದ್ದರೆ ಮತ್ತು ನೀವು ಹೊಸ ಕುರ್ಚಿಯ ಮೇಲೆ ಕುಳಿತುಕೊಳ್ಳಲು ಹೊರಟಿದ್ದರೆ, ಈ ದಿನವು ವಿಶೇಷ ಮಹತ್ವವನ್ನು ಹೊಂದಿದೆ. ಹೊಸ ಉದ್ಯೋಗಕ್ಕೆ ಸೇರಲು ಯಾವ ದಿನ ಉತ್ತಮ ಎಂದು ತಿಳಿಯೋಣ. 

Written by - Yashaswini V | Last Updated : May 11, 2022, 09:50 AM IST
  • ಆಫರ್ ಲೆಟರ್ ಕೈಗೆ ಬಂತೆಂದರೆ ಮನಸ್ಸು ಆಗಸದಲ್ಲಿ ತೇಲುತ್ತದೆ
  • ನೀವು ಉದ್ಯೋಗದಲ್ಲಿ ದೀರ್ಘಕಾಲದವರೆಗೆ ಮುಂದುವರೆಯಲು ಬಯಸಿದರೆ, ಅಂತಹ ಸನ್ನಿವೇಶದಲ್ಲಿ ಈ ದಿನ ಶುಭ
  • ಶಿಕ್ಷಣ, ಕಾನೂನು, ನ್ಯಾಯಾಲಯ, ಧಾರ್ಮಿಕ ಸಂಸ್ಥೆಗಳು, ಟ್ರಸ್ಟ್‌ಗಳು ಇತ್ಯಾದಿಗಳಿಗೆ ಸೇರಲು ಗುರುವಾರ ಮಂಗಳಕರ ದಿನ
Job Remedy: ಈ ದಿನ ಹೊಸ ಕೆಲಸಕ್ಕೆ ಸೇರಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ title=
Job Remedies

ಉದ್ಯೋಗಕ್ಕಾಗಿ ಜ್ಯೋತಿಷ್ಯ ಉಪಾಯ : ಬಯಸಿದ ಕೆಲಸ, ಹೊಸ ಉದ್ಯೋಗ ದೊರೆತಾಗ ಆಗುವ ಸಂತೋಷವನ್ನು ಬಣ್ಣಿಸಲು ಸಾಧ್ಯವಿಲ್ಲ. ಆಫರ್ ಲೆಟರ್ ಕೈಗೆ ಬಂತೆಂದರೆ ಮನಸ್ಸು ಆಗಸದಲ್ಲಿ ತೇಲುತ್ತದೆ. ಇದರೊಂದಿಗೆ ಕೆಲಸಕ್ಕೆ ಸೇರುವ ತಯಾರಿ ಕೂಡ ಶುರುವಾಗುತ್ತದೆ. ಹಲವರು ಒಂದು ಕೆಲಸ ಬಿಟ್ಟು ಬೇರೆ ಕಡೆಗೆ ಹೋಗುತ್ತಾರೆ, ಇನ್ನು ಕೆಲವರು ಅದೇ ಕಚೇರಿಯಲ್ಲಿ ಬಡ್ತಿ ಪಡೆಯುತ್ತಾರೆ. ಈ ಶುಭ ಸಂದರ್ಭದಲ್ಲಿ ಕೆಲಸಕ್ಕೆ ಹೋಗುವಾಗ ಶುಭ ದಿನ, ಮುಹೂರ್ತ ನೋಡುವವರು ಬಹಳ ವಿರಳ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಳ್ಳೆಯ ದಿನ ಕೆಲಸಕ್ಕೆ ಸೇರುವುದರಿಂದ ನಾವು ಮಾಡುವ ಕೆಲಸದಲ್ಲಿ ಅಭಿವೃದ್ಧಿ ಹೊಂದಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಹೊಸ ಕೆಲಸಕ್ಕೆ ಹೋಗಲು ಯಾವ ದಿನ  ಮತ್ತು ಯಾವ ಸಮಯ ಶುಭ ಎಂದು ತಿಲಿಯೋಣ...

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅದು ಹೊಸ ಕೆಲಸವಾಗಲಿ ಅಥವಾ ವರ್ಗಾವಣೆ ಆಗಲಿ ಅಥವಾ ನೀವು ಅದೇ ಕಚೇರಿಯಲ್ಲಿ ಬಡ್ತಿ ಪಡೆದಾಗಲೂ ಆ ಸ್ಥಾನದಲ್ಲಿ ಯಾವಾಗ ಕುಳಿತುಕೊಳ್ಳಬೇಕು. ಹೊಸ ಕೆಲಸವನ್ನು ಯಾವಾಗ ಆರಂಭಸಬೇಕು ಎಂಬುದನ್ನು ತಿಳಿದಿರುವುದು ಬಹಳ ಮುಖ್ಯ. ಹೊಸ ಕೆಲಸ ಆರಂಭಿಸಲು ದಿನಕ್ಕೆ ವಿಶೇಷ ಮಹತ್ವವಿದೆ. ಇದರ ಜೊತೆಗೆ ರಾಹು ಕಾಲದ ಬಗ್ಗೆಯೂ ವಿಶೇಷ ಗಮನಹರಿಸಬೇಕು.

ಹೊಸ ಕೆಲಸಕ್ಕೆ ಸೇರುವುದು ಸ್ಥಿರತೆಗೆ ಸಂಬಂಧಿಸಿದೆ:
ಹಲವು ಸಂದರ್ಭಗಳಲ್ಲಿ ನಾವು ಮನಸ್ಸಿಲ್ಲದಿದ್ದರೂ ಯಾವುದಾದರೊಂದು ಅನಿವಾರ್ಯ ಪರಿಸ್ಥಿತಿಯಿಂದಾಗಿ ಮನಸ್ಸಿಲ್ಲದ ಕೆಲಸಕ್ಕೆ ಸೇರಬೇಕಾಗುತ್ತದೆ. ಹಲವು ಬಾರಿ ನಮ್ಮ ಅನುಕೂಲಕ್ಕೆ ತಕ್ಕಂತೆ ವರ್ಗಾವಣೆ ಸಿಗದೇ ಯಾವುದಾದರೊಂದು ಕಾರಣಕ್ಕೆ ವರ್ಗಾವಣೆ ಆಗಬಹುದು. ಇಂತಹ ಎಲ್ಲಾ ಪರಿಸ್ಥಿತಿಗಳಲ್ಲಿ ಒಳ್ಳೆಯ ಮುಹೂರ್ತ ನೋಡಿ ನಿಮ್ಮ ಕೆಲಸ ಆರಂಭಿಸುವುದರಿಂದ ಸ್ಥಿರತೆ ಮೂಡುತ್ತದೆ ಎಂಬುದು ನಂಬಿಕೆ.

ಇದನ್ನೂ ಓದಿ- Budh Vakri 2022: ಇಂದಿನಿಂದ ಈ ರಾಶಿಯವರಿಗೆ ಒಳ್ಳೆಯ ದಿನಗಳು ಪ್ರಾರಂಭ

ಉದ್ಯೋಗವನ್ನು ದೀರ್ಘಕಾಲದವರೆಗೆ ಮುಂದುವರೆಸಲು ಶನಿವಾರ ಉತ್ತಮ ಆಯ್ಕೆ:
ನೀವು ಉದ್ಯೋಗದಲ್ಲಿ ದೀರ್ಘಕಾಲದವರೆಗೆ ಮುಂದುವರೆಯಲು ಬಯಸಿದರೆ, ಅಂತಹ ಸನ್ನಿವೇಶದಲ್ಲಿ ಶನಿವಾರದಂದು ಹೊಸ ಕೆಲಸಕ್ಕೆ ಕೈ ಹಾಕುವುದು ಉತ್ತಮ. ಶನಿವಾರದಂದು ಕೆಲಸಕ್ಕೆ ಸೇರುವುದರಿಂದ ದೀರ್ಘಾವಧಿಯ ಸ್ಥಿರತೆಯನ್ನು ಒದಗಿಸುತ್ತದೆ. ನೀವು ಶನಿವಾರದಂದು ಯಾವುದೇ ರೀತಿಯ ಕೆಲಸವನ್ನು ಆರಂಭಿಸಲು ಶುಭ ದಿನ ಎನ್ನಲಾಗುತ್ತದೆ. 

ಬೃಹಸ್ಪತಿ ದಿನ ಅಂದರೆ ಗುರುವಾರ ಕೆಲಸಕ್ಕೆ ಸೇರಲು ಎರಡನೇ ಆಯ್ಕೆ:
ಕೆಲವು ಕಾರಣಗಳಿಂದ ನೀವು ಶನಿವಾರ ಕೆಲಸಕ್ಕೆ ಸೇರಲು ಸಾಧ್ಯವಾಗದಿದ್ದರೆ, ಎರಡನೇ ಆಯ್ಕೆಯು ಬೃಹಸ್ಪತಿ ದಿನ ಅಂದರೆ ಗುರುವಾರ ಆಗಿರುತ್ತದೆ. ಶಿಕ್ಷಣ, ಕಾನೂನು, ನ್ಯಾಯಾಲಯ, ಧಾರ್ಮಿಕ ಸಂಸ್ಥೆಗಳು, ಟ್ರಸ್ಟ್‌ಗಳು ಇತ್ಯಾದಿಗಳಿಗೆ ಸೇರಲು ಗುರುವಾರ ಮಂಗಳಕರ ದಿನ. ಆದರೆ ಒಂದು ವಿಷಯವನ್ನು ನೆನಪಿನಲ್ಲಿಡಿ, ಅಬಕಾರಿ ಇಲಾಖೆ, ತೆರಿಗೆ ಮತ್ತು ಕಂದಾಯ ಸಂಬಂಧಿತ ಇಲಾಖೆಗಳ ಸೇರ್ಪಡೆಯನ್ನು ಶನಿವಾರವೇ ಮಾಡಬೇಕು ಮತ್ತು ಗುರುವಾರ ಅಲ್ಲ.    

ಮಂಗಳವಾರವೂ ಪರವಾಗಿಲ್ಲ:
ಒಂದೊಮ್ಮೆ ನಿಮಗೆ ಶನಿವಾರ ಮತ್ತು ಗುರುವಾರ ಹೊಸ ಕೆಲಸಗಳನ್ನು ಆರಂಭಿಸಲು ಏನಾದರೂ ತೊಡಕಿದ್ದರೆ,  ಅಂತಹವರು ಮಂಗಳವಾರವನ್ನು ಆಯ್ಕೆ ಮಾಡಬಹುದು. ವಿಶೇಷವಾಗಿ ಮಿಲಿಟರಿ, ಕಂದಾಯ, ವೈದ್ಯಕೀಯ, ಎಲೆಕ್ಟ್ರಿಕಲ್, ಆಹಾರ ವಿಭಾಗಗಳು ಮತ್ತು ಎಲ್ಲಾ ತಾಂತ್ರಿಕ ವಿಭಾಗಗಳಲ್ಲಿ, ಮಂಗಳವಾರ ಕೆಲಸಕ್ಕೆ ಸೇರುವುದನ್ನು ಶುಭ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Name Astrology: ಈ ಹೆಸರಿನ ಹುಡುಗಿಯರು ತಮ್ಮ ಜೊತೆಗೆ ಅದೃಷ್ಟವನ್ನೂ ಹೊತ್ತು ತರುತ್ತಾರೆ

ಈ ವಿಷಯಗಳನ್ನು ನೆನಪಿನಲ್ಲಿಡಿ:
ಶನಿವಾರ, ಗುರುವಾರ ಮತ್ತು ಮಂಗಳವಾರದ ಜೊತೆಗೆ ಪಂಚಮಿ, ದಶಮಿ ದಿನಗಳನ್ನೂ ಸಹ ಹೊಸ ಕೆಲಸ ಆರಂಭಿಸಲು ಶುಭ ದಿನ ಎಂದು ಪರಿಗಣಿಸಲಾಗಿದೆ.

ನೀವು ಕೆಲಸದಲ್ಲಿ ಸ್ಥಿರತೆ ಬಯಸದಿದ್ದರೆ, ನೀವು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸೇರಬೇಕು. ಈ ದಿನಗಳಲ್ಲಿ ಪಂಚಮಿ, ದಶಮಿ ಅಥವಾ ಪೂರ್ಣಿಮಾ ತಿಥಿಗಳು ಇರಬಾರದು ಎಂದು ನೆನಪಿನಲ್ಲಿಡಬೇಕು.  

ನಿಮಗೆ ದಿನ ಮತ್ತು ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದ್ದರೆ ನೂತನ ಉದ್ಯೋಗಕ್ಕಾಗಿ ಅಭಿಜಿತ್ ಮುಹೂರ್ತವನ್ನು ಆಯ್ಕೆ ಮಾಡುವುದು ಉತ್ತಮ. ಆದರೆ ಬುಧವಾರದಂದು ಅಭಿಜಿತ್ ಮುಹೂರ್ತವನ್ನು ಪರಿಗಣಿಸಬಾರದು ಎಂಬುದನ್ನು ನೆನಪಿನಲ್ಲಿಡಿ.   

ಕೆಲಸಕ್ಕೆ ಭಾನುವಾರ ಕೂಡ ಅತ್ಯಂತ ಮಂಗಳಕರ ದಿನವಾಗಿದೆ, ಇದು ಸಾರ್ವಜನಿಕ ರಜಾದಿನವಾಗಿರುವುದರಿಂದ, ಈ ದಿನ ಪ್ರಾಯೋಗಿಕವಾಗಿ ಸೇರಲು ಸಾಧ್ಯವಿಲ್ಲ.  ಆದರೆ, ಅವಕಾಶ ಇದ್ದವರು ಭಾನುವಾರವೂ  ಹೊಸ ಕೆಲಸವನ್ನು ಆರಂಭಿಸಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News